ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರಳಿಂದಾಚೆ ಬೆಳೆದ ಜಾಕಿ ಮಗ

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಜಾಕಿ ಶ್ರಾಫ್ ಕಂಗಳಲ್ಲೆಗ ಹೆಮ್ಮೆ ತುಂಬಿ ತುಳುಕುತ್ತಿದೆ. ಅದು ತಮ್ಮ ಮಗನ ಬಗ್ಗೆ. ಟೈಗರ್ ಶ್ರಾಫ್ ಬಗ್ಗೆ. `ಟೈಗರ್ ಬೆಳೆದು ನಿಂತಿದ್ದಾನೆ. ಕೇವಲ ವಯಸ್ಸಿನಿಂದಲ್ಲ, ನನ್ನ ನೆರಳಿನಿಂದಾಚೆ ಬೆಳೆದು ನಿಂತಿದ್ದಾನೆ~ ಎಂದು ಮೆಚ್ಚುಗೆಯ ಮಾತನ್ನಾಡಿದ್ದಾರೆ ಜಾಕಿ.
`ಟೈಗರ್ ಒಬ್ಬ ಕ್ರೀಡಾಪಟು. ಆತನಿಗೆ ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಇದೆ.

ವೇಗವಾಗಿ ತೀರ್ಮಾನ ತೆಗೆದುಕೊಳ್ಳುವುದೂ ಅವನಿಗೆ ಗೊತ್ತು. ಸಂತೋಷದ ಸಂಗತಿ ಎಂದತೆ ಸ್ವಂತದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾನೆ. ಅಪ್ಪನ ನೆರಳಿನಲ್ಲಿ ಬದುಕುತ್ತಿಲ್ಲ. ಜಾಕಿ ಹಾಗೂ ಟೈಗರ್ ಇಬ್ಬರನ್ನೂ ಹೋಲಿಸಲಾಗದು.

ನಮ್ಮಿಬ್ಬರ ಪರಿಸ್ಥಿತಿಗಳೂ ಭಿನ್ನವಾಗಿವೆ. ಜಾಕಿ ಹೋರಾಡುವುದು ಅತ್ಯಗತ್ಯವಾಗಿತ್ತು. ಆದರೆ ಟೈಗರ್ ವೃತ್ತಿನಿರತನಂತೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾನೆ. ಅವನ್ನು ಕಾರ್ಯರೂಪಕ್ಕೆ ತರುತ್ತಾನೆ. ಅವನ ಮ್ಯಾನೇಜರ್‌ನೊಂದಿಗೆ ಚರ್ಚಿಸುತ್ತಾನೆ. ಇದೆಲ್ಲವೂ ನನಗೆ ಖುಷಿ ನೀಡಿದೆ~ ಎನ್ನುತ್ತಾರೆ ಜಾಕಿ.

ಈ ಕಾಲದ ಮಕ್ಕಳೆಲ್ಲರೂ ಜಾಣರು. ಅವರಲ್ಲಿ ಶಿಸ್ತಿದೆ. ತಮ್ಮ ವೃತ್ತಿಯನ್ನು ನಿಭಾಯಿಸುವ ಜಾಣ್ಮೆ ಇದೆ. ಟೈಗರ್ ಸಹ ಇದಕ್ಕೆ ಹೊರತಾಗಿಲ್ಲ. ಎಷ್ಟೋ ಸಲ ಅಪ್ಪನಿಗೂ ಸಲಹೆ ನೀಡುವಷ್ಟು ಪ್ರೌಢತೆಯಿಂದ ಮಾತನಾಡುತ್ತಾನೆ ಎಂದು ತಮ್ಮ ಮೆಚ್ಚುಗೆಯ ಪಟ್ಟಿಯನ್ನು ಉದ್ದಕ್ಕೆ ಬಿಚ್ಚಿಡುತ್ತಲೇ ಹೋಗುತ್ತಾರೆ ಜಾಕಿ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT