ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಪ್ರಾದೇಶಿಕ ಚಿತ್ರ ಮೋಹ

ಪಂಚರಂಗಿ
Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಟಿ ನೇಹಾ ಧೂಪಿಯಾ ಮೊಟ್ಟಮೊದಲ ಬಾರಿಗೆ ಪಂಜಾಬಿ ಚಿತ್ರ `ರಂಗೀಲೆ' ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಾದೇಶಿಕ ಭಾಷೆಯ ಚಿತ್ರವೊಂದಕ್ಕಾಗಿ ಬಣ್ಣಹಚ್ಚಿದ ಖುಷಿಯಲ್ಲಿರುವ ನೇಹಾ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

`ಪ್ರಾದೇಶಿಕ ಚಿತ್ರಗಳು ಪ್ರಪಂಚದ ಉದ್ದಗಲಕ್ಕೂ ಪ್ರಶಂಸೆಗೆ ಪಾತ್ರವಾಗುತ್ತಿವೆ. ಇಷ್ಟೊಂದು ಜನಪ್ರಿಯತೆ ಪಡೆಯುವ ಪ್ರಾದೇಶಿಕ ಚಿತ್ರಗಳಲ್ಲಿ ಈ ಮೊದಲೇ ಯಾಕೆ ನಟಿಸುವ ಮನಸ್ಸು ಮಾಡಲಿಲ್ಲ' ಎಂಬ ಕೊರಗು ಅವರನ್ನು ಕಾಡುತ್ತಿದೆಯಂತೆ.

ಕೆನಡಾದ ವ್ಯಾಂಕೋವರ್ ನಗರಿಯಲ್ಲಿ `ರಂಗೀಲೆ' ಚಿತ್ರಪ್ರಚಾರದಲ್ಲಿ ಪಾಲ್ಗೊಂಡಿದ್ದ ನೇಹಾ ಈ ವೇಳೆ ಚಿತ್ರದ ಬಗ್ಗೆ ತುಂಬ ಉತ್ಸಾಹದಿಂದ ಮಾತನಾಡಿದ್ದಾರೆ. “ಪಂಜಾಬಿ ಸಿನಿಮಾ `ರಂಗೀಲೆ' ಬಗ್ಗೆ ನನಗೆ ಸಾಕಷ್ಟು ನಿರೀಕ್ಷೆಗಳಿವೆ. ವ್ಯಾಂಕೋವರ್ ನಗರಿಯಲ್ಲಿರುವ ಭಾರತೀಯರಿಗೆ ಪ್ರಾದೇಶಿಕ ಚಿತ್ರಗಳ ಪ್ರೇಮ ಜಾಸ್ತಿ.

ಅದರಲ್ಲೂ ಕೆನಡಾ ಭಾಗದಲ್ಲಂತೂ ಪಂಜಾಬಿ ಚಿತ್ರಗಳನ್ನು ನೋಡುವ ಪ್ರೇಕ್ಷಕವರ್ಗ ದೊಡ್ಡದಿದೆ. ಅವರು ಚಿತ್ರಗಳನ್ನು ನೋಡಿ ಮೆಚ್ಚಿಕೊಳ್ಳುತ್ತಾರೆ. ಹಾಗಾಗಿ ನಾನು ಈ ಭಾಗದಲ್ಲೇ ಹೆಚ್ಚು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಹೋದಲ್ಲೆಲ್ಲಾ ಅಭಿಮಾನಿಗಳು ನನ್ನ ಮಾತುಗಳನ್ನು ಪ್ರೀತಿಯಿಂದ ಕೇಳುತ್ತಾರೆ. ವೇದಿಕೆ ಬಿಟ್ಟು ಇಳಿಯುವಾಗ ನನ್ನ ಹೆಸರನ್ನು ಗಟ್ಟಿಯಾಗಿ ಕೂಗುತ್ತಾ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಾರೆ' ಎಂದು ಹೇಳಿಕೊಂಡಿದ್ದಾರೆ ಅವರು.

`ಭಾರತೀಯರು ಪ್ರಪಂಚದ ಮೂಲೆ ಮೂಲೆಯಲ್ಲೂ ಇದ್ದಾರೆ. ನಮ್ಮ ದೇಶದ ಎಲ್ಲ ಪ್ರಾದೇಶಿಕ ಚಿತ್ರಗಳನ್ನು ಅವರು ವೀಕ್ಷಿಸುತ್ತಾರೆ. ಮೆಚ್ಚಿಕೊಳ್ಳುತ್ತಾರೆ. ನಾನು ಸರ್ದಾರ್ ಕುಟಂಬದ ಹೆಣ್ಣುಮಗಳು. ಈ ಚಿತ್ರದಲ್ಲಿನ ಹಾಡೊಂದಕ್ಕೆ ನಾನು ಧ್ವನಿಯಾಗಿದ್ದೇನೆ. ಬಾಲಿವುಡ್ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದ ನಾನು ಈ ಮೊದಲೇ ಏಕೆ ಪ್ರಾದೇಶಿಕ ಚಿತ್ರಗಳಲ್ಲಿ ನಟಿಸುವ ಮನಸ್ಸು ಮಾಡಲಿಲ್ಲ ಎನ್ನುವ ಕೊರಗು ಕಾಡುತ್ತಿದೆ' ಎಂದಿದ್ದಾರೆ ನೇಹಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT