ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರಿಗೆ ಕಾರ್ಯಾಗಾರ

Last Updated 17 ನವೆಂಬರ್ 2011, 8:20 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನೇಕಾರರು ಹೊಸ ತಾಂತ್ರಿಕತೆ ಅಳವಡಿಸಿಕೊಂಡು, ಆಧುನಿಕ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ವಿನ್ಯಾಸವುಳ್ಳ ಉತ್ಪನ್ನ ಗಳನ್ನು ಸಿದ್ದಪಡಿಸಲು ಮುಂದಾಗ ಬೇಕು, ಕೈಮಗ್ಗ ಕಡಿಮೆ ಮಾಡಿ ವಿದ್ಯುತ್ ಮಗ್ಗಗಳನ್ನು ಬ್ಯಾಂಕಿನ ಸಹಾಯದಿಂದ (ಸಬ್ಸಿಡಿ) ಸಾಲ ಪಡೆದು ಉಪಯೋಗಿಸಬೇಕೆಂದು  ಜಿಪಂ ಅಧ್ಯಕ್ಷ ಮಂಜುನಾಥ ಎಚ್. ಓಲೇಕಾರ ಹೇಳಿದರು.

ನಗರದ ಸಾಲೇಶ್ವರ ಕಲ್ಯಾನ ಮಂಟಪದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಪಂ ಆಶ್ರಯದಲ್ಲಿ ಸುವರ್ಣ ವಸ್ತ್ರ ನೀತಿ 2008-13 ಯೋಜನೆ ಯಡಿ ಜವಳಿ ಉದ್ದಿಮೆದಾರರಿಗೆ ಏರ್ಪ ಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಸಿ ಅವರು ಮಾತನಾಡಿದರು.

ಜವಳಿ ಮತ್ತು ಉಡುಪುಗಳ ವಲಯ ಗಳನ್ನು ಪ್ರೋತ್ಸಾಹಿಸಿ, ಅಭಿವೃದ್ಧಿ ಪಡಿಸುವ ಸಲುವಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ,  ಪ್ರಚಾರದ ಕೊರತೆಯಿಂದ ಯೋಜನೆ ಗಳು ಹಿಂದೆ ಉಳಿದಿವೆ, ಇಲಾಖೆಯ ವರು ಎಲ್ಲಿ ತಪ್ಪಾಗಿದೆ, ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.

2011-12ನೇ ಸಾಲಿನ ಆಯ ವ್ಯಯದಲ್ಲಿ ನೇಕಾರರು ಎದುರಿಸುತ್ತಿ ರುವ ಸಮಸ್ಯೆಗಳನ್ನು ಬಗೆ ಹರಿಸಲು ಮತ್ತು ಅವರ ವರಮಾನ ಹೆಚ್ಚಿಸಲು ವಿದ್ಯುತ್ ಮಗ್ಗಗಳನ್ನು ಒದಗಿಸುವ ಹೊಸ ಯೋಜನೆಯನ್ನು ಸರ್ಕಾರ ಘೋಷಿಸಿದೆ ಎಂದರು.

ಶಾಸಕ ಜಿ.ಶಿವಣ್ಣ ಅವರು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೇಯ್ಗೆ ಉದ್ದಿಮೆ ಒಂದು ಕಲೆ,  ಯುವ ಜನತೆ  ಹೊಸ ತಾಂತ್ರಿಕತೆ ಅಳವಡಿಸಿ ಕೊಂಡು ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬೇಕು ಎಂದರು.

ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಇವೆ, ನೂತನ ಕೌಶಾಲ್ಯಾಭಿವೃದ್ಧಿ, ವಿನ್ಯಾಸ ಅಭಿವೃದ್ದಿ ಮತ್ತ ಉತ್ಪನ್ನಗಳ ಬ್ರಾಂಡ್‌ಗಳನ್ನು ತಯಾರಿಸಬೇಕು, ಅರ್ಹ ಸಂಘ ಸಂಸ್ಥೆಗಳಿಗೆ ಜವಳಿ ಕೈಗಾರಿಕೆಗಳಿಗೆ ಯಂತ್ರೋಪಕರಣಗಳಿಗಾಗಿ ಸಹಾಯ ಧನ ಸೌಲಭ್ಯ ಒದಗಿಸಲಾಗುವುದು ಎಂದರು.

ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನಾ ನಿರ್ದೇಶಕ ವಿಜಯಕುಮಾರ ನಿರಾಳೆ ಮಾತನಾಡಿ ಕೈಮಗ್ಗದಲ್ಲಿ ನೇಯ್ಗೆ, ವಿದ್ಯುತ್ ಚಾಲಿತ ಮಗ್ಗಗಳಲ್ಲಿ ನೇಯ್ಗೆ, ಡಿಜಾಯಿನ್ ತಯಾರಿಕೆಯಲ್ಲಿ, ಬಣ್ಣ ಹಾಕುವುದು ಮುಂತಾದ ತರಬೇತಿ ನೀಡಲಾಗು ವುದು, ಹೈಟೆಕ್ ಯಂತ್ರೋಪಕರಣ ದುರಸ್ಥಿ ಮತ್ತು ನಿರ್ವಹಣೆಯಲ್ಲಿ ತರಬೇತಿ ನೀಡಲಾಗುವುದು ಎಂದರು.

ಹುಬ್ಬಳ್ಳಿ ಹಿರಿಯ ಉಪನ್ಯಾಸಕ ಜಿ.ಕೆ. ಗದಗ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಹೊಸ ತಾಂತ್ರಿಕತೆ ಬಗ್ಗೆ ತರಬೇತಿ ನೀಡಿದರು.

ಜಿಪಂ ಸದಸ್ಯೆ ಲಲಿತಾ ಜಾಧವ, ಜಿಪಂ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ, ವಿ.ಎಂ. ಸೂರಣಗಿ, ಜಿಲ್ಲಾ ಅಗ್ರಣೀಯ   ಬ್ಯಾಂಕ್‌ನ ರಾಮಕೃಷ್ಣ ರೈ, ಎಸ್.ಪಿ. ಕಮಲದಿನ್ನಿ, ನಗರಸಭೆ ಸದಸ್ಯರಾದ ರಮೇಶ ಗುತ್ತಲ, ಕಮಲಾಕ್ಷಿ ಚಿನ್ನಿಕಟ್ಟಿ, ರಾಘವೇಂದ್ರ ಮತ್ತಿತರರು ಉಪಸ್ಥಿತ ರಿದ್ದರು.

ಜಿಪಂ ಹಾವೇರಿಯ ಕೈಮಗ ಹಾಗೂ ಜವಳಿ ಇಲಾಖೆ ಸಹಾಯಕ ನಿರ್ದೇಶಕ ಜಿಪಂ ಎನ್.ಟಿ. ನೆಗಳೂರು ಕಾರ್ಯ ಕ್ರಮ ನಿರೂಪಿಸಿದರು. ಎಸ್.ಪಿ. ಕಮಲ ದಿನ್ನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT