ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ಕಾರ್ಯ ಒತ್ತಡ ತಗ್ಗಿಸಲು ಡಿಜಿಸಿಎ ಸೂಚನೆ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಮಾನದ ನಿರ್ವಹಣೆ ಮತ್ತು ಸಹಾಯಕ್ಕಾಗಿ ಇರುವ ನೌಕರರ ಮೇಲಿನ ಕೆಲಸದ ಒತ್ತಡದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಮಾನಯಾನ ನಿಯಂತ್ರಣ ಪ್ರಾಧಿಕಾರವಾದ ಡಿಜಿಸಿಎ, ಪೈಲಟ್ ಮತ್ತು ವಿಮಾನ ಸಿಬ್ಬಂದಿಗೆ ಇರುವಂತೆ ನೌಕರರಿಗೂ ನಿಗದಿತ ಕೆಲಸದ ಅವಧಿಯನ್ನು ಗೊತ್ತುಪಡಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ವಾಯುಯಾನ ಸಂಸ್ಥೆಗಳು ಪಾಲಿಸಲೇಬೇಕಾದ ನಿಯಮಗಳ ಕುರಿತು ಸುತ್ತೋಲೆ ಹೊರಡಿಸಿರುವ ಡಿಜಿಸಿಎ, ವಿಮಾನದ ಚಾಲಕ, ಸಿಬ್ಬಂದಿಗೆ ಇರುವಂತೆ ವಿಶ್ರಾಂತಿಯ ಸಮಯವನ್ನೂ ನೌಕರರಿಗೆ ನಿಗದಿ ಮಾಡುವಂತೆ ಸೂಚಿಸಿದೆ.
 
ವಸ್ತುಗಳ ಸರಬರಾಜು ಸೇರಿದಂತೆ ಇತರ ಕಾರ್ಯ ನಿರ್ವಹಿಸುವ ನೌಕರರ ಕೆಲಸದ ಅವಧಿಯು ವಿಶ್ರಾಂತಿ ಸಮಯವೂ ಸೇರಿ ಗರಿಷ್ಠ ಎಂಟು ಗಂಟೆ ಇರಬೇಕು ಮತ್ತು ಯಾವುದೇ ಕೆಲಸದ ಪಾಳಿ 12 ತಾಸು ಮೀರಬಾರದು.
 
ಎಲ್ಲ ವಿಮಾನಯಾನ ಸಂಸ್ಥೆಗಳೂ ಈ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ತಿಳಿಸಿದೆ. ಎರಡು ಪಾಳಿಗಳ ಮಧ್ಯದ ಅವಧಿಯಲ್ಲಿ ನೌಕರರಿಗೆ ವಿಶ್ರಾಂತಿಯ ಅಗತ್ಯವಿದೆ. ರಾತ್ರಿ ಪಾಳಿಯಲ್ಲಿ ಬಿಡುವಿಲ್ಲದೇ ಕೆಲಸ ನಿರ್ವಹಿಸುವುದರಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.
 
ಹಾಗಾಗಿ ನಿರಂತರವಾಗಿ ಎರಡಕ್ಕಿಂತ ಹೆಚ್ಚಿನ ರಾತ್ರಿ ಪಾಳಿ ಇರಬಾರದು ಮತ್ತು ಸತತ ಎರಡು ದಿನಗಳ ವಿಶ್ರಾಂತಿ ಬಳಿಕ ಮತ್ತೊಂದು ಪಾಳಿ ಮುಂದುವರಿಸುವಂತಿರಬೇಕು. ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಈ ನೌಕರರನ್ನು ಸಂಸ್ಥೆಗಳು ಸಾಕಷ್ಟು ಅವಲಂಬಿಸಿರುವುದರಿಂದ, ಸುತ್ತೋಲೆಯ ಪ್ರಕಾರವೇ ನಡೆದುಕೊಳ್ಳುವುದು ಅನಿವಾರ್ಯವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT