ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ಪ್ರಧಾನಿ ಸ್ಥಾನಕ್ಕೆ ಇಂದು ಚುನಾವಣೆ

Last Updated 2 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ

ಕಠ್ಮಂಡು (ಐಎಎನ್‌ಎಸ್):  ಪ್ರಧಾನಿ ಆಯ್ಕೆಗಾಗಿ ನೇಪಾಳದ ಸಂಸತ್‌ನಲ್ಲಿ ಗುರುವಾರ 17ನೇ ಸುತ್ತಿನ ಚುನಾವಣೆ ನಡೆಯಲಿದ್ದು, ಭಾರತೀಯ ಮೂಲದವರು ಸ್ಥಾಪಿಸಿರುವ ಪಕ್ಷ ಬುಧವಾರ ಕಡೆಗಳಿಗೆಯಲ್ಲಿ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವುದರೊಂದಿಗೆ ಈ ಬಾರಿ ಚತುಷ್ಕೋನ ಸ್ಪರ್ಧೆಗೆ ವೇದಿಕೆ ಸಜ್ಜುಗೊಂಡಿದೆ.

ಉಪ ಪ್ರಧಾನಿ ಮತ್ತು ಮಾದೇಸಿ ಜನರ ಹಕ್ಕುಗಳ ವೇದಿಕೆ-ಪ್ರಜಾಸತಾತ್ಮಕ (ಎಂಪಿಆರ್‌ಎಫ್-ಡಿ) ಪಕ್ಷದ ವಿಜಯ್ ಕುಮಾರ್ ಗಚ್ಚೇದಾರ್ ಅವರು ಬುಧವಾರ ಕಡೆಗಳಿಗೆಯಲ್ಲಿ  ನಾಮಪತ್ರ ಸಲ್ಲಿಸಿದರು.

ಇದರ ಹೊರತಾಗಿ ಈ ಹಿಂದೆ ಸ್ಪರ್ಧಿಸಿದ್ದ ಮಾವೋವಾದಿಗಳ ಮುಖಂಡ ಪುಷ್ಪ ಕಮಲ್ ದಹಲ್ ಪ್ರಚಂಡ, ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಝಲನಾಥ್ ಖನಲ್ ಮತ್ತು ಮಾಜಿ ಉಪ ಪ್ರಧಾನಿ ಮತ್ತು ನೇಪಾಳಿ ಕಾಂಗ್ರೆಸ್ ಪಕ್ಷದ ಮುಖಂಡ ರಾಮ್ ಚಂದ್ರ ಪೊದ್ಯಾಲ್ ಅವರು ಚುನಾವಣಾ ಕಣದಲ್ಲಿದ್ದಾರೆ.

ಒಟ್ಟು 601 ಸದಸ್ಯ ಬಲ ನೇಪಾಳದ ಸಂಸತ್‌ನಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಬೇಕಾಗಬೇಕಾದರೆ ಅಭ್ಯರ್ಥಿಯೊಬ್ಬರು ಕನಿಷ್ಠ 300 ಮತಗಳನ್ನು ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT