ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈನಾಡು: ಮಾಯವಾದ ತೇಪೆ ಡಾಂಬರೀಕರಣ

Last Updated 23 ಫೆಬ್ರುವರಿ 2012, 9:40 IST
ಅಕ್ಷರ ಗಾತ್ರ

ಬಂಟ್ವಾಳ: ವೇಣೂರಿನಲ್ಲಿ ಇತ್ತೀಚೆಗಷ್ಟೇ ನಡೆದ ಅದ್ದೂರಿ ಬಾಹುಬಲಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಇಲ್ಲಿನ ನೈನಾಡು ರಸ್ತೆಗೆ ತರಾತುರಿಯಲ್ಲಿ ಹಾಕಲಾಗಿದ್ದ ತೇಪೆ ಡಾಂಬರೀಕರಣ ಕಿತ್ತು ಹೋಗಿದ್ದು, ಜನರು ಪರದಾಡುವಂತಾಗಿದೆ.

ಇಲ್ಲಿನ ವಾಮದಪದವು-ವೇಣೂರು, ಬಂಟ್ವಾಳ-ಹೊಕ್ಕಾಡಿಗೋಳಿ, ಪುಂಜಾಲಕಟ್ಟೆ-ವೇಣೂರು, ಮೂಡು ಬಿದಿರೆ-ವೇಣೂರು ರಸ್ತೆ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಸುಮಾರು ರೂ100 ಕೋಟಿಗೂ ಮಿಕ್ಕಿ ವೆಚ್ಚದ  ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳು ಸಹಿತ ಇಲ್ಲಿನ ಜನಪ್ರತಿನಿಧಿಗಳು ಹೇಳಿಕೊಂ ಡಿದ್ದರು.

ಆದರೆ ಮಸ್ತಕಾಭಿಷೇಕ ಆರಂಭ ಗೊಂಡ ಬಳಿಕವೂ ಬಂಟ್ವಾಳ -ಮೂಡುಬಿದಿರೆ, ನೈನಾಡು -ನೇರಳ ಕಟ್ಟೆ ಮತ್ತಿತರ ಕಡೆಗಳಲ್ಲಿ ತೇಪೆ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದರೂ ಎಚ್ಚರಗೊಳ್ಳದ ಇಲ್ಲಿನ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ನೈನಾಡು ಪ್ರದೇ ಶದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವಾರು ಶಾಲೆ, ದೇವಸ್ಥಾನ, ಚರ್ಚ್, ಮಸೀದಿ ಹೊಂದಿರುವ ಇಲ್ಲಿಗೆ ಸರ್ಕಾರಿ ಬಸ್ ಓಡಾಟವೂ ಇಲ್ಲ.ಸಂಪೂರ್ಣ ಹದಗೆಟ್ಟಿರುವ ಇಲ್ಲಿನ ರಸ್ತೆಯಲ್ಲಿ ಅಷ್ಟೇ ಹದಗೆಟ್ಟ ಖಾಸಗಿ ಬಸ್‌ಗಳು ಮಾತ್ರ ಓಡಾಡುತ್ತಿವೆ.ರಸ್ತೆ ಸರಿಯಿಲ್ಲ ಎಂಬ ನೆಪದಲ್ಲಿ ಸಂಚಾರ ಸ್ಥಗಿತಗೊಂಡ ಪ್ರಸಂಗಗಳೂ ಸಾಕಷ್ಟು ಬಾರಿ ನಡೆದಿದೆ ಎನ್ನುತ್ತಾರೆ ಸ್ಥಳೀಯರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT