ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ನಗದು ವಿಸ್ತರಣೆಗೆ ಅಡ್ಡಿ?

ತೈಲ ಕಂಪೆನಿಗಳಿಗೆ ಪಾವತಿಯಾಗದ ಎಲ್‌ಪಿಜಿ ಸಬ್ಸಿಡಿ
Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜುಲೈ 1ರಿಂದ ಅಡುಗೆ ಅನಿಲಕ್ಕೆ ನೇರ ನಗದು ವರ್ಗಾವಣೆ ವ್ಯವಸ್ಥೆ(ಡಿಸಿಟಿ) ಜಾರಿಗೆ ಬಂದಿದೆ. ಈ ಯೋಜನೆಯಡಿ ತೈಲ ಮಾರಾಟ ಕಂಪೆನಿಗಳು ಈವರೆಗೆ  ಗ್ರಾಹಕರ ಬ್ಯಾಂಕ್‌ ಖಾತೆಗಳಿಗೆ ರೂ222 ಕೋಟಿ ವರ್ಗಾಯಿಸಿವೆ. ಆದರೆ, ಈ ಹಣವನ್ನು ಸರ್ಕಾರ ಈವರೆಗೂ ಕಂಪೆನಿಗಳಿಗೆ ಮರು ಪಾವತಿ ಮಾಡಿಲ್ಲ ಎಂದು ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ (ಐಒಸಿ) ಹೇಳಿದೆ.

ಎಲ್‌ಪಿಜಿ ಗ್ರಾಹಕರಿಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪ್ರತಿ ಸಿಲಿಂಡರ್‌ಗೆ ರೂ500ರವರೆಗೆ ಸಬ್ಸಿಡಿ ಹಣ ಪಾವತಿಸುತ್ತಿವೆ. ಸದ್ಯ ಈ ಯೋಜನೆ 54 ಜಿಲ್ಲೆಗಳಲ್ಲಿ ಜಾರಿ­ಯಲ್ಲಿದ್ದು, ಜನವರಿ 1ರಿಂದ 289 ಜಿಲ್ಲೆಗಳಿಗೆ ವಿಸ್ತರಿಸಲು ಸರ್ಕಾರ ಯೋಜನೆ ಹಮ್ಮಿಕೊಂಡಿದೆ. ಆದರೆ, ಕಂಪೆನಿಗಳಿಗೆ ಸಬ್ಸಿಡಿ ಹಣ ಪಾವತಿಸದೆ ಯೋಜನೆ ವಿಸ್ತರಿಸುವುದು ಹೇಗೆ ಎಂದು ‘ಐಒಸಿ’ ಕಾರ್ಯ­ನಿರ್ವಾಹಕ ನಿರ್ದೇಶಕ  ಎ.ಎನ್‌.ಝಾ ಆ. 21ರಂದು ಹಣ­ಕಾಸು ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ  ಕೇಳಿದ್ದಾರೆ.

ಆ. 21ರವರೆಗೆ ತೈಲ ಮಾರಾಟ ಕಂಪೆನಿಗಳು ಎಲ್‌ಪಿಜಿ ಗ್ರಾಹಕರ ಬ್ಯಾಂಕ್‌ ಖಾತೆಗಳಿಗೆ ರೂ188 ಕೋಟಿ ಸಬ್ಸಿಡಿ ಹಣ ವರ್ಗಾಯಿಸಿವೆ. ಈಗ ಈ ಮೊತ್ತ ರೂ222 ಕೋಟಿ ದಾಟಿದೆ.  ಆದರೆ, ಸರ್ಕಾರ ಇದುವರೆಗೆ ಹಣ ಪಾವತಿಸಿಲ್ಲ. ಯೋಜನೆ ವಿಸ್ತರಿಸುವ ಮುನ್ನ ಸರ್ಕಾರ ಬಾಕಿ ಹಣ ಪಾವತಿಸಲಿ ಎಂದು ಅವರು ಸುದ್ದಿಸಂಸ್ಥೆಗೆ ಪ್ರತಿಕ್ರಿ­ಯಿಸಿದ್ದಾರೆ.

289 ಜಿಲ್ಲೆಗಳಿಗೆ ಎಲ್‌ಪಿಜಿ ನೇರ ನಗದು ಯೋಜನೆ ವಿಸ್ತರಣೆಗೊಂಡರೆ, ತೈಲ ಮಾರಾಟ ಕಂಪೆನಿಗಳು ವಾರ್ಷಿಕ ರೂ27,000 ಕೋಟಿ ಸಬ್ಸಿಡಿ ಹಣ ಗ್ರಾಹಕರ ಬ್ಯಾಂಕ್‌ ಖಾತೆಗಳಿಗೆ ವರ್ಗಾ­ಯಿ­ಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT