ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಂಗ ಶ್ರವಣ, ಜೈನ ಕ್ಯಾಲೆಂಡರ್ ಬಿಡುಗಡೆ

Last Updated 22 ಏಪ್ರಿಲ್ 2013, 9:01 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದ ಮಹಾವೀರ ರಸ್ತೆಯಲ್ಲಿನ ತ್ರಿಕೂಟ ಚೂಡಾಮಣಿ ಜಿನ ಚೈತ್ಯಾಲಯದಲ್ಲಿಈಚೆಗೆ ಪಂಚಾಂಗ ಶ್ರವಣ ಹಾಗೂ ಜೈನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆದವು.

ಯುಗಾದಿ ವಿಜಯನಾಮ ಸಂವತ್ಸರದ ಆರಂಭದ ಶುಭ  ಸಂಕೇತವಾಗಿ ಜೈನ ಪರಂಪರೆಯಂತೆ ಭಗವಾನ್ 1008 ಪಾರ್ಶ್ವನಾಥ ಸ್ವಾಮಿಯ  ಸನ್ನಿಧಿಯಲ್ಲಿ  ಶ್ರೀಮುಖ ದರ್ಶನ  ಹಾಗೂ ವಿಶೇಷ ಪೂಜೆ ಅಭಿಷೇಕಗಳು ನಡೆದವು.

ವಿಜಯನಾಮ ಸಂವತ್ಸರದ ಜೈನ ಕ್ಯಾಲೆಂಡರ್ ಅನ್ನು ಜೈನ ಯುವಕ ಸಂಘದ ಅಧ್ಯಕ್ಷ ಇ.ಟಿ. ಬಾಹುಬಲಿ ಬಿಡುಗಡೆಗೊಳಿಸಿದರು. ಪುರೋಹಿತ್‌ಎಚ್.ಎಸ್. ನೇಮಿರಾಜಯ್ಯ ಸಂಗ್ರಹಿಸಿರುವ ಈ ಜೈನ ಕ್ಯಾಲೆಂಡರ್‌ನಲ್ಲಿ ಜೈನ ಪರ್ವತಿಥಿಗಳು, ಜಪ-ತಪ ಉಪವಾಸಕ್ಕೆ ಸುಯೋಗ್ಯವಾದ ಪ್ರತಿ ತಿಂಗಳ ಅಷ್ಟಮಿ ಚತುದರ್ಶಿಗಳ ಹಾಗೂ ಜೈನ ಪವಿತ್ರದಿನಗಳ ಮಾಹಿತಿಗಳು ಲಭ್ಯವಾಗುತ್ತವೆ.

ಕಾರ್ಯಕ್ರಮದಲ್ಲಿ ಎಚ್.ಎಸ್. ನೇಮಿರಾಜಯ್ಯ, ಕಿರಣ್ ಪಂಡಿತ್ ಹಾಗೂ ಶ್ರಾವಕ ಶ್ರಾವಕಿಯರು, ಮಕ್ಕಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT