ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳಕ್ಕೆ ಸೇನಾ ನೆರವು: ಪುನರಾರಂಭ ಪ್ರಕ್ರಿಯೆ ಪ್ರಗತಿಯಲ್ಲಿ

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ನೇಪಾಳಕ್ಕೆ ಸೇನಾ ನೆರವು ಪುನರ್ ಆರಂಭಿಸುವ ವಿಷಯ ಪ್ರಗತಿಯಲ್ಲಿದೆ ಎಂದು ಭಾರತ ಬುಧವಾರ ಹೇಳಿದೆ. ದೊರೆ ಜ್ಞಾನೇಂದ್ರ ಅಧಿಕಾರವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರಿಂದ 2005ರಲ್ಲಿ ಭಾರತ ಆ ರಾಷ್ಟ್ರಕ್ಕೆ ಸೇನಾ ನೆರವು ನೀಡುವುದನ್ನು ಸ್ಥಗಿತಗೊಳಿಸಿತ್ತು.

`ನೇಪಾಳಕ್ಕೆ ಸೇನಾ ನೆರವು ಪುನರ್ ಆರಂಭಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಉತ್ಸುಕವಾಗಿವೆ. ಈ ಪ್ರಕ್ರಿಯೆ ಪ್ರಗತಿಯಲ್ಲೂ ಇದೆ~ ಎಂದು ಇಲ್ಲಿಗೆ ಐದು ದಿನಗಳ ಭೇಟಿಗಾಗಿ ಆಗಮಿಸಿರುವ ಭಾರತದ ಭೂಸೇನಾ ಮುಖ್ಯಸ್ಥ ಜನರಲ್ ವಿಕ್ರಂ ಸಿಂಗ್ ತಿಳಿಸಿದರು.ನೇಪಾಳ ಪ್ರಧಾನಿ ಕರೆಯ ಮೇರೆಗೆ ಇಲ್ಲಿಗೆ ಭೇಟಿ ನೀಡಿರುವ ಸಿಂಗ್,ಅಲ್ಲಿನ  ಅಧ್ಯಕ್ಷರನ್ನೂ ಭೇಟಿ ಮಾಡಲಿದ್ದಾರೆ.

ನೇಪಾಳ ಸೇನಾ ಮುಖ್ಯಸ್ಥ ಛತ್ರಾಮನ್ ಸಿಂಗ್ ಗುರುಂಗ್ ಅವರನ್ನು ವಿಕ್ರಂ ಸಿಂಗ್ ಮಂಗಳವಾರ ಭೇಟಿ ಮಾಡಿದ್ದು, ಪರಸ್ಪರ ಸೇನಾ ಸಹಕಾರವನ್ನು ವಿಸ್ತರಿಸುವ ಬಗ್ಗೆ ಚರ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT