ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಯಾರ್ಕ್‌ ಹೆದ್ದಾಯಲ್ಲಿ ಇಳಿದ ವಿಮಾನ!

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಪುಟ್ಟ ಪ್ರಯಾಣಿಕ ವಿಮಾನವೊಂದು ನ್ಯೂಯಾರ್ಕ್‌ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಪೈಲಟ್‌ ಸೇರಿ ಮೂವರಿಗೆ ಸಣ್ಣ ಗಾಯಗಳಾಗಿವೆ.

ಒಂದೇ ಎಂಜಿನ್‌ನ ಈ ವಿಮಾನ ನ್ಯೂಯಾರ್ಕ್‌ನ ಬ್ರಾಂಕ್ಸ್‌ ಬಳಿಯ ಮೇಜರ್‌ ಡೀಗನ್‌ ಎಕ್ಸ್‌ಪ್ರೆಸ್‌ವೇ ಮೇಲೆ ಶನಿವಾರ ಮಧ್ಯಾಹ್ನ ಇಳಿದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪೈಪರ್‌ ಪಿಎ28 ವಿಮಾನವು ಸ್ವಾತಂತ್ರ್ಯ ದೇವಿ ಪ್ರತಿಮೆ (ಸ್ಟ್ಯಾಚು ಆಫ್‌ ಲಿಬರ್ಟಿ) ಇರುವ ಸ್ಥಳದಿಂದ ಕನೆಕ್ಟಿಕಟ್‌, ಡ್ಯಾನ್‌ಬರಿಗೆ ಪ್ರಯಾಣ ಬೆಳೆಸಿತ್ತು. ಆದರೆ, ಮಾರ್ಗಮಧ್ಯೆ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು. ಕ್ವೀನ್ಸ್‌ನ ಲಾ ಗಾಡ್ರಿಯಾ ಏರ್‌ಪೋರ್ಟ್‌ನಲ್ಲಿ ವಿಮಾನವನ್ನು ಇಳಿಸಲು ಪೈಲಟ್‌ ಉದ್ದೇಶಿಸಿದ್ದ. ಆದರೆ, ರನ್‌ವೇ ತಲುಪಲಿಕ್ಕೆ ಆಗದು ಎಂಬುದನ್ನು ಮನಗಂಡು, ವಿಮಾನವನ್ನು ಎಕ್ಸ್‌ಪ್ರೆಸ್‌ವೇ ಮೇಲೆ ಇಳಿಸಿದ್ದಾನೆ‘ ಎಂದು ಅಗ್ನಿಶಾಮಕ ಇಲಾಖೆಯ ವಕ್ತಾರ ಹಾಗೂ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT