ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಕಿಯಾ: ವಿಂಡೋಸ್ ಸ್ಮಾರ್ಟ್‌ಫೋನ್

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆ ಕಂಪೆನಿ ನೋಕಿಯಾ, ವಿಂಡೋಸ್ ಕಾರ್ಯನಿರ್ವಹಣಾ ತಂತ್ರಾಂಶ (ಒಎಸ್) ಹೊಂದಿರುವ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

`ಲುಮಿಯಾ 800~ ಮತ್ತು `ಲುಮಿಯಾ 710~ ಹೆಸರಿನ ಈ ಸ್ಮಾ ರ್ಟ್ ಫೋನ್‌ಗಳ ಬೆಲೆ ಕ್ರಮವಾಗಿ ್ಙ29,000 ಮತ್ತು ್ಙ19,000.

ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ನೋಕಿಯಾ ಮೊದಲ ಸ್ಥಾನದಲ್ಲಿದ್ದರೂ, ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಆ್ಯಪಲ್ ಮತ್ತು ಸ್ಯಾಮ್ಸಂಗ್‌ನ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಗೂಗಲ್ ಆಂಡ್ರಾಯ್ಡ ಸ್ಮಾಟರ್ಡ್‌ಫೋನ್‌ಗಳು ನೋಕಿಯಾಗೆ ತೀವ್ರ ಸ್ಪರ್ಧೆ ಒಡ್ಡುತ್ತಿವೆ.

ಸ್ಮಾರ್ಟ್‌ಫೋನ್‌ಗಳ ಜತೆಗೆ `ಆಶಾ~ ಹೆಸರಿನ 4 ಹೊಸ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನೂ ಕಂಪೆನಿ ಬಿಡುಗಡೆ ಮಾಡಿದೆ. ಆಶಾ ಮಾದರಿಯ  ಮೊಬೈಲ್‌ಗಳ ಬೆಲೆ  ್ಙ4,100ರಿಂದ ್ಙ8,000ರವರೆಗೆ ಇದೆ.

`ಮೊಬೈಲ್ ಇಂಟರ್‌ನೆಟ್ ಮಾರುಕಟ್ಟೆಯತ್ತ ಕಂಪೆನಿ ಹೆಚ್ಚಿನ ಗಮನ ಹರಿಸುತ್ತಿದ್ದು, ಪ್ರವರ್ಥಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ `ವಿಂಡೋಸ್ ಸ್ಮಾರ್ಟ್‌ಫೋನ್~ ಬಿಡುಗಡೆ ಮಾಡುತ್ತಿದ್ದೇವೆ ಎಂದು ನೊಕಿಯಾದ ಅಧ್ಯಕ್ಷ  ಸ್ಟೀಪನ್ ಇಲಪ್  ಹೇಳಿದ್ದಾರೆ.

`ಆಶಾ~ ಎಂದರೆ ಹಿಂದಿಯಲ್ಲಿ ಭರವಸೆ ಎಂದರ್ಥ. ವಿಶೇಷವಾಗಿ ಆಶಾ ಸರಣಿಯ ಮೊಬೈಲ್‌ಗಳನ್ನು ಸ್ಥಳೀಯವಾಗಿ, ಭಾರತೀಯ ಗ್ರಾಹಕರಿಗೆಂದೇ ವಿನ್ಯಾಸಗೊಳಿಸಲಾಗಿದೆ. ಅಗ್ಗದ ದರ ಈ ಮೊಬೈಲ್‌ಗಳು ಈ ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬರಲಿವೆ ಎಂದು ನೋಕಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮೇರಿ ಮ್ಯಾಕ್‌ಡೊವೆಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT