ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾದ ಏರ್‌ಟೆಲ್ ಕಚೇರಿ ಮೇಲೆ ದಾಳಿ

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಅಬುಜಾ (ಪಿಟಿಐ): ನೈಜೇರಿಯಾದ ಕನೊ ನಗರದಲ್ಲಿ ಶನಿವಾರ ಭಾರತೀಯ ಮೂಲದ ದೂರಸಂಪರ್ಕ ಕಂಪೆನಿ ಭಾರ್ತಿ ಏರ್‌ಟೆಲ್‌ನ ಸ್ಥಳೀಯ ಕಚೇರಿ ಮೇಲೆ ನಡೆದ ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ.

`ದಾಳಿಕೋರರಿಬ್ಬರು ಏರ್‌ಟೆಲ್ ಕಚೇರಿಯೊಳಗೆ ಪ್ರತ್ಯೇಕ ವಾಹನಗಳನ್ನು ನುಗ್ಗಿಸಿದರು' ಎಂದು ದಾಳಿಯಲ್ಲಿ ಬದುಕುಳಿದ ಬಯೊ ಓಶೋ ಹೇದ್ದಾರೆ.
ಈ ಸಂದರ್ಭದಲ್ಲಿ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆಸಿದೆ. ದೂರಸಂಪರ್ಕ ಕಂಪೆನಿಗಳ ಮೇಲೆ ಬೊಕೊ ಹರಾಂ ಪಂಗಡದವರು ಈ ಹಿಂದೆ ಕೂಡ ದಾಳಿ ನಡೆಸಿದ್ದರು. ತಮ್ಮ ಸಂಘಟನೆಯ ಸದಸ್ಯರನ್ನು ಸೆರೆ ಹಿಡಿಯಲು ಈ ಕಂಪೆನಿಗಳು ಭದ್ರತಾ ಪಡೆಗೆ ನೆರವು ನೀಡುತ್ತಿವೆ ಎನ್ನುವುದು ಇವರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT