ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಣಗಳ ಹಾವಳಿಗೆ ಆಕ್ರೋಶಗೊಂಡು ಮುತ್ತಿಗೆ

Last Updated 17 ಸೆಪ್ಟೆಂಬರ್ 2013, 9:32 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಇಡಗೂರು ಗ್ರಾಮದ ಹೊರವಲಯದಲ್ಲಿರುವ ಬೃಹತ್‌ ಕೋಳಿ ಫಾರಂನಿಂದ ಹೊರಹಾಕುವ ಕೋಳಿ ತ್ಯಾಜ್ಯದಿಂದ ನೊಣಗಳು ಉತ್ಪತ್ತಿಯಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೋಗ ರುಜಿನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿ ಕರ್ನಾಟಕ ರೈತಸಂಘ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕೋಳಿ ಫಾರಂ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರೈತ ಸಂಘದ ಅಧ್ಯಕ್ಷ ಎಂ.ಆರ್‌.ಲಕ್ಷ್ಮೀನಾರಾಯಣ ಮಾತನಾಡಿ ಕಳೆದ ಐದಾರು ತಿಂಗಳಿನಿಂದ ಕೋಳಿ ಫಾರಂನಿಂದ ಹೊರಹಾಕು ತ್ಯಾಜ್ಯದಿಂದ ನೊಣಗಳು ಉತ್ಪತ್ತಿಯಾಗಿ ಜನರಿಗೆ ಮತ್ತು ಜಾನುವಾರುಗಳಿಗೆ ನಾನಾ ರೀತಿ ಕಾಯಿಲೆಗಳಿಗೆ ಕಾರಣವಾಗಿದ್ದು.ಈ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿ ಮನೆಯಲ್ಲಿ ವಿಪರೀತ ನೊಣಗಳು ಮುತ್ತಿಕೊಳ್ಳುತ್ತಿವೆ ತಿನ್ನುವ ಆಹಾರ,ಮತ್ತಿತರ  ಪದಾರ್ಥಗಳ ಮೇಲೆ ಕುಳಿತು ರೋಗಗಳು ಹರಡಲು ಕಾರಣವಾಗಿದೆ.

 ಒಂದು ತಿಂಗಳ ಹಿಂದೆ ಈ ಕೋಳಿ ಫಾರಂನಿಂದ ಉತ್ಪತ್ತಿಯಾಗು ನೊಣಗಳನ್ನು ತಡೆಗಟ್ಟುವಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಸಮಯದಲ್ಲಿ ತಹಶೀಲ್ದಾರ್‌ ಮತ್ತು ಪೊಲೀಸ್‌ ಇಲಾಖೆ ಮಧ್ಯ ಪ್ರವೇಶಮಾಡಿ ಕೋಳಿ ಫಾರಂ ಮಾಲೀಕರೊಂದಿಗೆ ಚರ್ಚಿಸಿ  ನೊಣಗಳ ಹಾವಳಿಯನ್ನು ತಡಯುವಂತೆ ಭರವಸೆ ನೀಡಿ ತಿಂಗಳುಗಳು ಕಳೆದರು  ಪ್ರಯೋಜನವಾಗಿಲ್ಲ. ಕೂಡಲೇ ಕೋಳಿ ಫಾರಂನ್ನು ಮುಚ್ಚಬೇಕು ಇಲ್ಲವೇ ನೊಣಗಳು ಉತ್ಪತ್ತಿಯಾಗಿ ಕೆಟ್ಟವಾಸನೆ ಬರುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

 ಕರ್ನಾಟಕ ರಾಜ್ಯ ರೈತ ಸಂಘದವರು ಸುತ್ತಮುತ್ತಲಿನ ಗ್ರಾಮಸ್ಥರು ಬೃಹತ್‌ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಸಮಯಕ್ಕೆ ಸರಿಯಾಗಿ ಸಂಬಂಧಪಟ್ಟ ಅಧಿಕಾರಿಗಳು ಬರದಿದ್ದಾಗ ತಾಳ್ಮೆ ಕಳೆದುಕೊಂಡ ರೈತರು ಗ್ರಾಮಸ್ಥರು ತಹಶೀಲ್ದಾರ್‌ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್‌ ಮಾತನಾಡಿ ಉತ್ಪತ್ತಿಯಾಗುವ ನೊಣಗಳನ್ನು  ತಡೆಗಟ್ಟದಿದ್ದರೆ ಗ್ರಾಮ ಪಂಚಾ­ಯಿತಿಯಿಂದ ಪಡೆದಿರುವ ಪರವಾನಿಗೆಯನ್ನು ರದ್ದುಪಡಿಸುವಂತೆ  ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ ನಂತರ ಪ್ರತಿಭಟನಾ­ಕಾರರು ಪ್ರತಿಭಟನೆಯನ್ನು ಹಿಂಪಡೆದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಲೋಕೇಶ್‌­ಗೌಡ,­ನವೀನ್‌,­ರವಿಕುಮಾರ್‌,­ಸುರೇಶ್‌ ಸೇರಿದಂತೆ ಸುತ್ತಮುತ್ತಲಿನ ಅಪಾರ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT