ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ರಬ್ಬರ್ ಆಮದು ಸುಂಕ ಏರಿಕೆ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶೀಯ ರಬ್ಬರ್‌ ಬೆಲೆ ತೀವ್ರವಾಗಿ ಕುಸಿಯುತ್ತಿರುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ನೈಸರ್ಗಿಕ ರಬ್ಬರ್‌ನ ಆಮದು ಸುಂಕ ವನ್ನು ಕೆ.ಜಿ.ಗೆ ₨30ರಷ್ಟು (ಶೇ 20 ರಷ್ಟು) ಹೆಚ್ಚಿಸಿದೆ. ಆ ಮೂಲಕ ಕರ್ನಾ ಟಕದ ಕರಾವಳಿ ಜಿಲ್ಲೆ, ಕೇರಳ ಸೇರಿದಂತೆ ದೇಶದ ವಿವಿಧೆಡೆಯ 12 ಲಕ್ಷ ರಬ್ಬರ್‌ ಬೆಳೆಗಾರರ ಹಿತಕಾಯಲು ಮುಂದಾಗಿದೆ.

ನೈಸರ್ಗಿಕ ರಬ್ಬರ್‌ ಆಮದು ಹೆಚ್ಚುತ್ತಾ ಹೋಗಿದ್ದರಿಂದ ಮಾರುಕಟ್ಟೆಯಲ್ಲಿ ದೇಶೀಯ ರಬ್ಬರ್‌ ಬೆಲೆ ಕಳವಳ ಕಾರಿ ಪ್ರಮಾಣದಲ್ಲಿ ಕುಸಿಯುತ್ತಲೇ ಇತ್ತು. ಬೆಲೆ ಕುಸಿತ ತಡೆಗೆ ಸುಂಕ ಏರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT