ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ಸೇಬು ಆಮದು ಹೆಚ್ಚಳ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನ್ಯೂಜಿಲೆಂಡ್ ಸೇಬಿಗೆ ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇತ್ತೀಚಿನ ಅಂಕಿ-ಅಂಶ ಪ್ರಕಾರ 2012ರ ಡಿಸೆಂಬರ್ ವೇಳೆಗೆ ಸೇಬು ಆಮದು (ಹಿಂದಿನ ವರ್ಷಕ್ಕೆ ಹೋಲಿಸಿದರೆ) ಶೇ 90ರಷ್ಟು ಹೆಚ್ಚಿದೆ ಎಂದು `ಪಿಪ್‌ಫ್ರ್ಯೂಟ್ ನ್ಯೂಜಿಲೆಂಡ್' ಕಂಪೆನಿ ಮುಖ್ಯ ನಿರ್ವಹಣಾಧಿಕಾರಿ ಅಲನ್    ಪೊಲಾರ್ಡ್  ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯೂಜಿಲೆಂಡ್ ಸೇಬು ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತದಲ್ಲಿ ಲಭ್ಯ ಎಂದರು.

ಸೇಬು ಬೆಳೆಯಲ್ಲಿ ಸುಧಾರಣೆ, ಗುಣಮಟ್ಟ ಕಾಯ್ದುಕೊಳ್ಳುವುದರ ಕುರಿತು ಭಾರತದ ಬೆಳೆಗಾರರೊಂದಿಗೆ ನ್ಯೂಜಿಲೆಂಡ್ ಕಾರ್ಯನಿರತವಾಗಿದೆ ಎಂದು ನವದೆಹಲಿಯಲ್ಲಿ ನ್ಯೂಜಿಲೆಂಡ್ ವಾಣಿಜ್ಯ ವಿಭಾಗದ ಕಮಿಷನರ್ ಆಗಿರುವ ರಿಚರ್ಡ್ ವೈಟ್ ಹೇಳಿದರು.

`ಐಪಿಎಲ್'ನ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ, ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಡೇನಿಯಲ್ ವಿಟೋರಿ `ರಾಯಲ್ ಗಾಲಾ' ಸೇಬುಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದರು.

2011ರಲ್ಲಿ ಮುಂಬೈನಲ್ಲಿ ಇದೇ ಬ್ರಾಂಡ್ ಸೇಬನ್ನು ಖ್ಯಾತ ಕ್ರಿಕೆಟಿಗ ಸರ್ ರಿಚರ್ಡ್ ಹ್ಯಾಡ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT