ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿ ಜೀವನಕ್ಕೆ ಮೊಬೈಲ್ ಮಾಹಿತಿ

Last Updated 17 ಅಕ್ಟೋಬರ್ 2012, 5:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೈತರು, ಮೀನುಗಾರರು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ವಿವಿಧ ಮಾಹಿತಿಗಳನ್ನು ನೀಡುವುದಕ್ಕಾಗಿ ಏರ್‌ಟೆಲ್ ಕಂಪೆನಿ, ಹ್ಯಾಂಡಿಗೋ ಟೆಕ್ನಾಲಜೀಸ್ ಸಹಯೋಗದಲ್ಲಿ ಜಾರಿಗೆ ತಂದಿರುವ `ನೆಮ್ಮದಿ ಜೀವನ~ ಯೋಜನೆಗೆ ನಗರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಪ್ರಚಾರ ವಾಹನಕ್ಕೆ `ಹಸಿರು ನಿಶಾನೆ~ ತೋರಿಸುವ ಮೂಲಕ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಬಿ.ಎ.ಪದ್ಮನಯನ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಂಪೆನಿಯ ಕರ್ನಾಟಕದ ಮುಖ್ಯ ನಿರ್ವಹಣಾ ಅಧಿಕಾರಿ ಸೌರಭ್ ಗೋಯೆಲ್, ಪ್ರಚಾರ ವಾಹನಗಳಲ್ಲಿ ಪ್ರತಿ ಹಳ್ಳಿಗೆ ಹೋಗುವ ಪ್ರತಿನಿಧಿಗಳು ರೈತರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿ ಬಳಸುವ ವಿಧಾನವನ್ನು ಹೇಳಿಕೊಡಲಿದ್ದಾರೆ ಎಂದು ತಿಳಿಸಿದರು.

`ನೆಮ್ಮದಿ ಜೀವನ~ದಲ್ಲಿ ಉಚಿತವಾಗಿ 556780ಗೆ ಕರೆ ಮಾಡಿ ಚಂದಾದಾರಾಗಬಹುದು. ಬೆಳೆ, ಶಿಕ್ಷಣ, ಮೀನುಗಾರಿಕೆ, ಆರೋಗ್ಯ, ಹವಾಮಾನ, ಮಾರುಕಟ್ಟೆ, ಆರ್ಥಿಕ ಹಾಗೂ ಪಶುಪಾಲನೆಗೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಖಚಿತ ಹಾಗೂ ಸದ್ಯದ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ವಿವಿಧ ಇಲಾಖೆ, ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ~ ಎಂದು ಅವರು ತಿಳಿಸಿದರು. `ಏರ್‌ಟೆಲ್‌ಗೆ ದೇಶದಲ್ಲಿ 20 ಕೋಟಿ ಗ್ರಾಹಕರಿದ್ದಾರೆ. ಕರ್ನಾಟಕದ ಗ್ರಾಹಕರ ಸಂಖ್ಯೆ 1.7 ಕೋಟಿ ಇದ್ದು ಇದರ 9 ಶೇಕಡಾ ಮಂದಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿದ್ದಾರೆ~ ಎಂದು ಅವರು ತಿಳಿಸಿದರು. ಹ್ಯಾಂಡಿಗೋ ಟೆಕ್ನಾಲಜೀಸ್‌ನ ಸುಧಾಂಶು, ಏರ್‌ಟೆಲ್‌ನ ರಮಾನಂದ, ಶರತ್ ತೇಜಸ್ವಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT