ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಟೊ ಪಡೆ ದಾಳಿಗೆ ಆರು ಮಕ್ಕಳು ಬಲಿ

Last Updated 27 ಮೇ 2012, 19:30 IST
ಅಕ್ಷರ ಗಾತ್ರ

ಕಾಬೂಲ್ (ಎಎಫ್‌ಪಿ): ಆಫ್ಘಾನಿಸ್ತಾನದಲ್ಲಿ ನ್ಯಾಟೊ ಪಡೆ ತಾಲಿಬಾನೀಯರನ್ನು ಗುರಿಯಾಗಿಟ್ಟುಕೊಂಡು ಭಾನುವಾರ ಮನೆಯೊಂದರ ಮೇಲೆ ನಡೆಸಿದ ವಾಯು ದಾಳಿಗೆ, ಆರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 8 ಜನ ಬಲಿಯಾಗಿದ್ದಾರೆ.

`ಇಲ್ಲಿನ ಪಕ್ತಿಯಾ ಪ್ರಾಂತ್ಯದಲ್ಲಿ ನ್ಯಾಟೊ ಪಡೆ ಶನಿವಾರ ರಾತ್ರಿ ಮನೆಯ ಮೇಲೆ ನಡೆಸಿದ ದಾಳಿಯಲ್ಲಿ ಮನೆಯ ಒಡೆಯ, ಪತ್ನಿ ಸೇರಿದಂತೆ ಆರು ಮಕ್ಕಳು ಸಾವನ್ನಪ್ಪಿದರು. ಮೃತ ವ್ಯಕ್ತಿ ತಾಲಿಬಾನ್ ಅಥವಾ ಯಾವುದೇ ಉಗ್ರಗಾಮಿ ಸಂಘಟನೆಗೆ ಸೇರಿದವನಲ್ಲ~ ಎಂದು ಸರ್ಕಾರದ ವಕ್ತಾರ ರೊವುಲ್ಲಾ ಸಮೂನ್ ತಿಳಿಸಿದ್ದಾರೆ.

ನ್ಯಾಟೊ ಪಡೆಯ ಲೆಪ್ಟಿನೆಂಟ್ ಕರ್ನಲ್ ಜಿಮ್ಮಿ ಕುಮಿಂಗ್ಸ್ ಅವರು `ದಾಳಿ ಕುರಿತು ತನಿಖೆ ನಡೆಸಲಾಗುತ್ತಿದೆ~ ಎಂದು ಪ್ರತಿಕ್ರಿಯಿಸಿದ್ದಾರೆ. ಘಟನೆ ಸಂಬಂಧ ಅಮೆರಿಕದ ರಾಯಭಾರಿ ಮತ್ತು ನ್ಯಾಟೊ ಕಮಾಂಡರ್‌ಗೆ ಅಧ್ಯಕ್ಷ ಹಮೀದ್ ಕರ್ಜೈ ಪತ್ರ ಬರೆದಿದ್ದಾರೆ.

ಹಲವು ವರ್ಷಗಳಿಂದ ಉಗ್ರರ ಹೆಸರಿನಲ್ಲಿ ಅಮಾಯಕ ನಾಗರಿಕರು ನ್ಯಾಟೊ ದಾಳಿಗೆ ಬಲಿಯಾಗುತ್ತಿರುವ ಬಗ್ಗೆ ದೂರುಗಳು ಸಾಮಾನ್ಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT