ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಹೊಸ ರೂಪ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಏನು ಮಾಡಲಿ? ಚಿತ್ರ ಇಂಥ ಸಾಹಸ ಮಾಡುವಂತೆ ಪ್ರೇರಣೆ ನೀಡಿತು. ಜಲಪಾತದಂಥ ನನ್ನ ಉದ್ದದ ಕೂದಲನ್ನು ತುಂಡರಿಸಿಕೊಂಡೆ~ ಹೀಗೆ ನೇಹಾ ಧುಪಿಯಾ ಹೇಳುತ್ತಿದ್ದಾರೆ.

ತಮ್ಮ ಯಾವುದೇ ಚಿತ್ರಕ್ಕೂ ಕೇಶ ವಿನ್ಯಾಸವನ್ನು ಬದಲಿಸಿಕೊಳ್ಳದ 32ರ ನಟಿ, `ರಶ್~ ಚಿತ್ರಕ್ಕಾಗಿ ಕೂದಲಿಗೆ ಕತ್ತರಿ ತಾಕಿಸಿದ್ದಾರೆ. ತೀರ ಕಿವಿಯುದ್ದಕ್ಕೆ ಮೊಂಡುಗೊಳಿಸಿದ್ದಾರೆ.
ಚಿತ್ರದ ಪೋಸ್ಟರ್ ಮೇಲೆ ಬರೆದಿತ್ತಲ್ಲ, `ಜೋ ಆದ್ಮಿ ರಿಸ್ಕ್ ನಹಿ ಲೇತಾ, ಉಸ್ಕಾ ಸಬ್ ರಿಸ್ಕಿ ಬನ್‌ಜಾತಾ ಹೈ~ ಎಂದು, ಅದಕ್ಕೇ ಈ ರಿಸ್ಕ್ ತೆಗೆದುಕೊಂಡೆ.

ಸಮಾಧಾನದ ಸಂಗತಿ ಎಂದರೆ ಎಲ್ಲರೂ ನನ್ನ ಹೊಸ ರೂಪವನ್ನು ಮೆಚ್ಚಿಕೊಂಡಿದ್ದಾರೆ. ಈ ಬಗೆಯ ಕೇಶ ವಿನ್ಯಾಸದಲ್ಲಿ ನಾನು ಚಂದ ಕಾಣುತ್ತಿದ್ದೇನೆ~ ಎಂದೆಲ್ಲ ನೇಹಾ ಹೇಳಿದ್ದಾರೆ.

`ಈ ಚಿತ್ರದಲ್ಲಿರುವ ಪಾತ್ರ ಚಂದ ಕಾಣಿಸುವುದಷ್ಟೇ ಅಲ್ಲ, ಸರಳ ಮತ್ತು ಅತ್ಯಾಕರ್ಷಕವಾಗಿರಬೇಕಿತ್ತು. ಏನು ಮಾಡುವುದೆಂದು ಸಾಕಷ್ಟು ಚರ್ಚಿಸಿದೆವು. ಕೇಶ ವಿನ್ಯಾಸದ ವಿಷಯ ಬಂದಾಗ ಪಾತ್ರಕ್ಕಾಗಿ ತಲೆ ತಗ್ಗಿಸಲೇಬೇಕಾಯಿತು~ ಎನ್ನುತ್ತಾರೆ ನೇಹಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT