ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡು ಬಾ ತುಂಬಿದ ತುಂಗಭದ್ರೆಯ ಸೊಬಗ...

Last Updated 5 ಆಗಸ್ಟ್ 2011, 5:35 IST
ಅಕ್ಷರ ಗಾತ್ರ

ಹೊಸಪೇಟೆ: ಹೈದರಾಬಾದ ಕರ್ನಾಟಕದ ಜೀವನಾಡಿ ತುಂಗಭದ್ರೆ ಇದೀಗ ಜನರ ನಿರೀಕ್ಷೆಯಂತೆ ತನ್ನ ಮಡಿಲನ್ನು ತುಂಬಿಕೊಂಡಿದ್ದಾಳೆ.

ರೈತರು ಮತ್ತು ಕೈಗಾರಿಕೆಗಳ ಮೂಲಾಧಾರವಾಗಿರುವ ತುಂಗಭದ್ರೆ ಅವಧಿಗೆ ಮುಂಚೆಯೇ ತುಂಬುವ ಮೂಲಕ ಹೊಸ ಉತ್ಸಾಹವನ್ನು ಮೂಡಿಸಿರುವುದು ಈ ಬಾರಿಯ ವಿಶೇಷವಾಗಿದೆ.

ನೈಸರ್ಗಿಕವಾಗಿ ಜಲಾಶಯದ ಗೇಟುಗಳ ಮೂಲಕ ನೀರನ್ನು ನದಿಗೆ ಬಿಡುವ ಕಾರ್ಯ ಯಾವುದೆ ಕ್ಷಣದಲ್ಲಿ ಆರಂಭವಾಗಲಿದ್ದು ಈ ರಮಣೀಯವಾದ ಚಲುವನ್ನು ನೋಡುವ ಭಾಗ್ಯ ಆಗಸ್ಟ್ ಮೊದಲ ವಾರದಲ್ಲಿ ಈ ಬಾರಿ ಲಭ್ಯವಾಗಲಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯವೂ ಕಡಿಮೆ ಆಗಿರುವುದು ಒಂದು ರೀತಿಯಲ್ಲಿ ಆತಂಕವಾಗಿದ್ದರೂ ಅವಧಿಗೆ ಮುಂಚೆಯೇ ತುಂಬುವ ಮೂಲಕ ಹೊಸ ಭರವಸೆಯನ್ನು ಮೂಡಿಸಿದೆ. ಗುರುವಾರ ಬೆಳಿಗ್ಗೆಯಿಂದ ಜಲಾಶಯದ ಒಳಹರಿವಿನಲ್ಲಿ ಏರಿಕೆ ಆಗುತ್ತಿದ್ದು ಯಾವುದೇ ಕ್ಷಣದಲ್ಲಿ ನೀರು ಹೊರಬಿಡಬಹುದಾಗಿದೆ.

ಎಚ್ಚರಿಕೆ: ಜಲಾನಯನ ಪ್ರದೇಶದಲ್ಲಿ ಮಳೆ ಮತ್ತೆ ಆರಂಭವಾಗಿರುವ ಕಾರಣ ಒಳ ಹರಿವು ಗಣನೀಯವಾಗಿ ವೃದ್ದಿಯಾಗಿದ್ದು ಯಾವುದೇ ಕ್ಷಣದಲ್ಲಿ ಜಲಾಶಯದಿಂದ ಗೇಟ್‌ಗಳ ಮೂಲಕ ನದಿಗೆ ನೀರನ್ನು ಹೊರಬಿಡಬಹು ದಾಗಿದ್ದು ನದಿ ಪಾತ್ರದ ಜನರು ಜಾಗ್ರತೆಯಿಂದ ಇರುವಂತೆ ತಾಲ್ಲೂಕು ಆಡಳಿತ ಮತ್ತು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT