ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನೊಬೆಲ್ ಪದಕ' ಹರಾಜು

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಐಎಎನ್‌ಎಸ್): `ಡಿಎನ್‌ಎ' ಸಂಶೋಧನೆಗಾಗಿ ವಿಜ್ಞಾನಿ ಫ್ರಾನ್ಸಿಸ್ ಕ್ರಿಕ್ ಅವರಿಗೆ 1962ರಲ್ಲಿ ನೀಡಲಾದ ನೊಬೆಲ್ ಪದಕ 20 ಲಕ್ಷ ಡಾಲರ್‌ಗೆ (ರೂ.11 ಕೋಟಿ) ಹರಾಜಾಗಿದೆ.

ಶರೀರ ವಿಜ್ಞಾನ ವಿಭಾಗದಲ್ಲಿ ದೊರಕಿದ್ದ ಈ ಪ್ರತಿಷ್ಠಿತ ಪುರಸ್ಕಾರವನ್ನು ಕ್ರಿಕ್ ಅವರು ವಿಜ್ಞಾನಿಗಳಾದ ಜೇಮ್ಸ ವ್ಯಾಟ್ಸನ್ ಮತ್ತು ಮೌರಿಸ್ ವಿಕಿನ್ಸ್ ಅವರೊಂದಿಗೆ ಹಂಚಿಕೊಂಡಿದ್ದರು. ಕ್ರಿಕ್ ಅವರ ಪತ್ನಿ ಅಸುನೀಗಿದ ಬಳಿಕ ನೊಬೆಲ್ ಪದಕವನ್ನು ಕ್ಯಾಲಿಫೋರ್ನಿಯಾದಲ್ಲಿ ಸಂರಕ್ಷಿಸಿ ಇಡಲಾಗಿತ್ತು. ಈಗ ಕ್ರಿಕ್ ಅವರ ಹಕ್ಕುದಾರರು ಪದಕವನ್ನು ಹರಾಜು ಹಾಕಿದ್ದಾರೆ.

`ಡಿಎನ್‌ಎ ರಚನೆಯ ಸಂಶೋಧನೆ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿತ್ತು. ಅದು ಜೀವದ ಬಗ್ಗೆ ಮಾನವನ ಕಲ್ಪನೆಯನ್ನೇ ಬದಲಾಯಿಸಿತ್ತು. ಈ ಪದಕವು ಜೀವ ವಿಜ್ಞಾನ ಕ್ಷೇತ್ರದಲ್ಲಿ ದಾಖಲಾದ ಹೊಸ ಮೈಲಿಗಲ್ಲಿನ ಕುರುಹು' ಎಂದು ಐತಿಹಾಸಿಕ ಹಸ್ತಪ್ರತಿಗಳ ಹರಾಜು ಸಂಸ್ಥೆ ನಿರ್ದೇಶಕಿ ಸ್ಯಾಂಡ್ರಾ ಪಾಲೊಮಿನೊ  ಹೇಳಿದ್ದಾರೆ.

ಹರಾಜಿನಿಂದಾಗಿ ಸಂಗ್ರಹವಾದ ಮೊತ್ತದಲ್ಲಿ ಅರ್ಧದಷ್ಟನ್ನು ಲಂಡನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ `ಫ್ರಾನ್ಸಿಸ್ ಕ್ರಿಕ್ ಶಿಕ್ಷಣ ಸಂಸ್ಥೆ' ಪಡೆಯಲಿದೆ. ಈ ಸಂಸ್ಥೆಯು 2015ರಲ್ಲಿ ಪೂರ್ಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT