ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿಯ ಜೀವನಕ್ಕೆ ಸ್ವಾತಂತ್ರ್ಯ ಬಹುಮುಖ್ಯ

Last Updated 24 ಜೂನ್ 2011, 19:30 IST
ಅಕ್ಷರ ಗಾತ್ರ

ಹೇರಳವಾದ ಸಂಪತ್ತು ಇದ್ದ ಮಾತ್ರಕ್ಕೆ ಜೀವನ ಸಂತೋಷದಾಯಕವಾಗಿರುತ್ತದೆ ಎನ್ನುವುದು ಕೆಲವರ ಭ್ರಮೆ.  ನೆಮ್ಮದಿಯ ಜೀವನಕ್ಕೆ ಶ್ರೀಮಂತಿಕೆಗಿಂತಲೂ ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯ ಬಹುಮುಖ್ಯ ಎಂದು ನೂತನ ಸಂಶೋಧನೆಯೊಂದು ಹೇಳಿದೆ.
|
ಈ ವಿಷಯ ಕುರಿತಂತೆ ನ್ಯೂಜಿಲೆಂಡ್‌ನ ವೆಲ್ಲಿಗ್ಟನ್‌ನಲ್ಲಿರುವ ವಿಕ್ಟೋರಿಯಾ      ವಿಶ್ವವಿದ್ಯಾಲಯದ ಸಂಶೋಧಕರು ಮೂರು ಪ್ರತ್ಯೇಕ ಅಧ್ಯಯನ ಕೈಗೊಂಡಿದ್ದರು. ಇದರಲ್ಲಿ 63 ದೇಶಗಳ 420,000 ಕ್ಕೂ ಹೆಚ್ಚು ಮಂದಿಯನ್ನು ಸಮೀಕ್ಷೆಗೊಳಪಡಿಸಲಾಗಿತ್ತು. `ಹಣವು ಸ್ವಾಯತ್ತತೆಗೆ ಕಾರಣವಾಗುತ್ತದೆಯೇ ವಿನಾ ಸಂತೋಷ ಅಥವಾ ನೆಮ್ಮದಿಯನ್ನು ನೀಡುವುದಿಲ್ಲ~ ಎನ್ನುವುದು ಸಂಶೋಧನೆಯಲ್ಲಿ ಕಂಡುಕೊಂಡ ಸತ್ಯ.
 
ಈ ಸಂಶೋಧನೆಯ ಭಾಗವಾಗಿ ವ್ಯಕ್ತಿಗಳನ್ನು ಮೂರು ವಿಭಿನ್ನ ಬಗೆಯ ಮಾನಸಿಕ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. ಖಿನ್ನತೆ, ನಿದ್ರಾಹೀನತೆ, ಸಾಮಾಜಿಕ ತೊಂದರೆಗಳು, ಮಾನಸಿಕ ಒತ್ತಡದಿಂದಾಗಿ ಬರುವ ತಲೆನೋವು ಹಾಗೂ ಹೊಟ್ಟೆನೋವು...ಇತ್ಯಾದಿ ಅಂಶಗಳನ್ನು ಈ ಸಂದರ್ಭದಲ್ಲಿ ಗುರುತಿಸಲಾಗಿತ್ತು.

 `ನೆಮ್ಮದಿ, ಶಾಂತಿ, ಸಂತೋಷ ಇರುವುದು ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯದಲ್ಲಿಯೇ ಹೊರತೂ ಶ್ರೀಮಂತಿಕೆಯಲ್ಲಿ ಅಲ್ಲ ಎಂಬುದು ಅಧ್ಯಯನದಿಂದ ಸಾಬೀತಾಯಿತು~ ಎನ್ನುತ್ತಾರೆ ಮನಃಶಾಸ್ತ್ರಜ್ಞರಾದ ರೊನಾಲ್ಡ್ ಪಿಶರ್ ಹಾಗೂ ಡಯಾನಾ ಬೋರ್.
 (ನ್ಯೂಯಾರ್ಕ್ ಟೈಮ್ಸ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT