ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ರಾಜಕೀಯಕ್ಕೆ ಭಾವಸಾರ ವೇದಿಕೆ

Last Updated 25 ಜನವರಿ 2012, 4:30 IST
ಅಕ್ಷರ ಗಾತ್ರ

ವಿಜಾಪುರ: `ರಾಜ್ಯದ ಸುಮಾರು 35 ವಿಧಾನಸಭಾ ಹಾಗೂ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಭಾವಸಾರ ಕ್ಷತ್ರೀಯ ಮತದಾರರು ನಿರ್ಣಾಯಕರಾಗಿದ್ದು, ಮುಂಬರುವ ಚುನಾವಣೆಯಲ್ಲಿ ಭಾವಸಾರ ರಾಜಕೀಯ ವೇದಿಕೆಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆ~ ಎಂದು ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಜಯಪ್ರಕಾಶ ಅಂಬರ್‌ಕರ್ ಹೇಳಿದರು.

`. ಅದನ್ನು ಪಡೆಯುವುದಕ್ಕಾಗಿಯೇ ಈ ನಿರ್ಧಾರಕ್ಕೆ ಬರಲಾಗಿದೆ~ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಸಮಾಜದಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಲಿಕ್ಕಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದೇವೆ. ಆಯಾ ಕ್ಷೇತ್ರಗಳಲ್ಲಿ ನಮ್ಮ ಸಮಾಜದ ಮುಖಂಡರು ಯಾವ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೋ ಅದೇ ಪಕ್ಷದ ಟಿಕೆಟ್ ಪಡೆಯಲು ಒತ್ತಡ ತರುತ್ತೇವೆ. ಒಂದು ವೇಳೆ ಆ ಪಕ್ಷಗಳು ಟಿಕೆಟ್ ನೀಡದಿದ್ದರೆ ಅವರನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸಿ ಸಮಾಜದಿಂದ ಹಣ ಸಂಗ್ರಹಿಸಿ ಗೆಲ್ಲಿಸುತ್ತೇವೆ~ ಎಂದರು.

`ರಾಜ್ಯದಲ್ಲಿ 30 ಲಕ್ಷದಷ್ಟಿರುವ ಭಾವಸಾರ ಕ್ಷತ್ರಿಯ ಸಮಾಜಕ್ಕೆ ರಾಜಕೀಯದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಮ್ಮ ವೇದಿಕೆ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ಎಲ್ಲ ಪಕ್ಷದವರೂ ಈ ವೇದಿಕೆಯಲ್ಲಿದ್ದಾರೆ. ನಮ್ಮಂದಿಗೆ ನೀವಿದ್ದರೆ ನಿಮ್ಮಂದಿಗೆ ನಾವು ಎಂಬ ತತ್ವ ನಮ್ಮದು~ ಎಂದು ವೇದಿಕೆಯ ರಾಜ್ಯ ಘಟಕದ ಕಾರ್ಯದರ್ಶಿ ಓಂಪ್ರಕಾಶ ತೇಲಕರ ಹೇಳಿದರು.

`ಈಗಾಗಲೇ ಬಹುತೇಕ ನಮ್ಮ ಬೆಂಬಲದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ನಮ್ಮ ಸಮಾಜದ ಮುಖಂಡರಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಬೇಕು. ಮುಖ್ಯವಾಗಿ ವಿಜಾಪುರ ನಗರಸಭೆ ಸದಸ್ಯರಾಗಿರುವ ನಮ್ಮ ಸಮಾಜದ ರಾಜೇಶ ದೇವಗಿರಿ ಅವರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕು~ ಎಂದು ಒತ್ತಾಯಿಸಿದರು.

`ಇತರ ಸಮಾಜದ ಸಹಕಾರದಿಂದ ನಾವು ರಾಜಕೀಯದಲ್ಲಿದ್ದೇವೆ. ನಮ್ಮ ಸೇವೆಯನ್ನು ಪಕ್ಷ ಗುರುತಿಸಬೇಕು~ ಎಂದು ರಾಜೇಶ ದೇವಗಿರಿ ಹೇಳಿದರು.

ಕರ್ನಾಟಕ ಭಾವಸಾರ ಕ್ಷತ್ರೀಯ ರಾಜಕೀಯ ವೇದಿಕೆ ವಿಜಾಪುರ ಜಿಲ್ಲಾ ಘಟಕದ ಸಂಚಾಲಕರನ್ನಾಗಿ ನಗರಸಭೆ ಸದಸ್ಯ ರಾಜೇಶ ದೇವಗಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರವಣಕುಮಾರ ಮಹೇಂದ್ರಕರ ಅವರನ್ನು ಇದೇ ವೇಳೆ ಘೋಷಿಸಲಾಯಿತು.

ವೇದಿಕೆಯ ಗುಲ್ಬರ್ಗ ಜಿಲ್ಲಾ ಸಂಚಾಲಕ ರಮೇಶ ನವಲೆ, ದೀಪಕ ಶಿಂತ್ರೆ, ಡಾ. ವಿಷ್ಣುಪಂತ ದೇವಗಿರಿ, ಶ್ರವಣಕುಮಾರ ಮಹೀಂದ್ರಕರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಸಾಂಸ್ಕೃತಿಕ ಭವನಕ್ಕೆ ಚಾಲನೆ: ವಿಜಾಪುರದ ಆನಂದನಗರದಲ್ಲಿ ಭಾವಸಾರ ಕ್ಷತ್ರೀಯ ಸಾಂಸ್ಕೃತಿಕ ಭವನ ನಿರ್ಮಾಣ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಕಾಮಗಾರಿಗೆ ಚಾಲನೆ ನೀಡಿದ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಈ ಭವನಕ್ಕೆ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ.2 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಹರಿಭಕ್ತ ಪಂತದ ಪ್ರಭಾಕರ ಭೂವಾ ಬೊದಲೆ ಮಹಾರಾಜರು ಮಾತನಾಡಿದರು. ನಗರಸಭೆ ಸದಸ್ಯ, ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ರಾಜೇಶ ದೇವಗಿರಿ ಅಧ್ಯಕ್ಷತೆ ವಹಿಸಿದ್ದರು. ಜಯಪ್ರಕಾಶ ಅಂಬರಕರ, ರಮೇಶ ನವಲೆ, ಓಂಪ್ರಕಾಶ ತೇಲಕರ, ಅಪ್ಪು ಇಟ್ಟಂಗಿ, ಮಿಲನ್ ಮೀರಜಕರ, ಶ್ರವಣಕುಮಾರ ಮಹೇಂದ್ರಕರ, ಯಶವಂತ ರಣಸೂಭೆ, ಅತುಲ್ ಪುಕಾಳೆ, ಶಂಕರ ಝಿಂಗಾಡೆ, ಬಾಬು ಮೀರಜಕರ, ವಿಶಾಲ ಪುಕಾಳೆ ಮತ್ತಿತರರು ಉಪಸ್ಥಿತರಿದ್ದರು.

ಡಾ. ವಿಷ್ಣುಪಂತ ದೇವಗಿರಿ ಸ್ವಾಗತಿಸಿದರು. ದೀಪಕ ಶಿಂತ್ರೆ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಮಹೇಂದ್ರಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT