ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ರೈಲ್ವೆ: ರೂ 375.33 ಕೋಟಿ ಲಾಭ

Last Updated 19 ಡಿಸೆಂಬರ್ 2012, 8:42 IST
ಅಕ್ಷರ ಗಾತ್ರ

ಮೈಸೂರು: `ನೈರುತ್ಯ ರೈಲ್ವೆ ಮೈಸೂರು ವಿಭಾಗವು 2012-13ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಪ್ರಯಾಣಿ ಕರು, ಸರಕು ಸಾಗಣೆ ಹಾಗೂ ಇತರೆ ಮೂಲಗಳಿಂದ ಒಟ್ಟು ರೂ. 375.53 ಕೋಟಿ ಆದಾಯಗಳಿಸಿದೆ' ಎಂದು ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾ ಪಕ ವಿನೋದ್‌ಕುಮಾರ್ ಹೇಳಿದರು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.

`3.56 ಕೋಟಿ ಪ್ರಯಾಣಿಕರು ಈ ವರ್ಷ ರೈಲ್ವೆಯಲ್ಲಿ ಪ್ರಯಾಣಿಸಿದ್ದು, ಕಳೆದ ಬಾರಿಯ 3.49 ಕೋಟಿಗಿಂತ ಶೇ 5.11ರಷ್ಟು ಪ್ರಯಾಣಿಕರ ಸಂಖ್ಯೆ ಯಲ್ಲಿ ಹೆಚ್ಚಳವಾಗಿದೆ. ಪ್ರಯಾಣಿಕ ರಿಂದ ರೂ. 101.75 ಕೋಟಿ ಆದಾಯ ಬಂದಿದೆ. ಪ್ರತಿ ನಿತ್ಯ 313 ವ್ಯಾಗನ್ಸ್‌ನಂತೆ 6,03,492.4 ಟನ್ ಸರಕು ಸಾಗಣೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಶೇ 0.5 ರಷ್ಟು ಈ ಪ್ರಮಾಣ ಹೆಚ್ಚಾಗಿದ್ದು, 2012ರ ನವೆಂಬರ್‌ನಲ್ಲಿ 6,00,185,6 ಟನ್ ಸರಕು ಸಾಗಣೆ ಮಾಡಲಾಗಿತ್ತು. ಕಳೆದ ವರ್ಷ 3.96 ಮಿಲಿಯನ್ ಟನ್ ಹಾಗೂ ಈ ವರ್ಷ 4.75 ಮಿಲಿಯನ್ ಟನ್ ಸರಕು ಸಾಗಣೆ ಮಾಡಲಾಗಿದೆ' ಎಂದು ವಿವರಿಸಿದರು.

`ಮೈಸೂರು ರೈಲು ನಿಲ್ದಾಣದಲ್ಲಿ 24 ಗಂಟೆ ಉಚಿತ ಚಿಕಿತ್ಸೆ ನೀಡುವ ವೈದ್ಯಕೀಯ ಸೇವಾ ಕೇಂದ್ರವನ್ನು ತೆರೆಯಲಾಗಿದೆ. 10 ಟಿಕೆಟ್ ಕಾದಿರಿ ಸುವ ಕೇಂದ್ರ, 32 ಯುಟಿಎಸ್ ಕೇಂದ್ರ, 21 ಜನಸಾಧಾರಣ್ ಟಿಕೆಟ್ ಬುಕ್ಕಿಂಗ್ ಕೇಂದ್ರ ಆರಂಭಿಸಲಾಗಿದೆ. ಹೊಸದಾಗಿ 23 ಜನಸಾಧಾರಣ್ ಕೇಂದ್ರಗಳನ್ನು ತೆರೆಯುವ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. ಇದರಿಂದ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುವುದು ತಪ್ಪಲಿದೆ. ರೈಲು ಹಾಗೂ ನಿಲ್ದಾಣದಲ್ಲಿ ಮಾಹಿತಿ- ಮನರಂಜನೆ ಒದಗಿಸುವ ಸಿ.ಸಿ ಟಿ.ವಿ (ಇನ್‌ಫೋಟೇನ್‌ಮೆಂಟ್) ಅಳವಡಿ ಸಲಾಗಿದೆ' ಎಂದು ಹೇಳಿದರು.

`ಮೈಸೂರು- ಚಾಮರಾಜನಗರ-ಮೈಸೂರು, ಮೈಸೂರು- ಶ್ರವಣ ಬೆಳಗೊಳ- ಮೈಸೂರು, ಮೈಸೂರು- ಶಿರಡಿ ಸಾಯಿನಗರ- ಮೈಸೂರು, ಶಿವಮೊಗ್ಗ ಟೌನ್-ಮೈಸೂರು- ಶಿವಮೊಗ್ಗ ಟೌನ್, ಬೆಂಗಳೂರು ಸಿಟಿ- ಶಿವಮೊಗ್ಗ ಟೌನ್-ಬೆಂಗಳೂರು ಸಿಟಿ ರೈಲುಗಳು ಬಜೆಟ್ ಘೋಷಣೆ ಯಂತೆ ಸಂಚರಿಸುತ್ತಿವೆ. ಪ್ರಯಾಣಿಕರ ಅನುಕೂ ಲದ ದೃಷ್ಟಿಯಿಂದ ರೈಲು ನಿಲ್ದಾಣದ ಆವರಣದಲ್ಲಿ ಬ್ಯಾಟರಿ ಚಾಲಿತ ವಾಹನ, ಎಲ್.ಸಿ.ಡಿ ಪರದೆ, ಕೆಎಸ್‌ಆರ್‌ಟಿಸಿ ಬಸ್ ವೇಳಾಪಟ್ಟಿ ಹಾಗೂ ರೈಲುಗಳ ವೇಳಾಪಟ್ಟಿ ಅಳವಡಿಸಲಾ ಗಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT