ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ಕ್ರಿಯಾಶೀಲತೆಗೆ ಸಂಸದೀಯ ಸಮಿತಿ ಆಕ್ಷೇಪ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾನೂನು ರಚಿಸುವ ಸರ್ಕಾರ ಹಾಗೂ ಸಂಸತ್ತಿನ ಅಧಿಕಾರವನ್ನು ಕಿತ್ತುಕೊಳ್ಳುವ ಮೂಲಕ ಕೋರ್ಟ್‌ಗಳು `ಅತಿಯಾದ ನ್ಯಾಯಾಂಗ ಕ್ರಿಯಾಶೀಲತೆ' ತೋರಿಸುತ್ತಿರುವುದನ್ನು ಕಾನೂನು, ಸಿಬ್ಬಂದಿ ಹಾಗೂ ಸಾರ್ವಜನಿಕ ವ್ಯಾಜ್ಯಗಳ ಸಂಸದೀಯ ಸ್ಥಾಯಿ ಸಮಿತಿ ಪ್ರಶ್ನಿಸಿದೆ.

`ನ್ಯಾಯಾಂಗ ಕ್ರಿಯಾಶೀಲತೆಯಲ್ಲಿ ಮೂರು ಭಾಗಗಳಿವೆ. ಕಾನೂನನ್ನು ವ್ಯಾಖ್ಯಾನಿಸುವ ಮೂಲಕ ಅದರ ಅರ್ಥವನ್ನು ಕೋರ್ಟ್‌ಗಳು ವಿಸ್ತರಿಸಿದರೆ ಅದು ಸ್ವಾಗತಾರ್ಹ. ಎರಡನೇ ಭಾಗವಾಗಿ ಕೋರ್ಟ್‌ಗಳು ತಮ್ಮ ತೀರ್ಪಿನಲ್ಲಿ ಮಾರ್ಗದರ್ಶಿಸೂತ್ರಗಳನ್ನು ಪ್ರಕಟಿಸುತ್ತವೆ. ಈ ರೀತಿ ಪ್ರಕಟಿಸಲಾದ ಮಾರ್ಗದರ್ಶಿ ಸೂತ್ರಗಳು ಸಂಸತ್ತು ಅಂಗೀಕರಿಸಿದ ಕಾಯ್ದೆಗೆ ಅನುಗುಣವಾಗಿ ಇದ್ದಲ್ಲಿ ಅವುಗಳನ್ನು ಒಪ್ಪಬಹುದು.

ಆದರೆ ಯಾವುದೇ ಕಾರಣದಿಂದ ಮಾರ್ಗದರ್ಶಿಸೂತ್ರಗಳ ಅನ್ವಯ ಕಾನೂನು ರಚಿಸಲು ಸರ್ಕಾರ ವಿಫಲವಾದಲ್ಲಿ ಹಲವು ವರ್ಷಗಳವರೆಗೆ ತೀರ್ಪಿನ ರೂಪದಲ್ಲಿ ಇಂತಹ ಮಾರ್ಗದರ್ಶಿ ಸೂತ್ರಗಳು ಉಳಿದುಬಿಡುತ್ತವೆ. ಇದರಿಂದಾಗಿ ಶಾಸಕಾಂಗದ ಅಧಿಕಾರವನ್ನು ಕೋರ್ಟ್‌ಗಳು ಕಿತ್ತುಕೊಂಡಂತಾಗುತ್ತದೆ. ಇದು ಎಷ್ಟರಮಟ್ಟಿಗೆ ಸರಿ?' ಎಂದು ಸಮಿತಿ ಅಧ್ಯಕ್ಷ ಶಾಂತಾರಾಮ್ ನಾಯಕ್ ಪ್ರಶ್ನಿಸಿದ್ದಾರೆ.

ವರದಿ ಮಂಡನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ನಾಯಕ್, `ಸರ್ಕಾರವನ್ನು ಕೋರ್ಟ್‌ಗಳು ಪ್ರಶ್ನಿಸಬಹುದು ಆದರೆ ಕಾನೂನು ರಚಿಸುವಂತಿಲ್ಲ. ಇತ್ಯರ್ಥವಾಗದ ಹಲವಾರು ಪ್ರಕರಣಗಳು ಕೋರ್ಟ್‌ಗಳಲ್ಲಿವೆ. ಆದರೆ ಇವುಗಳ ವಿಲೇವಾರಿಗೆ ಸರ್ಕಾರ ತನ್ನ ಪಾತ್ರ ವಹಿಸುವಂತಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT