ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟ್‌ಬುಕ್: ಅತ್ಯುತ್ತಮ ಸಂಗಾತಿ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೆಲ ವರ್ಷಗಳ ಹಿಂದಿನವರೆಗೂ  ರಜಾ ದಿನಗಳಲ್ಲಿನ ಪ್ರವಾಸ, ಹೋಟೆಲ್ ಬುಕಿಂಗ್ ಮಾಡುವುದು ತುಂಬ ಪ್ರಯಾಸದ ಕೆಲಸವಾಗಿತ್ತು.
 
ರೈಲ್ವೆ, ಬಸ್ ಟಿಕೆಟ್  ಕಾದಿರಿಸಲು ಮೈಲುದ್ದದ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಆನ್‌ಲೈನ್ ಟಿಕೆಟಿಂಗ್ ಮತ್ತು ಟ್ರಾವೆಲ್ ಪೋರ್ಟಲ್‌ಗಳ ಅನ್ವೇಷಣೆಯ ನಂತರ ಈಗ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬುಕಿಂಗ್ ಮಾಡಬಹುದಾದ ಸೌಲಭ್ಯ ದೊರೆತಿದೆ.

ಇದು ಬರೀ ನಗರವಾಸಿಗಳಿಗಷ್ಟೇ ಸೀಮಿತವಾಗಿಲ್ಲ. ಸಣ್ಣ ಪಟ್ಟಣಗಳ ಜನರೂ ಇಂಟರ್‌ನೆಟ್ ಮೂಲಕ ಬುಕಿಂಗ್ ಮಾಡುವ ಸೌಲಭ್ಯ ಬಳಸುತ್ತಿದ್ದಾರೆ.

ದೇಶದಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕ ಜಾಲ ವಿಸ್ತರಣೆ ಆಗಿರುವುದರಿಂದ ಕುಗ್ರಾಮಗಳಲ್ಲೂ ಅತ್ಯುತ್ತಮ ರೀತಿಯಲ್ಲಿ ಮಾಹಿತಿ ಮತ್ತು ಮನರಂಜನೆ ಪಡೆಯಲು ಅವಕಾಶವಿದೆ.

ದೇಶದಲ್ಲಿ ಸದ್ಯಕ್ಕೆ 80 ದಶಲಕ್ಷ ಇಂಟರ್‌ನೆಟ್ ಬಳಕೆದಾರರಿದ್ದು ಇದರ ಸಂಖ್ಯೆ 2015ರ ವೇಳೆಗೆ 250 ದಶಲಕ್ಷಕ್ಕೆ ಏರುವ ಸಾಧ್ಯತೆ ಇದೆ.

ಕಂಪ್ಯೂಟಿಂಗ್ ಉಪಕರಣಗಳ ವಿಚಾರಕ್ಕೆ ಬಂದರೆ ದೇಶಿ ಗ್ರಾಹಕರಿಗೆ ವೈವಿಧ್ಯಮಯ ಆಯ್ಕೆಗಳಿವೆ. ಮೊಟ್ಟಮೊದಲ ಬಾರಿಗೆ ಕೊಳ್ಳುವವರಿಗೆ ನೋಟ್‌ಬುಕ್ ಅವರ ಎಲ್ಲ ಅಗತ್ಯಗಳನ್ನೂ ಅತ್ಯುತ್ತಮವಾಗಿ ಪೂರೈಸುತ್ತದೆ.

ಇದು ವೇಗವಾಗಿ ಕಾರ್ಯ ನಿರ್ವಹಿಸುವ ಮತ್ತು ದೀರ್ಘಾವಧಿ ಬ್ಯಾಟರಿ ಸೌಲಭ್ಯ,  ಒರಟಾಗಿ ಬಳಸಬಲ್ಲ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕೈಗೆಟುಕುವಂತಿದೆ. ನಮ್ಮದು `ಹಣಕ್ಕೆ ತಕ್ಕ ಮೌಲ್ಯ~ ನಿರೀಕ್ಷೆ ಮಾಡುವ ಮಾರುಕಟ್ಟೆ.
 
ತಾವು ನೀಡುವ ಹಣಕ್ಕೆ ತಕ್ಕಂತೆ ಇದೆ ಎಂಬ ಖಚಿತ ಭರವಸೆ ಇಲ್ಲದಿದ್ದರೆ ನಮ್ಮ ಗ್ರಾಹಕರು ಯಾವುದೇ ಸರಕನ್ನು ಕೊಳ್ಳುವುದೇ ಇಲ್ಲ.ಅಲ್ಲದೇ ಕೈಗೆಟುಕುವಂತಿದ್ದರೆ ಮಾತ್ರ ಉತ್ಪನ್ನಕ್ಕೆ ಬೇಡಿಕೆ ಇರುತ್ತದೆ.

ಬಹಳ ಕಾಲದಿಂದಲೂ ಕಂಪ್ಯೂಟರ್‌ಗಳು ಹೆಚ್ಚಿನ ಬೆಲೆಯ ಕಾರಣದಿಂದಲೇ ಅವುಗಳನ್ನು ಕೊಳ್ಳಲು ಜನರು  ಹಿಂಜರಿಯುತ್ತಿದ್ದರು.

ನೋಟ್‌ಬುಕ್ ಎಲ್ಲ ಕಂಪ್ಯೂಟಿಂಗ್ ಉಪಕರಣಗಳಲ್ಲೂ ಅತ್ಯಂತ ಕಡಿಮೆ ಬೆಲೆಯಾಗಿದ್ದು ಕೇವಲ ರೂ 10,000ಗಳಿಗೆ ಲಭ್ಯ.

ಸಾಧಾರಣ ಬಳಕೆದಾರರಿಗೆ  ಹೆಚ್ಚು ಸಾಮರ್ಥ್ಯದ ಕಂಪ್ಯೂಟರ್ ಬೇಕಾಗಲಾರದು. ಸದ್ಯಕ್ಕೆ ಇಂಟರ್‌ನೆಟ್ ಮೂಲಕ  ನೂರಾರು ಅಪಿಕ್ಲೇಷನ್ಸ್‌ಗಳು  ಲಭ್ಯ ಇವೆ.

ಅವುಗಳು ನಿಮ್ಮ ನೋಟ್‌ಬುಕ್‌ನಲ್ಲಿ ಈಗಾಗಲೇ ಇರಬಹುದು ಅಥವಾ ಇಂಟರ್‌ನೆಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅವು ನಿಮ್ಮ ಕಚೇರಿ ಕೆಲಸಕ್ಕೆ ಅಗತ್ಯವಾಗಿರಬಹುದು, ಗೇಮ್ಸನಂತೆ ಮನರಂಜನೆ ನೀಡಬಹುದು ಅಥವಾ ಕಲಿಕೆಯ  ಸಾಫ್ಟ್‌ವೇರ್ ಆಗಿರಬಹುದು.
 
ನೋಟ್‌ಬುಕ್‌ನೊಂದಿಗೆ ಈ ಎಲ್ಲ ಸೇವೆಗಳನ್ನೂ ನೀವು ಬಳಸಬಹುದು. ನೋಟ್‌ಬುಕ್ ಹಗುರ, ಕಿರಿದಾಗಿದ್ದು ಮತ್ತು ಸುಲಭವಾಗಿ ಎಲ್ಲೆಡೆಗೂ ಹೊತ್ತೊಯ್ಯಬಹುದು. 

ಡೇಟಾಕಾರ್ಡ್ ಇಟ್ಟುಕೊಂಡರೆ ನೀವು ಎಲ್ಲಿದ್ದರೂ ಯಾವ ಸಮಯದಲ್ಲಾದರೂ ಆನ್‌ಲೈನ್ ಸಂಪರ್ಕದಲ್ಲಿ ಇರಬಹುದು.ದೀರ್ಘ ಬ್ಯಾಟರಿ ಸಾಮರ್ಥ್ಯ ಇರುವುದರಿಂದ ವಿದ್ಯುತ್ ಸಂಪರ್ಕಕ್ಕಾಗಿ ಹುಡುಕಾಟ ನಡೆಸಬೇಕಾದ ಅಗತ್ಯ ಎದುರಾಗದು.

ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ವಿದ್ಯುತ್ ಪೂರೈಕೆ ಅಸಮರ್ಪಕವಾಗಿರುವುದರಿಂದ ಅಲ್ಲಿ ಇದು ವರದಾನ. ಒಮ್ಮೆ ಚಾರ್ಜ್ ಮಾಡಿದರೆ ನೋಟ್‌ಬುಕ್ ಆರರಿಂದ ಎಂಟು ಗಂಟೆಗಳ ಕಾಲ ಬಳಸಬಹುದು.

ಏಸಸ್, ಸ್ಯಾಮ್‌ಸಂಗ್, ಏಸರ್ ಮತ್ತು ಲೆನೊವೊ ಕಂಪನಿಗಳ ಹೊಸನೋಟ್‌ಬುಕ್‌ಗಳು  ಸುಧಾರಿತವಾಗಿವೆ. ಇಂಟೆಲ್ ಆಟಮ್ ಪ್ರೊಸೆಸರ್‌ನೊಂದಿಗೆ ಮೀಗೊ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಟೆಲ್ ಆಪ್‌ಅಪ್ ಸ್ಟೋರ್‌ನಿಂದ ಈ ಎಲ್ಲ ಬದಲಾವಣೆಗಳು ಸಾಧ್ಯವಾಗಿವೆ.

ಕೈಗೆಟುಕು ದರ ಮತ್ತು ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಬಲ್ಲ ಈ ನೋಟ್‌ಬುಕ್‌ಗಳು ದೇಶದಲ್ಲಿ ಡಿಜಿಟಲ್ ಕ್ರಾಂತಿ ಮುನ್ನಡೆಸುತ್ತಿವೆ. ಮುಖ್ಯವಾಗಿ ಇಂತಹ ಉಪಕರಣಗಳು ದೇಶದಲ್ಲಿನ `ತಂತ್ರಜ್ಞಾನ  ಅಂತರ~   ನಿವಾರಿಸಲೂ ನೆರವಾಗುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT