ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊವಾಕ್‌ ಜೊಕೊವಿಚ್‌ಗೆ ಬೆಕರ್‌ ನೂತನ ಕೋಚ್‌

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಲ್‌ಗ್ರೇಡ್‌ (ಎಎಫ್‌ಪಿ): ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಟೆನಿಸ್‌ ದಂತಕತೆ ಬೋರಿಸ್‌ ಬೆಕರ್‌  ಅವರನ್ನು ತಮ್ಮ ಮುಖ್ಯ ಕೋಚ್‌ ಆಗಿ ನೇಮಿಸಿಕೊಂಡಿದ್ದಾರೆ.

‘ಜರ್ಮನಿಯ ಬೋರಿಸ್‌ ಅವರಿಂದ ಮಾರ್ಗದರ್ಶನ ಪಡೆಯಲು ಖುಷಿಯಾಗುತ್ತಿದೆ’ ಎಂದು ಜೊಕೊವಿಚ್‌ ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ. ‘46 ವರ್ಷ ವಯಸ್ಸಿನ ಬೋರಿಸ್‌ ನಿಜವಾದ ದಂತಕತೆ. ಅವರಿಗೆ ಟೆನಿಸ್‌ ಬಗ್ಗೆ ಅದ್ಭುತವಾದ ಜ್ಞಾನವಿದೆ. ಅವರ ಅನುಭವ ಖಂಡಿತ ನನ್ನ ನೆರವಿಗೆ ಬರಲಿದೆ.

ಗ್ರ್ಯಾಂಡ್‌ಸ್ಲಾಮ್‌ನಲ್ಲಿ ಗೆಲ್ಲಲು ಸಹಾಯವಾಗಲಿದೆ’ ಎಂದು ಅವರು ನುಡಿದಿದ್ದಾರೆ.

ಮೆಲ್ಬರ್ನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಾಗಿ ಅವರೀಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಸದ್ಯ ಎರಡನೇ ರ್‍ಯಾಂಕ್‌ನಲ್ಲಿರುವ ನೊವಾಕ್‌ ಆರು ಬಾರಿ ಗ್ರ್ಯಾಂಡ್‌ಸ್ಲಾಮ್‌ ಸಿಂಗಲ್ಸ್‌ ಚಾಂಪಿಯನ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT