ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕೆ ಹೊಣೆ ಹೊತ್ತು ಯಡಿಯೂರಪ್ಪ ರಾಜಿನಾಮೆ ನೀಡಲಿ

Last Updated 30 ಜನವರಿ 2011, 12:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಖ್ಯಮಂತ್ರಿ ವಿವೇಚನಾ ಕೋಟಾ ಅಡಿಯಲ್ಲಿ ಮಗನಿಗೆ ಪ್ರಮುಖ ನಿವೇಶನ ಹಂಚಿಕೆ ಮಾಡಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೈತಿಕ ಹೊಣೆ ಹೊತ್ತು ಅಧಿಕಾರದಿಂದ ಕೆಳಗಿಳಿಯುವುದೇ ಒಳಿತು ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅಭಿಪ್ರಾಯಪಟ್ಟರು.

ಬಿಜೆಪಿ ಹಮ್ಮಿಕೊಂಡಿರುವ ತಿರಂಗಾ ಯಾತ್ರೆ ಸಂಬಂಧ ಮಾತನಾಡಿದ ಅವರು ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನ ಕುರಿತಂತೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಕರ್ನಾಟಕ ಮುಖ್ಯಮಂತ್ರಿ ನಡೆಸಿದ್ದಾರೆ ಎನ್ನಲಾದ ಭೂ ಹಗರಣ ಕುರಿತಂತೆ ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ‘2ಜಿ ಹಗರಣ, ಆದರ್ಶ ಹಾಗೂ ಕಾಮನ್‌ವೆಲ್ತ್ ಹಗರಣಗಳೊಂದಿಗೆ ಯಡಿಯೂರಪ್ಪ ನಡೆಸಿದ್ದಾರೆ ಎನ್ನಲಾದ ಡಿನೋಟಿಫಿಕೇಷನ್ ಹಗರಣವನ್ನು ತಳುಕು ಹಾಕಲಾಗದು. ಆದರೆ ಇಂಥದ್ದೊಂದು ವಿಚಾರ ರಾಷ್ಟ್ರೀಯ ನಾಯಕರಿಗೆ ತಿಳಿದ ತಕ್ಷಣವೇ ಚಿವುಟಿ ಹಾಕುವಂಥ ಕೆಲಸ ಮಾಡಬೇಕಿತ್ತು’ ಎಂದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಕರ್ನಾಟಕದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ತಕ್ಷಣದಲ್ಲೇ ಒಂದು ಪರಿಹಾರವನ್ನು ಹುಡುಕಲಿದ್ದಾರೆ. ಆದರೂ ಯಡಿಯೂರಪ್ಪ ಅವರನ್ನು ‘ಸಣ್ಣ ಕಳ್ಳ- ದೊಡ್ಡ ಕಳ್ಳ’ ಎಂದು ಕರೆದದ್ದು ದುರದೃಷ್ಟಕರ ಹಾಗೂ ಕೆಟ್ಟ ಭಾಷಾ ಪ್ರಯೋಗ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಿರಂಗಾ ಯಾತ್ರಗೆ ಸಂಬಂಧಿಸಿದಂತೆ ‘ಗಣರಾಜ್ಯೋತ್ಸವ ದಿನದಂದು ಕಾಶ್ಮೀರದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಪಕ್ಷ ವಿಫಲವಾಗಿದೆ. ಆದರೆ ಜೆಪಿಸಿ, 2ಜಿ ತರಂಗಾಂತರ ಹಂಚಿಕೆ ಹಗರಣ, ಆದರ್ಶ ಹಗರಣಗಳಂಥ ಅಸ್ತ್ರಗಳಿರುವಾಗ ತಿರಂಗಾ ಯಾತ್ರೆ ಬೇಕಾಗಿರಲಿಲ್ಲ’ ಎಂದು ಅವರು ನುಡಿದರು.

ಪಕ್ಷದಲ್ಲಿ ತಮ್ಮ ಹುದ್ದೆ ಕುರಿತಂತೆ ಕೇಳಲಾದ ಪ್ರಶ್ನಗೆ, ‘ನಾನು ಅಧಿಕಾರದ ಆಕಾಂಕ್ಷಿಯಲ್ಲ. ಗಡ್ಕರಿ ಅವರ ಕುಟುಂಬದ ಸ್ನೇಹಿತರು ಎನ್ನುವುದನ್ನು ಬಿಟ್ಟು ಬೇರ್ಯಾವ ಅವಕಾಶಗಳು ನನಗೆ ಸಿಕ್ಕಿಲ್ಲ. ಆದರೆ ಪಕ್ಷದ ಹಿರಿಯರಾದ ಯಶವಂತ ಸಿನ್ಹಾ ಹಾಗೂ ಅರುಣ್ ಶೌರಿ ಅವರಂಥ ಪ್ರತಿಭಾವಂತರಿದ್ದರೂ ಅವರ ಪ್ರತಿಭೆ ಪಕ್ಷದ ಪ್ರಯೋಜನಕ್ಕೆ ಬಾರದ್ದು ದುರದೃಷ್ಟಕರ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT