ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಕಿಯಾ `ಆಶಾ'ದಲ್ಲಿ ಫೇಸ್‌ಬುಕ್ ಸೌಲಭ್ಯ

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: ಯುವಜನರನ್ನು ಮೆಚ್ಚಿಸುವ ಸಲುವಾಗಿ ನೋಕಿಯಾದ ಹೊಸ ಆಶಾ 205 ಮೊಬೈಲ್ ಹ್ಯಾಂಡ್‌ಸೆಟ್‌ನಲ್ಲಿ `ಫೇಸ್‌ಬುಕ್' ಸಂಪರ್ಕ ಸೌಲಭ್ಯಅಳವಡಿಸಲಾಗಿದೆ ಎಂದು `ನೋಕಿಯಾ ಇಂಡಿಯಾ' ಮಾರುಕಟ್ಟೆ ನಿರ್ದೇಶಕ ವಿರಲ್ ಓಝಾ ಇಲ್ಲಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೇಸ್‌ಬುಕ್ ಷಾರ್ಟ್‌ಕಟ್ ಕೀ ಹೊಂದಿರುವ ನೋಕಿಯಾದ ಮೊದಲ ಫೋನ್ ಇದಾಗಿದೆ. ಜನಪ್ರಿಯ ಸಾಮಾಜಿಕ ತಾಣದ ತ್ವರಿತ ಸಂಪರ್ಕಕ್ಕೆ ಇದು ಸಹಕಾರಿ. ಇದರಲ್ಲಿ 40 ಉಚಿತ ಗೇಮ್‌ಗಳೂ ಇವೆ. ಹ್ಯಾಂಡ್‌ಸೆಟ್ ಬೆಲೆ ರೂ. 3,499. ಡಿ. 24ರಿಂದ ಭಾರತದೆಲ್ಲೆಡೆ ಲಭ್ಯವಿರಲಿದೆ ಎಂದರು. ಫೇಸ್‌ಬುಕ್ ಇಂಡಿಯಾದ ಕೆವಿನ್ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT