ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ನಲ್ಲಿ ಭೂಕಂಪ: 65 ಸಾವು

Last Updated 22 ಫೆಬ್ರುವರಿ 2011, 16:00 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ನ್ಯೂಜಿಲೆಂಡ್‌ನ ದಕ್ಷಿಣದ  ಪಟ್ಟಣ  ಕ್ರೈಸ್ಟ್‌ಚರ್ಚ್‌ನಲ್ಲಿ ಮಂಗಳವಾರ ಮುಂಜಾನೆ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು ಕನಿಷ್ಠ 65 ಮಂದಿ ಮೃತಪಟ್ಟಿದ್ದಾರೆ.  ಅನೇಕ ಕಟ್ಟಡಗಳು ಕುಸಿದು ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ.

  ‘ಸತ್ತವರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ’ ಎಂದು ನ್ಯೂಜಿಲೆಂಡ್ ಪ್ರಧಾನಿ ಜಾನ್ ಕೀ ಹೇಳಿದ್ದಾರೆ.

‘ಕ್ಯಾಂಟರ್‌ಬರಿಯ ಜನಕ್ಕೆ ಇದು ಗಾಬರಿ ಹುಟ್ಟಿಸುವ ಸಮಯ. ನ್ಯೂಜಿಲೆಂಡ್‌ನ ಕರಾಳ ದಿನವನ್ನು ನಾವು ವೀಕ್ಷಿಸುತ್ತಿರಬಹುದು. ದೇಶದ ಎರಡನೇ ದೊಡ್ಡ ಪಟ್ಟಣವಾದ ಕ್ರೈಸ್ಟ್‌ಚರ್ಚ್ ಈಗ ಧ್ವಂಸಗೊಂಡ ಪಟ್ಟಣವಾಗಿದೆ’ ಎಂದರು.

ಕಳೆದ 80 ವರ್ಷಗಳಲ್ಲೇ ದೇಶದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಸಂಭವಿಸದಂತಹ ಭೂಕಂಪದಲ್ಲಿ ಕುಸಿದು ಬಿದ್ದಿರುವ ಕಟ್ಟಡಗಳಲ್ಲಿ  ಹಲವು ಮಂದಿ ಸಿಲುಕಿದ್ದಾರೆ.

ಪಾದಚಾರಿಗಳ ಹಾದಿ ಮತ್ತು ರಸ್ತೆಗಳು ಬಿರುಕು ಬಿಟ್ಟಿದ್ದು ನೂರಾರು ಮಂದಿ ಕೂಗುತ್ತಾ, ಅಳುತ್ತಾ ರಸ್ತೆಗಳಲ್ಲಿ ಓಡಾಡುತ್ತಿದ್ದು ಸೈರನ್‌ಗಳ ಸದ್ದು ಪಟ್ಟಣದಲ್ಲಿ ಸಾಮಾನ್ಯವಾಗಿತ್ತು.
ಎರಡು ಬಸ್‌ಗಳ ಮೇಲೆ ಕುಸಿಯುತ್ತಿರುವ ಕಟ್ಟಡಗಳು ಬಿದ್ದು ಅವುಗಳು ಜಜ್ಜಿಹೋದ ಘಟನೆಯೂ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೈಸ್ಟ್‌ಚರ್ಚ್‌ನ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕಟ್ಟಡಗಳು ಕುಸಿಯುತ್ತಿರುವುದರಿಂದ ಪಟ್ಟಣದ ಕೇಂದ್ರ ಸ್ಥಳವನ್ನು ಪೊಲೀಸರು ತೆರವುಗೊಳಿಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಆರು ಅಂತಸ್ತಿನ ಕ್ಯಾಂಟರ್‌ಬರಿ ಟಿವಿ ಕಟ್ಟಡ ಸಂಪೂರ್ಣ ಕುಸಿದಿದೆ.

1860 ರಲ್ಲಿ ಕಟ್ಟಲಾದ ಮತ್ತು ಐರಿಶ್ ನಾಟಕಕಾರ ಜಾರ್ಜ್ ಬರ್ನಾಡ್ ಷಾ 1934ರಲ್ಲಿ ಭೇಟಿ ನೀಡಿ ಅದರ ವಾಸ್ತುಶಿಲ್ಪವನ್ನು ಕೊಂಡಾಡಿದ್ದ ಕ್ಯಾಥರ್ಡಲ್ ಚರ್ಚ್ ತೀವ್ರ ಹಾನಿಗೊಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT