ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡ ಬನ್ನಿ ಬನ್ನೂರು ಬಂಡಿ

Last Updated 18 ಫೆಬ್ರುವರಿ 2011, 7:20 IST
ಅಕ್ಷರ ಗಾತ್ರ

ಬನ್ನೂರು: ಪಟ್ಟಣದಲ್ಲಿ ಹಬ್ಬದ ಸಂಭ್ರಮ. ಎಲ್ಲ ಬೀದಿಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತ ನೋಡುಗರನ್ನು ಸೆಳೆಯುತ್ತಿದ್ದು, ಹಬ್ಬದ ಪ್ರಮುಖ ಆಕರ್ಷಣೆಯಾದ ಬಂಡಿ ಶುಕ್ರವಾರ ಸಾಯಂಕಾಲ ನಡೆಯಲಿದ್ದು, ಇದಕ್ಕಾಗಿ ಇಡೀ ಗ್ರಾಮ ಪೂರ್ಣವಾಗಿ ಸಜ್ಜುಗೊಂಡಿದೆ. ರತ್ನಮಹಲ್ ಚಿತ್ರಮಂದಿರದ ಮುಂಭಾಗದಲ್ಲಿ ಹಿಂದಿನಿಂದಲೂ ಬಂಡಿ ಉತ್ಸವವನ್ನು ನಡೆಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬಂಡಿ ಕಾರ್ಯವು ವ್ಯವಸ್ಥಿತವಾಗಿ ನಡೆಸಲು ಮುಖ್ಯ ರಸ್ತೆಯ ಅಕ್ಕಪಕ್ಕದ ಪೆಟ್ಟಿ  ಅಂಗಡಿಯನ್ನು ತೆರವು ಗೊಳಿಸಲಾಗಿದೆ.

ಬಂಡಿ ಹಬ್ಬ ಸಮೀಪಿಸುತ್ತಿದ್ದಂತೆ ಬಂಡಿಯನ್ನು ಪೂರ್ವಾಭಾವಿಯಾಗಿ ದುರಸ್ತಿಗೊಳಿಸಿ, ಬಣ್ಣವನ್ನು ಲೇಪಿ ಸಲಾಗಿರುತ್ತದೆ. ಬಂಡಿಯನ್ನು ನೋಡಲು ಸುತ್ತಮುತ್ತಲಿನ ಗ್ರಾಮ ಗಳಿಂದ ಸಾವಿರಾರು ಜನರು ಆಗಮಿಸುವ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರತೀತಿಯಂತೆ ಶುಕ್ರವಾರ ಮುಂಜಾನೆ ದೇವಿಯು ಸಮೀಪದ  ದೇವಿ ತೋಪಿಗೆ ತೆರಳಿ ಅಲ್ಲಿ ಕಾವೇರಿ ಮಜ್ಜನ, ಅನ್ನಸಂತರ್ಪಣೆಯ ಕಾರ್ಯಮುಗಿದ ಬಳಿಕ ದೇವಿ ಯನ್ನು ಮಡಿ ಮಂಟಪಕ್ಕೆ ತರಲಾಗುವುದು. ನಂತರ ರಾಸುಗಳಿಗೆ ಪೂಜೆ ಸಲ್ಲಿಸಿ ಬಂಡಿ ಓಟಕ್ಕೆ ಚಾಲನೆ ನೀಡಲಾಗುತ್ತದೆ.

ಬಂಡಿ ರಾಸುಗಳ ಓಟವೇ ಒಂದು ಮನಮೋಹಕ. ಬಂಡಿಯಲ್ಲಿ ಒಬ್ಬರಿಗೆ ಮಾತ್ರ ಸ್ಥಳಾವಕಾಶವಿದ್ದು, ಅದರೊಟ್ಟಿಗೆ ಮತ್ತಿಬ್ಬರು ಓಡುತ್ತಾರೆ. ಕಾಯಿಲೆಗೆ ತುತ್ತಾದ ರಾಸುಗಳು ಬಂಡಿಗೆ ಕಟ್ಟುವುದಾಗಿ ಹರಕೆ ಹೊತ್ತರೆ  ಜಾನುವಾರುಗಳ ಕಾಯಿಲೆ ನಿವಾರಣೆಯಾಗುತ್ತದೆ ಎನ್ನುವುದು ರೈತರ ನಂಬಿಕೆ.

23 ರಂದು ಕುಸ್ತಿ ಪಂದ್ಯಾವಳಿ
ಪಟ್ಟಣದಲ್ಲಿ ಹೇಮಾದ್ರಂಬ ಜಾತ್ರೆ ಹಾಗೂ ಮಾರಿಹಬ್ಬದ ಪ್ರಯುಕ್ತ ಕರವೇ ಸಹಯೋಗದಲ್ಲಿ ಫೆ. 23 ರಂದು ಫುಟ್ಬಾಲ್ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಿ.ನರಸೀಪುರ ತಾಲ್ಲೂಕು ಅಧ್ಯಕ್ಷ ಬಿ.ಎನ್. ಬಾಲರಾಜ್ ತಿಳಿಸಿದರು. ಅಂದು ಮಧ್ಯಾಹ್ನ 1 ಗಂಟೆಗೆ ಕುಸ್ತಿ ಪಂದ್ಯಾವಳಿಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ  ಟಿ.ಎ.ನಾರಾಯಣಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಸುನೀತಾ ವೀರಪ್ಪಗೌಡ ವಹಿಸಲಿದ್ದಾರೆ.

ಗೃಹ ಸಚಿವ ಆರ್.ಅಶೋಕ್ ಅವರ ವಿಶೇಷಾಧಿಕಾರಿ ರವಿಕುಮಾರ್ ಸಹ ಉಪಸ್ಥಿತರಿರುತ್ತಾರೆ. ಪಂದ್ಯಾವಳಿಯಲ್ಲಿ 20 ಜೋಡಿ ಕುಸ್ತಿ ಮಾಡಲಿವೆ. ಪಟ್ಟಣದ ಹೆಸರಾಂತ ಪೈಲ್ವಾನರನ್ನು ಇದೇ  ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬನ್ನೂರು ಜಯರಾಂ, ಪುರಸಭೆ ಅಧ್ಯಕ್ಷ ಕೃಷ್ಣೇಗೌಡ,  ಮಹಿಳಾ ಘಟಕದ ಅಧ್ಯಕ್ಷೆ ರೇವತಿ, ಹೋಬಳಿ ಅಧ್ಯಕ್ಷ ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT