ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯಗಳಲ್ಲಿ ವೃತ್ತಿ ಆರಂಭಿಸಿ: ಸಲಹೆ

Last Updated 11 ಸೆಪ್ಟೆಂಬರ್ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು: `ನ್ಯಾಯಾಲಯವು ಪ್ರಜಾಪ್ರಭುತ್ವದ ಆಧಾರಸ್ತಂಭ. ಕಾನೂನು ವಿದ್ಯಾರ್ಥಿಗಳು ಕಾರ್ಪೊರೇಟ್ ವಲಯಕ್ಕೆ ಹೆಚ್ಚು ಆಕರ್ಷಿತರಾಗದೇ, ನ್ಯಾಯಾಲಯಗಳಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಬೇಕು~ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಮುಕುಂದನ್ ಶರ್ಮ ಕರೆ ನೀಡಿದರು.

ಕ್ರೈಸ್ಟ್ ಕಾನೂನು ವಿಶ್ವವಿದ್ಯಾಲಯವು ನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

`ಕಾನೂನು ಕಾಲೇಜುಗಳಲ್ಲಿ ಇಂತಹ ಸ್ಪರ್ಧೆ ಏರ್ಪಡಿಸುವ ಮೂಲಕ ವಕೀಲ ವೃತ್ತಿಯ ಆಳ- ಅಗಲವನ್ನು ಅರಿತುಕೊಳ್ಳಬಹುದು. ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಜನ ಸಾಮಾನ್ಯರಿಗೆ ಒದಗಿಸುವತ್ತ ಕಾನೂನು ರೂಪುಗೊಳ್ಳಬೇಕಿದೆ. ತಿದ್ದುಪಡಿಗೊಳ್ಳುತ್ತಿರುವ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಶಿಬಿರಗಳನ್ನು ಏರ್ಪಡಿಸಬೇಕಿದೆ~ ಎಂದು ಅಭಿಪ್ರಾಯಪಟ್ಟರು.

`ಇಂದು ವಕೀಲ ವೃತ್ತಿಯಲ್ಲಿ ಉತ್ತಮ ಸಂಬಳ ಮತ್ತು ಸ್ಥಾನ-ಮಾನ ದೊರೆಯುತ್ತಿದೆ. ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ವಾದ ಮಂಡಿಸುವಾಗ ನ್ಯಾಯಸಮ್ಮತವಾದ ನಿರ್ಧಾರವನ್ನು ತೆಗೆದುಕೊಳ್ಳುವತ್ತ ಗಮನಹರಿಸಬೇಕು. ಈ ಮೂಲಕ ವಕೀಲ ವೃತ್ತಿಗೆ ತಮ್ಮದೇ ಕೊಡುಗೆ ನೀಡಬೇಕು~ ಎಂದು ಸಲಹೆ ನೀಡಿದರು.

`ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ದೊರಕಿಸಿ ಕೊಡುವಲ್ಲಿ ಶಿಕ್ಷಣ ತಜ್ಞರು ವಕೀಲರೊಂದಿಗೆ ಸಹಕರಿಸಬೇಕು. ವಕೀಲರು ಸಾಮಾಜಿಕ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಅಗತ್ಯವಿದೆ~ ಎಂದು ಹೇಳಿದರು.

ಮುಂಬೈ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಸಿ.ದಾಗ, `ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ವಕೀಲ ವೃತ್ತಿಯ ತಾಂತ್ರಿಕ ಅಂಶಗಳನ್ನು ಪಡೆದುಕೊಳ್ಳುವಲ್ಲಿ ಸಹಕಾರಿಯಾಗಿದೆ. ಅಲ್ಲದೇ ಯಾವುದೇ ಪ್ರಕರಣದ ವಿಚಾರಣೆ ಮತ್ತು ವಾದ ಮಂಡನೆಯ ವಿವಿಧ ಆಯಾಮಗಳನ್ನು ತಿಳಿದುಕೊಳ್ಳಬಹುದು~ ಎಂದರು.

`ನ್ಯಾಯಾಲಯದ ವಿಚಾರಣೆಯು ವರ್ಷಾನುಗಟ್ಟಲೇ ತೆಗೆದುಕೊಳ್ಳುತ್ತದೆ ಎಂಬ ಕೊರತೆಯನ್ನು ಮೀರಿ ನಿಲ್ಲಬೇಕು. ವೈಯಕ್ತಿಕ ಸ್ವಾರ್ಥಕ್ಕಾಗಿ ಕಕ್ಷಿದಾರರರನ್ನು ದಾರಿ ತಪ್ಪಿಸಬೇಡಿ. ವೃತ್ತಿಯಲ್ಲಿ ಬದ್ಧತೆಯನ್ನು ಬೆಳೆಸಿಕೊಂಡು ಮುನ್ನಡೆಯಿರಿ~ ಎಂದು ಹೇಳಿದರು.

ಸಚಿವ ಆರ್. ಅಶೋಕ ವಿಜೇತರಿಗೆ ಪ್ರಶಸ್ತಿ ನೀಡಿದರು. ಹಿರಿಯ ವಕೀಲರಾದ ಅರವಿಂದ ಪಿ. ದತ್ತಾರ್, ಕೆ.ಜಿ. ರಾಘವನ್ ಇತರರು ಉಪಸ್ಥಿತರಿದ್ದರು.  ದೇಶದಾದ್ಯಂತ ಒಟ್ಟು 32 ಕಾನೂನು ಶಾಲೆಗಳ ವಿದ್ಯಾರ್ಥಿಗಳು  ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭೋಪಾಲ್‌ನ ನ್ಯಾಷನಲ್ ಲಾ ಇಂಡಿಯಾ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಪ್ರಥಮ ಹಾಗೂ ಕೋಲ್ಕ ತ್ತದ ನ್ಯಾಷನಲ್ ಯೂನಿವರ್ಸಿಟಿ ಜುಡಿಷಿಯಲ್ ಸ್ಟಡೀಸ್ ಸಂಸ್ಥೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT