ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ವಿಪತ್ತು: ಪರಿಹಾರ ಏರಿಕೆ

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಮಳೆ, ಬೆಂಕಿ ಮುಂತಾದ ನೈಸರ್ಗಿಕ ವಿಪತ್ತಿ ನಿಂದ ಹಾನಿ ಸಂಭವಿಸಿದಾಗ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ವಿಧಾನಸಭೆಯಲ್ಲಿ ಸೋಮವಾರ ಆಳಂದ ಶಾಸಕ ಬಿ.ಆರ್.ಪಾಟೀಲ ಅವರ ಪ್ರಶ್ನೆಗೆ ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ಅವರ ಪರವಾಗಿ ಉತ್ತರ ಹೇಳಿದ ಕೃಷಿ ಸಚಿವ ಕೃಷ್ಣ ಬೈರೇಗೌಡ, ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಪರಿಹಾರ ನೀಡುವಂತೆ ಮತ್ತೊಮ್ಮೆ ಎಲ್ಲ ಜಿಲ್ಲಾಧಿ ಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಪಕ್ಕಾ ಮನೆ ಪೂರ್ಣ ಹಾನಿಯಾ ದರೆ ₨ ೭೦ ಸಾವಿರ, ಕಚ್ಚಾ ಮನೆ ಪೂರ್ಣ ಹಾನಿಯಾದರೆ ₨ ೧೫ ಸಾವಿರ, ಪಕ್ಕಾ ಮನೆಗೆ ಹೆಚ್ಚಿನ ಹಾನಿ ಯಾದರೆ ₨ ೬,೩೦೦, ಕಚ್ಚಾ ಮನೆಗೆ ಹೆಚ್ಚಿನ ಹಾನಿಯಾದರೆ ₨೩,೨೦೦, ಮನೆಗೆ ಭಾಗಶಃ ಹಾನಿಯಾದರೆ ₨೧,೯೦೦, ಗುಡಿಸಲು ಹಾನಿಯಾದರೆ ₨೨,೫೦೦, ದನದ ಕೊಟ್ಟಿಗೆಗೆ ಹಾನಿ ಯಾದರೆ ₨೧,೨೫೦ ಪರಿಹಾರ ನೀಡ ಲಾಗುವುದು ಎಂದು  ತಿಳಿಸಿದರು.

ಎಮ್ಮೆ, ಹಸು ಪ್ರಾಣ ಕಳೆದು ಕೊಂಡರೆ ₨ ೧೬,೪೦೦, ಎತ್ತು, ಕೋಣ ಸತ್ತರೆ ₨ ೧೫ ಸಾವಿರ, ಕರು, ಕತ್ತೆಯಾ ದರೆ ₨ ೧೦ ಸಾವಿರ, ಕುರಿ, ಮೇಕೆಯಾ ದರೆ ₨೧,೬೫೦, ಪ್ರತಿ ಕೋಳಿಗೆ ₨ ೩೭ ದರದಲ್ಲಿ (ಗರಿಷ್ಠ ₨ ೪೦೦) ನೀಡ ಲಾಗುವುದು ಎಂದರು.
ಏಕದಳ ಧಾನ್ಯಗಳ ಹುಲ್ಲು ಕಾಳು ಸಮೇತ ಬೆಂಕಿಗಾಹುತಿಯಾದರೆ ಒಂದು ಎಕರೆಗೆ ₨ ೨000ರಿಂದ ೨,೫೦೦, ೨ ಎಕರೆಯಾದರೆ ೪ರಿಂದ ೫ ಸಾವಿರ, ಅದಕ್ಕಿಂತ ಮೇಲ್ಪಟ್ಟಾದರೆ ೮ ರಿಂದ ೧೦ ಸಾವಿರ ಪರಿಹಾರ ನೀಡಲಾ ಗುವುದು. ಕಾಳು ರಹಿತ ಹುಲ್ಲು ಬೆಂಕಿ ಗಾಹುತಿಯಾದರೆ ಒಂದು ಎಕರೆಗೆ ೧೦೦ರಿಂದ ೫೦೦, ೨ ಎಕರೆಯಾದರೆ ೮೦೦ರಿಂದ ಸಾವಿರ, ೨ರಿಂದ ೩ ಎಕರೆ ಯಾದರೆ ೧,೨೦೦ರಿಂದ ೧೫೦೦, ೩ ಎಕರೆಗಿಂತ ಹೆಚ್ಚಾಗಿದ್ದರೆ ₨ ೧,೬೦೦ ರಿಂದ 2,000 ಪರಿಹಾರ ನೀಡಲಾಗು ವುದು.

ದ್ವಿದಳ ಧಾನ್ಯಗಳಾದರೆ, ಕಾಳು ಸಹಿ ತವಾಗಿದ್ದರೆ ಒಂದು ಎಕರೆಗೆ ₨ ೩,000 ರಿಂದ ೩,೫೦೦, ೨ ಎಕರೆಗೆ ೬ ರಿಂದ ೭ ಸಾವಿರ, ೨ ಎಕರೆ ಮೇಲ್ಪಟ್ಟಾದರೆ ೯ ರಿಂದ ೧೦ ಸಾವಿರ, ಕಾಳು ರಹಿತವಾ ದರೆ ಒಂದು ಎಕರೆಗೆ ೫೦೦ರಿಂದ ೬೦೦, ೨ ಎಕರೆಗೆ ೧೦೦೦ ದಿಂದ ೧,೨೦೦, ೨ ಎಕರೆ ಮೇಲ್ಪಟ್ಟು ೧,೫೦೦ ರಿಂದ ೨ ಸಾವಿರ, ಎಣ್ಣೆ ಕಾಳುಗಳು ಕಾಳು ಸಹಿತ ಬೆಂಕಿಗೆ ಆಹುತಿಯಾದರೆ ಒಂದು ಎಕರೆಗೆ ೪ ರಿಂದ ೫ ಸಾವಿರ, ಅದಕ್ಕಿಂತ ಹೆಚ್ಚಾದರೆ ೮ ಸಾವಿರದಿಂದ ೧೦ ಸಾವಿರ, ಕಾಳು ರಹಿತವಾದರೆ ಒಂದು ಎಕರೆಗೆ ೮೦೦ ರಿಂದ 1 ಸಾವಿರ, ಅದಕ್ಕಿಂತ ಹೆಚ್ಚಿದ್ದರೆ ₨ ೧,೬೦೦ದಿಂದ ೨000 ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಇತರೆ ಬೆಳೆಗಳು ನಷ್ಟವಾದರೆ ಉಪ ವಿಭಾಗ ಮಟ್ಟದ ಸಮಿತಿ ಪರಿಶೀಲಿಸಿ ಗರಿಷ್ಠ ₨ ೧೦ ಸಾವಿರ ಪರಿಹಾರ ನೀಡ ಬಹುದಾಗಿದೆ ಎಂದೂ ಹೇಳಿದರು. ನೈಸರ್ಗಿಕ ವಿಕೋಪದಿಂದ ಬೆಳೆಗಳು ಹಾನಿಗೀಡಾದಾಗ ತಹಶೀಲ್ದಾರರು ತಕ್ಷಣಕ್ಕೆ ₨ ೫೦೦ ಪರಿಹಾರ ನೀಡುತ್ತಾರೆ. ನಂತರ ಹೆಚ್ಚಿನ ಪರಿಹಾರ ಬರುವುದೇ ಇಲ್ಲ ಎಂದು ಪಾಟೀಲ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT