ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿನ ಹಾದಿ

Last Updated 3 ಡಿಸೆಂಬರ್ 2013, 6:19 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು ಶೇ 3ರಷ್ಟು ಹಣವನ್ನು ಅಂಗವಿಕಲರಿಗೆ ಮೀಸಲಿಟ್ಟು ಸೌಲಭ್ಯಗಳನ್ನು ನೀಡಬೇಕು. ಅಲ್ಲದೆ ಅಂಗವಿಕಲರ ಕಲ್ಯಾಣ ಇಲಾಖೆ ಮೂಲಕ ಸರ್ಕಾರ ಅಂಗವಿಕಲರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.
ಅವುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ...

*ಆಧಾರ ಯೋಜನೆ
ಅಂಗವಿಕಲರು ಸಬಲರಾಗಲು ಸಹಾಯವಾಗುವಂತೆ ಸ್ವ ಉದ್ಯೋಗ ಮಾಡಲು ರೂ. 35 ಸಾವಿರ ಧನ ಸಹಾಯ   ನೀಡಲಾಗುತ್ತದೆ. ಇದರಲ್ಲಿ ರೂ. 15 ಸಾವಿರ ಮೌಲ್ಯದ ಪೆಟ್ಟಿಗೆ ಮತ್ತು ರೂ. 20 ಸಾವಿರ ಮೂಲ ಬಂಡವಾಳವಾಗಿರುತ್ತದೆ.

*ರಿಯಾಯಿತಿ ಬಸ್‌ ಪಾಸ್‌
ಎಲ್ಲಾ ಅಂಗವಿಕಲರಿಗೆ ಶೇ 85ರ ರಿಯಾಯಿತಿ   ದರದಲ್ಲಿ ಬಸ್‌ ಪಾಸ್‌ ನೀಡಲಾಗುತ್ತದೆ.   ಉಳಿದ ಶೇ 15ರಷ್ಟನ್ನು ಅಂಗವಿಕಲರು   ಭರಿಸಬೇಕು. 100 ಕಿ.ಮೀ. ಮಿತಿಯಲ್ಲಿ   ಸಂಚರಿಸಬಹುದು.

*ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹ ಧನ
1ನೇ ತರಗತಿಯಿಂದ ಸ್ನಾತಕೋತ್ತರ    ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ಎಲ್ಲಾ  ಅಂಗವಿಕಲರಿಗೂ ವಾರ್ಷಿಕ ವಿದ್ಯಾರ್ಥಿ ವೇತನ   ನೀಡಲಾಗುತ್ತದೆ. ಅಲ್ಲದೆ ಶೇ 60ಕ್ಕಿಂತ ಹೆಚ್ಚು   ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಪ್ರತಿಭಾ  ಪ್ರೋತ್ಸಾಹ ಧನ ನೀಡಲಾಗುತ್ತದೆ.

*ಸಾಧನ ಸಲಕರಣೆ ವಿತರಣೆ
ತ್ರಿಚಕ್ರ ವಾಹನ, ವೀಲ್‌ಚೇರ್‌, ಶ್ರವಣ   ಸಾಧನ, ವಾಕಿಂಗ್‌ಸ್ಟಿಕ್‌, ಕ್ರಚರ್ಸ್‌, ಬ್ರೈಲ್‌   ವಾಚ್‌, ಮೋಟಾರ್‌ ಅಳವಡಿಸಿದ ಸೈಕಲ್‌   ಮುಂತಾದ ಸಲಕರಣೆಗಳನ್ನು ನೀಡಲಾಗುತ್ತದೆ.

*ಸ್ಪೂರ್ತಿ ಸ್ವಸಹಾಯ ಯೋಜನೆ
ಸ್ಪೂರ್ತಿ ಸ್ವಸಹಾಯ ಸಂಘ ಯೋಜನೆಯಡಿ   ಅಂಗವಿಕಲರ ಸಂಘಗಳಿಗೆ ಸುತ್ತುನಿಧಿ ನೀಡಲಾಗುತ್ತದೆ. ಅಲ್ಲದೆ ಅಂಗವಿಕಲರು   ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ   ಸೌಲಭ್ಯ ಒದಗಿಸುವ ಅವಕಾಶವಿದೆ.

*ವಿಶೇಷ ಶಾಲೆಗಳು
ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಅಂಗವಿಕಲರಿಗೆ ಅನುಕೂಲವಾಗುವಂತೆ ಶಾಲೆಗಳನ್ನು ನಡೆಸಿದರೆ ಅನುದಾನ    ನೀಡಲಾಗುತ್ತದೆ. ನಗರದಲ್ಲಿ ಬುದ್ಧಿಮಾಂಧ್ಯ   ಮಕ್ಕಳ ಶಾಲೆ, ಶ್ರವಣ ದೋಷ ಮತ್ತು ಮೂಕ  ಮಕ್ಕಳ ಶಾಲೆ, ಅಂಧ ಮಕ್ಕಳ ಶಾಲೆಗಳನ್ನು   ನಡೆಸಲಾಗುತ್ತಿದೆ. ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಸಿದ್ದಗಂಗಾ   ಅಂಧಮಕ್ಕಳ ಶಾಲೆ, ನವಚೇತನ ಅಂಧಮಕ್ಕಳ    ಶಾಲೆ (ಕುಣಿಗಲ್‌) ನಡೆಸಲಾಗುತ್ತಿದೆ.

*ಗ್ರಾಮೀಣ ಪುನರ್ವಸತಿ
ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ   ಮಟ್ಟದಲ್ಲಿ ಒಬ್ಬ ಮತ್ತು ತಾಲ್ಲೂಕು   ಮಟ್ಟದಲ್ಲಿ ಒಬ್ಬರನ್ನು ಗ್ರಾಮೀಣ ಪುನರ್ವಸತಿ   ಕಾರ್ಯಕರ್ತರನ್ನು ನೇಮಕ    ಮಾಡಿಕೊಳ್ಳಲಾಗಿದೆ. ಗ್ರಾಮ ಮಟ್ಟದಲ್ಲಿ   ರೂ. 1500 ಮತ್ತು ತಾಲ್ಲೂಕು ಮಟ್ಟದಲ್ಲಿ   ರೂ. * ಸಾವಿರ ಗೌರವ ಧನ    ನೀಡಲಾಗುತ್ತದೆ. ಅಂಗವಿಕಲರ ಮಾಹಿತಿ   ಮತ್ತು ಸೌಲಭ್ಯ ತಲುಪಿಸಲು ಈ    ಕಾರ್ಯಕರ್ತರನ್ನು ಬಳಕೆ ಮಾಡಲಾಗುತ್ತದೆ.

*ವೈದ್ಯಕೀಯ ಪರಿಹಾರ
ಅಂಗವಿಕಲರು ಆರೋಗ್ಯ ಶಸ್ತ್ರಚಿಕಿತ್ಸೆಗೆ   ಒಳಗಾದರೆ ಗರಿಷ್ಠ ರೂ. 35 ಸಾವಿರ   ಪರಿಹಾರ ಭತ್ಯೆ ನೀಡಲಾಗುತ್ತದೆ.

*ಹೆರಿಗೆ ಭತ್ಯೆ
ದೃಷ್ಟಿದೋಷವುಳ್ಳ ಮಹಿಳೆಗೆ ಹೆರಿಗೆ ಆದರೆ   ರೂ. 2 ಸಾವಿರ ಹೆರಿಗೆ ಭತ್ಯೆ ನೀಡಲಾಗುತ್ತದೆ.  ಅಲ್ಲದೆ ಅಂಗವಿಕಲ ಮಗು ಜನಿಸಿದರೆ,   ಮಗುವಿನ ಪೋಷಣೆಗೆ ಮಾಸಿಕ ರೂ. 200   ಭತ್ಯೆ ನೀಡಲಾಗುತ್ತದೆ.

*ಅಂಗವಿಕಲರ ಗುರುತಿನ ಚೀಟಿ
ಅಂಗವಿಕಲರನ್ನು ಗುರುತಿಸಿ ಸೌಲಭ್ಯ ನೀಡಲು   ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ   ಗುರುತಿನ ಚೀಟಿ ನೀಡಲಾಗುತ್ತದೆ.

*ವಸತಿ ನಿಲಯ
ಅಂಗವಿಕಲ ವಿದ್ಯಾರ್ಥಿನಿಯರು ಮತ್ತು   ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ   ಸೌಲಭ್ಯ ಕಲ್ಪಿಸಲು ಅವಕಾಶವಿದೆ.

*ವೃದ್ಧಾಶ್ರಮ
65 ವರ್ಷ ಮೇಲ್ಪಟ್ಟ ಅನಾಥ ವೃದ್ಧರಿಗೆ   ವೃದ್ಧಾಶ್ರಮದ ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ   ಮೂರು ವೃದ್ಧಾಶ್ರಮಗಳು ಕಾರ್ಯ    ನಿರ್ವಹಿಸುತ್ತಿವೆ. ಪಾವಗಡದಲ್ಲಿ ಸರ್ವಧರ್ಮ   ಶರಣಾಲಯ, ಮಧುಗಿರಿಯಲ್ಲಿ ಗಣಪತಿ   ಸಾಯಿ ವೃದ್ಧಾಶ್ರಮ ಮತ್ತು ಮಧುಗಿರಿ   ತಾಲ್ಲೂಕು ಕಾಟಗೊಂಡನಹಳ್ಳಿಯಲ್ಲಿ   ವೃದ್ಧಾಶ್ರಮವಿದೆ.

*ವಿವಾಹ ಪ್ರೋತ್ಸಾಹ ಧನ
ಅಂಗವಿಕಲರನ್ನು ಮದುವೆಯಾಗುವರನ್ನು   ಪ್ರೋತ್ಸಾಹಿಸುವ ಸಲುವಾಗಿ ರೂ. 50 ಸಾವಿರ  ವಿವಾಹ ಪ್ರೋತ್ಸಾಹ ಧನ ನೀಡಲಾಗುತ್ತಿದೆ.

*ವಿಮಾ ಸೌಲಭ್ಯ
ಅಂಗವಿಕಲರು ಒಮ್ಮೆ ರೂ. 250 ವಿಮಾ   ವಂತಿಗೆ ಪಾವತಿಸಿ ನೋಂದಣಿ ಮಾಡಿದರೆ,   ಜೀವನ ಪೂರ್ತಿ ವಿಮಾ ಸೌಲಭ್ಯ    ದೊರೆಯುತ್ತದೆ. ಅಪಘಾತ ಅಥವಾ   ಅವಘಡಕ್ಕೆ ಒಳಗಾಗಿ ಸಾವನ್ನಪ್ಪಿದರೆ ₨ 1 ಲಕ್ಷ ವಿಮೆ ಹಣ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT