ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರದಾನದ ಮೂಲಕ ಬದುಕುಳಿದ ಜಾನಕ್ಕ

Last Updated 14 ಸೆಪ್ಟೆಂಬರ್ 2011, 6:20 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ  ಮೂರು ಜನ ಮೃತಪಟ್ಟಿದ್ದಾರೆ.

ಸೋಮವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ನೇತ್ರಗಳನ್ನು ಅವರ ಕುಟುಂಬದವರು  ದಾನ ಮಾಡುವ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದೆ.

ಹುನಗುಂದ ತಾಲ್ಲೂಕಿನ ಅಮೀನಗಡ ಬಸ್ ನಿಲ್ದಾಣ ಸಮೀಪ ಆಟೋ ಉರುಳಿಬಿದ್ದು ಜಾನಕ್ಕ ಮಲ್ಲಪ್ಪ  ಬಂಡೇರಿ (30) ಸ್ಥಳದಲ್ಲೇ ಮೃತಪಟ್ಟರು.

ಈ ಸಂದರ್ಭದಲ್ಲಿ ಅಮೀನಗಡ ವೈದ್ಯಾಧಿಕಾರಿ ಎಚ್.ಡಿ. ಚೇತನಾ ಮತ್ತು ಸಿಬ್ಬಂದಿ ಜಾನಕ್ಕಳ ಕುಟುಂಬ ದವರನ್ನು ಸಂಪರ್ಕಿಸಿ ನೇತ್ರದಾನದ ಮಾಡುವಂತೆ ಮನವೊಲಿಸಿದರು.  ಇದಕ್ಕೆ ಸ್ಪಂದಿಸಿದ ಕುಟುಂಬ ವರ್ಗ ಜಾನಕ್ಕಳ ನೇತ್ರದಾನಕ್ಕೆ ಸಮ್ಮತಿಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಬಾಗಲಕೋಟೆ ನಗರದ ಎಸ್. ನಿಜಲಿಂಗಪ್ಪ ಆಸ್ಪತ್ರೆಯ ಸಿಬ್ಬಂದಿ ಜಾನಕ್ಕಳ ನೇತ್ರವನ್ನು ಪಡೆದುಕೊಂಡರು.

ಘಟನೆ: ಅತಿವೇಗವಾಗಿ ಹೋಗುತ್ತಿದ್ದ ಆಟೋ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಉರುಳಿಬಿದ್ದ ಪರಿಣಾಮ ಜಾನಕ್ಕ ಮೃತಪಟ್ಟಿದ್ದು, ಆಕೆಯ ಮಗಳು ಶಶಿಕಲಾ ಬಂಡೇರಿ (10) ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳು ಅಮೀನಗಡ ಮತ್ತು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಟೋ ಚಾಲಕ ಹುಲಗಿನಾಳ ಗ್ರಾಮದ ಉಮೇಶ ಬಸಪ್ಪ ಇಟಗಿ ಪರಾರಿಯಾಗಿದ್ದಾನೆ. ಈ ಸಂಬಂಧ ಅಮೀನಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಕ್ ಸವಾರರಿಬ್ಬರ ಸಾವು
ಮುಧೋಳ ತಾಲ್ಲೂಕಿನ ಲೋಕಾಪುರ ಸಮೀಪ ಬೆಳಗಾವಿ ರಸ್ತೆಯಲ್ಲಿ ಸೋಮವಾರ ರಾತ್ರಿ ಬೈಕ್ ಮತ್ತು ಕಾಕು ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಗಳಖೋಡದ ವಿವೇಕಾನಂದ ಗುರುವ (30), ಮುಧೋಳದ ಮಹಾಲಿಂಗ ಹಿಪ್ಪರಗಿ (32) ಮೃತಪಟ್ಟಿರುವ ಬೈಕ್ ಸವಾರರಾಗಿದ್ದಾರೆ.

ಬೆಳಗಾವಿಯಿಂದ ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ.
ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT