ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಟಿಯಲ್ಲೇ ಹೊರಬಂದ ಭಾರತ ಮೂಲದ ಗೌ‌ರ್ನರ್

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್/ಪಿಟಿಐ):  ಮಕ್ಕಳು ಶಾಲೆಗೆ ಹೋಗುವುದನ್ನು ನೋಡಲು ನೈಟಿಯಲ್ಲೇ  ಗೌರ್ನರ್ ಬಂಗಲೆಯಿಂದ ಹೊರಗೆ ಬರುವ ಮೂಲಕ ದಕ್ಷಿಣ ಕರೋಲಿನಾದಲ್ಲಿರುವ ಭಾರತ ಮೂಲದ ಗೌರ್ನರ್ ರಿಪಬ್ಲಿಕನ್ ಪಕ್ಷದ ನಿಕಿ ಹ್ಯಾಲೆ ಬಿಸಿಬಿಸಿ ಸುದ್ದಿಗೆ ಕಾರಣರಾಗಿದ್ದಾರೆ.

ಸಿಖ್ ವಲಸಿಗ ದಂಪತಿಯ ಪುತ್ರಿ ಹ್ಯಾಲೆ ಈ ವಿಷಯವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

`ಮಕ್ಕಳನ್ನು ಶಾಲೆಗೆ ಕಳುಹಿಸಲು ಈ ಉಡುಪು ತೊಟ್ಟು ಹೊರಗೆ ಬಂದಿದ್ದೆ ಎಂದಿದ್ದಾರೆ'. ಈ ವಿಷಯವನ್ನು ಡೆಮಾಕ್ರಟಿಕ್ ಪಕ್ಷದ ಅವರ ವಿರೋಧಿಗಳು ಟೀಕಿಸಿದ್ದಾರೆ. 

ಜನರೊಂದಿಗೆ  ಮಾಹಿತಿ ಹಂಚಿಕೊಳ್ಳುವಾಗ ಯಾವ ವಿಷಯಕ್ಕೆ ಆದ್ಯತೆ ನೀಡಬೇಕೆಂಬುದು ಅವರಿಗೆ ತಿಳಿದಿಲ್ಲ ಎಂದು ಗೇಲಿ ಮಾಡಿದ್ದಾರೆ. 2014ರಲ್ಲಿ ನಡೆಯುವ ಚುನಾವಣೆಯಲ್ಲಿ ನಿಕಿ ಹ್ಯಾಲೆ ಸ್ಪರ್ಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT