ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಷನ್ ಬಿಲ್ಡರ್ಸ್‌

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ಮಾಹಿತಿ ಮತ್ತು ಮನರಂಜನೆ ಎರಡನ್ನು ಒದಗಿಸುವ ಎಸಿಕೆ ಮೀಡಿಯಾ ಗಣರಾಜ್ಯೋತ್ಸವದ ಅಂಗವಾಗಿ `ನೇಷನ್ ಬಿಲ್ಡರ್ಸ್‌~ ಎಂಬ ಹೊಸ ಸಂಗ್ರಹ ಬಿಡುಗಡೆಗೊಳಿಸಿದೆ.

ಆಯ್ದ 20 ಕಥೆಗಳನ್ನು ಒಳಗೊಂಡ ಅಮರ್ ಚಿತ್ರ ಕಥಾ ಪುಸ್ತಕದಲ್ಲಿ `ಅಶೋಕ~, `ಚಂದ್ರಗುಪ್ತ ಮೌರ್ಯ~, `ಪೃಥ್ವಿರಾಜ್ ಚೌಹಾಣ್~ ಸೇರಿದಂತೆ ಅನೇಕ ಐತಿಹಾಸಿಕ ಪುರುಷರ ರೋಚಕ ಕಥೆಗಳಿವೆ.

ಈಸ್ಟ್ ಇಂಡಿಯಾ ಕಂಪೆನಿ ಭರತ ಖಂಡಕ್ಕೆ ಕಾಲಿರಿಸುವುದಕ್ಕಿಂತ ಮೊದಲು ಭಾರತ ಹಲವು ಸ್ವತಂತ್ರ ಪ್ರಾಂತ್ಯ, ರಾಜ್ಯ ಹಾಗೂ ಸಾಮ್ರೋಜ್ಯಗಳನ್ನು ಒಳಗೊಂಡಿತ್ತು. ಭಾರತದಲ್ಲಿದ್ದ ಅಪಾರ ಸಂಪತ್ತು ಕಂಡು ಆಕರ್ಷಿತರಾದ ಹಲವು ದಾಳಿಕೋರರು ಮತ್ತು ಆಕ್ರಮಣಕಾರರು ನಮ್ಮ ದೇಶದತ್ತ ಆಸೆಗಣ್ಣಿನಿಂದ ನೋಡಿದರು. ಇನ್ನು ಕೆಲವರು ಇಲ್ಲಿಯೇ ನೆಲೆ ಕಂಡುಕೊಂಡು ಭಾರತೀಯ ಸಮಾಜದಲ್ಲಿ ಬೆರೆತುಹೋದರು. ಇವರಲ್ಲಿ ಕೆಲವರು ಅದ್ಭುತವಾದ ಸ್ಮಾರಕಗಳನ್ನು ನಿರ್ಮಿಸಿದರು, ಸಮಾಜದಲ್ಲಿ ಕ್ಷಿಪ್ರ ರೀತಿಯ ಬದಲಾವಣೆ ತಂದರು. ಜತೆಗೆ, ಸಾಂಸ್ಕೃತಿಕ ಚಳವಳಿಗಳನ್ನು ಹುಟ್ಟುಹಾಕಿದರು.

`ಈ ಕಥೆಗಳನ್ನು ಮುಂದಿನ ಪೀಳಿಗೆಗೆ ಹೇಳಲೇ ಬೇಕಾದ ಅಗತ್ಯವಿದೆ. ಈ ಕಾರ್ಯದಿಂದ ದೇಶದ ಇತಿಹಾಸವನ್ನು ಜೀವಂತವಾಗಿರಿಸಬಹುದು~ ಎನ್ನುತ್ತಾರೆ  ಅಮರ್ ಚಿತ್ರ ಕಥಾ ಸಂಪಾದಕರಾದ ರೀನಾ ಪುರಿ ಅವರು ಹೇಳಿದರು. ಈ ವಿಶೇಷ ಸಂಗ್ರಹವು ಎಲ್ಲ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT