ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗಕ್ಕೆ ಬದ್ಧರಾಗಬೇಕು

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: `ನ್ಯಾಯಾಂಗ ಮತ್ತು ಶಾಸಕಾಂಗ ಹಾಗೂ ಕಾರ್ಯಾಂಗ ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿ. ಯಾವುದೇ ವ್ಯವಸ್ಥೆಯಲ್ಲಿ ಹಗರಣಗಳಿಗೆ ಸಿಲುಕಿ ಸೆರೆವಾಸ ಸಿಲುಕಿದರೆ ಅದು ನ್ಯಾಯಾಂಗ ವ್ಯವಸ್ಥೆಗೆ ಭದ್ಧರಾಗಬೇಕಲ್ಲದೆ ತಲೆಬಾಗಲೇ ಬೇಕು~ ಎಂದು ರಾಜ್ಯ ಬಿ.ಜೆ.ಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ತಿಳಿಸಿದರು.

ಜನಚೇತನ ರಥಯಾತ್ರೆಯಲ್ಲಿ ಭಾಗವಹಿಸಲು ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.

`ರಾಜ್ಯದಲ್ಲಿ ನಡೆದಿರುವ ಹಗರಣಕ್ಕೂ ಅಡ್ವಾಣಿಯವರ ಜನಚೇತನ ರಥಯಾತ್ರೆಗೂ ಬಂಧನ ಪ್ರಕೃಯೆಗು ಯಾವುದೇ ಸಂಬಂಧವಿಲ್ಲ. ಇದು ದೇಶಾಧ್ಯಂತ ಪರ್ಯಾಟನವಾಗಿದೆ ಬಿ.ಜೆ.ಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲದೆ ಎಲ್ಲಾ ರಾಜ್ಯಗಳಲ್ಲೂ ಈಗಾಗಲೇ ಸಂಚರಿಸಿದೆ, ಸಂಚರಿಸುತ್ತಿದೆ.  

ರಥ ಯಾತ್ರೆ ಇನ್ನೊಬ್ಬ ಬಿ.ಜೆಪಿ ನಾಯಕರ ವಿರುದ್ಧ ಅಲ್ಲ ಕೇಂದ್ರ ಕಾಂಗ್ರೆಸ್ ಸರ್ಕಾರದ ಭ್ರಷ್ಠಾಚಾರದ ಕುರಿತು ಜನಸಾಮಾನ್ಯರಿಗೆ ಮನದಟ್ಟು ಮಾಡುವ ಕಾರ್ಯಕ್ರಮ.

ಕರ್ನಾಟಕ ರಾಜ್ಯಕ್ಕಿಂತ ಕೇಂದ್ರ ಸರ್ಕಾರದಲ್ಲಿ ದುಪ್ಪಟ್ಟವಾಗಿದೆ ಆದರೆ ನ್ಯಾಯಾಂಗ ವ್ಯವಸ್ಥೆಯು ಪ್ರಸಕ್ತ ಋತುವಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಆದರೆ ನಾನು ಬಂದಿರುವುದು ರಾಜ್ಯದ ಯಾವುದೇ ನಾಯಕರನ್ನು ಕುರಿತು ಚರ್ಚಿಸಲು ಅಲ್ಲ ಆಡ್ವಾಣಿಯವರ ಜನ ಚೇತನ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT