ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರಗಳ ಅಲಕ್ಷ್ಯ ಬೇಡ: ಶ್ರೀಧರ್

Last Updated 23 ಜನವರಿ 2012, 7:40 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನೇತ್ರದೋಷ ಪ್ರತಿಯೊಬ್ಬರಲ್ಲಿಯೂ ಬರುವ ತೊಂದರೆಯಾಗಿದ್ದು, ನೇತ್ರಗಳ ಬಗ್ಗೆ ಅಲಕ್ಷ್ಯ ವಹಿಸದೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ನೇತ್ರಗಳನ್ನು ಜೋಪಾನಪಡಿಸಿಕೊಳ್ಳಬೇಕು ಎಂದು ಯಳಂದೂರು ಉಪವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ತಿಳಿಸಿದರು.

ತಾಲ್ಲೂಕಿನ ಹೊಂಡರಬಾಳು ಪಂಚಾಯಿತಿ ವ್ಯಾಪ್ತಿಯ ತಿಮ್ಮರಾಜೀಪುರ ಗ್ರಾಮದಲ್ಲಿ ಕಾಡಂಚಿನ ಜನತೆಗಾಗಿ ಕೊಳ್ಳೇಗಾಲ ವನ್ಯಜೀವಿ ವಲಯ ಮತ್ತು ಬೆಂಗಳೂರು ವಿಠ್ಠಲ ಇಂಟರ್‌ನ್ಯಾಷನಲ್ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.

ಕಾಡಂಚಿನ ಗ್ರಾಮಗಳ ಜನತೆಯಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದರ ಜೊತೆ ಜೊತೆಯ್ಲ್ಲಲೇ ಕಾಡಂಚಿನ ಜನತೆಗೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಆರ್‌ಎಫ್‌ಒ ಬೋರಯ್ಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮೀಣ ಜನತೆ ಕಣ್ಣಿನ ಸಂರಕ್ಷಣೆ ಬಗ್ಗೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ನೇತ್ರ ತಜ್ಞ ಡಾ. ಪ್ರವೀಣ್ ಮಾಹಿತಿ ನೀಡಿದರು.

ವಿಠ್ಠಲ ಕಣ್ಣಿನ ಆಸ್ಪತ್ರೆಯ ಪ್ರವೀಣ್ ಮತ್ತು ತಂಡ ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರ ನೇತ್ರಗಳನ್ನು ಪರೀಕ್ಷಿಸಿ 40 ಜನರ ಕಣ್ಣಿನ ಪೊರೆ  ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ಶಿಬಿರದಲ್ಲಿ ವನಪಾಲಕ ಅಶೋಕ್, ಪ್ರಭುಸ್ವಾಮಿ, ಅರಣ್ಯ ರಕ್ಷಕ ಮಂಜುನಾಥ್, ಗ್ರಾಮದ ಮುಖಂಡರುಗಳಾದ ಮಹಾದೇವಸ್ವಾಮಿ, ಬಸವರಾಜು, ಸೋಮಣ್ಣ, ಲೂಕಸ್, ಪಂದೇಗೌಡ ಇತರರು ಉಪಸ್ಥಿತರಿದ್ದರು.

ಜ.31ರಂದು ವಚನ ಸಾಹಿತ್ಯ ಸಮ್ಮೇಳನ
ಗುಂಡ್ಲುಪೇಟೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಸಂಯುಕ್ತವಾಗಿ `ವಚನ ಸಾಹಿತ್ಯ ಸಮ್ಮೇಳನ~ವನ್ನು ಜನವರಿ 31 ರ ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಪಟ್ಟಣದ ಜವಾಹರ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಂ. ಪುಟ್ಟತಾಯಮ್ಮ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT