ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಯಾರ್ಕ್‌ನಲ್ಲೂ ಭ್ರಷ್ಟಾಚಾರ !

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಐಎಎನ್‌ಎಸ್): ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ     ಪಿಡುಗು ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಅಭಿವೃದ್ಧಿ ಹೊಂದಿದ ಅಮೆರಿಕದಂತಹ ರಾಷ್ಟ್ರಗಳಲ್ಲಿಯೂ ಇದು ಗಂಭೀರ ಸಮಸ್ಯೆಯಾಗಿದೆ.

ಕ್ವಿನ್ನಿಪಿಯಾಕ್ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯಲ್ಲಿ ಶೇ 48ರಷ್ಟು ನ್ಯೂಯಾರ್ಕ್ ಮತದಾರರು,  ಭ್ರಷ್ಟಾಚಾರ `ತುಂಬಾ ಗಂಭೀರ' ಸಮಸ್ಯೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂಸ್ಥೆ 2003 ರಿಂದಲೂ ಅಭಿಪ್ರಾಯ ಸಂಗ್ರಹಕ್ಕೆ ತೊಡಗಿದ್ದು   ಭ್ರಷ್ಟಾಚಾರ `ಸ್ವಲ್ಪ ಗಂಭೀರ' ಸಮಸ್ಯೆ ಎಂದು  ಶೇ 39 ರಷ್ಟು ಮತದಾರರು ಅಭಿಪ್ರಾಯ ಪಟ್ಟಿದ್ದಾರೆ.

ಒಂದು ಸರಾಸರಿಯ ಪ್ರಕಾರ, ಶೇ 47 ರಷ್ಟು ಮತದಾರರು, ಶಾಸಕಾಂಗದಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕುವುದು ಗವರ್ನರ್ ಅವರ ಪ್ರಾಥಮಿಕ ಜವಾಬ್ದಾರಿಯಾಗಬೇಕು. ಶಾಸಕಾಂಗ ನಾಯಕರದ್ದಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮತ್ತೊಂದೆಡೆ, ಸದ್ಯದ ಗವರ್ನರ್‌ಆಂಡ್ರಿವ್ ಕ್ಯುಮೊ ಅವರ ಭ್ರಷ್ಟಾಚಾರ ತೊಡೆದುಹಾಕುವ   ಪ್ರಯತ್ನವನ್ನು ಶೇ 37 ರಷ್ಟು ಮತದಾರರು ಮಾತ್ರ,`ಅತ್ಯುನ್ನತ' ಅಥವಾ `ಉತ್ತಮ'  ಎಂದಿದ್ದರೇ, ಶೇ 52ರಷ್ಟು ಮಂದಿ ` ಅಷ್ಟೇನು ಚೆನ್ನಾಗಿಲ್ಲ' ಅಥವಾ `ಕಳಪೆ' ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT