ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಪಕ್ಕದಲ್ಲಿಯೇ ಗಲೀಜು!

ಗ್ರಾಮಾಯಣ
Last Updated 11 ಸೆಪ್ಟೆಂಬರ್ 2013, 5:53 IST
ಅಕ್ಷರ ಗಾತ್ರ

ಮಸ್ಕಿ: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಅಶೋಕ ಚಕ್ರವರ್ತಿ ಶಿಲಾಶಾಸನ ಹೊಂದಿರುವ ಮಸ್ಕಿ ಪಟ್ಟಣ ಐತಿಹಾಸಿಕ ಪ್ರಸಿದ್ದಿ ಪಡೆದುಕೊಂಡಿದೆ. ಆದರೆ, ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂಬುದಕ್ಕೆ ಹಲವು ಸಾಕ್ಷಿಗಳು ಸಿಗುತ್ತವೆ.

51 ಸದಸ್ಯರನ್ನು ಹೊಂದಿರುವ ಮಸ್ಕಿ ಗ್ರಾಮ ಪಂಚಾಯಿತಿ ರಾಯಚೂರು ಜಿಲ್ಲೆಯಲ್ಲಿಯೇ ದೊಡ್ಡ ಪಂಚಾಯಿತಿ ಎಂಬ ಹೆಗ್ಗಳಿಕೆ ಪಡೆದು­ಕೊಂಡಿದೆ. ಆದರೆ, ಪಂಚಾಯಿತಿ ಪಕ್ಕದಲ್ಲಿಯೇ ಸರ್ಕಾರಕ್ಕೆ ಸೇರಿದ ಖಾಲಿ ಜಾಗಕ್ಕೆ ಯಾರೂ ವಾರಸುದಾರರು ಇಲ್ಲದೇ ಇರುವುದು ಗಲೀಜು ಹಾಕುವ ಕೇಂದ್ರವಾಗಿ ಮಾರ್ಪಟ್ಟಿದೆ.

ರಾಜ್ಯ ಹೆದ್ದಾರಿ ಪಕ್ಕದಲ್ಲಿ ಇರುವ ಈ ಜಾಗದಲ್ಲಿ ಪ್ಲಾಸ್ಟಿಕ್‌ ಸೇರಿದಂತೆ ಅನೇಕ ತ್ಯಾಜ್ಯ ವಸ್ತುಗಳನ್ನು ಇಲ್ಲಿ ಬಿಸಾಡಲಾಗುತ್ತಿದೆ. ಹಂದಿ, ನಾಯಿಗಳು, ಬಿಡಾಡಿ ದನಗಳು ಬಂದು ಗಲೀಜು ಮಾಡುತ್ತಿವೆ. ದುರ್ವಾಸನೆ ಹೆಚ್ಚಾಗಿ ಮೂಗು ಮುಚ್ಚಿಕೊಂಡು ತಿರುಗಾಡುವಂಥ ವಾತಾವರಣ ನಿರ್ಮಾಣವಾಗಿದೆ.

ಈ ಜಾಗದ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತಲೆ ಕೆಡಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿವೆ  ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೌಚಾಲಯ ಮರಿಚೀಕೆ:  ಇದೇ ಜಾಗದಲ್ಲಿ ಸ್ವಚ್ಛ ಗ್ರಾಮ ಯೋಜನೆ ಅಡಿಯಲ್ಲಿ ಮಹಿಳೆಯರ ಹಾಗೂ ಪುರುಷರ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಈ ಶೌಚಾಲಯ ಸಾರ್ವ­ಜನಿಕರಿಗೆ ಮರೀಚಿಕೆಯಾಗಿದೆ. ಶೌಚಾಲ­ಯದಲ್ಲಿ ನೀರು, ಸ್ವಚ್ಛತೆ ಸೇರಿದಂತೆ ಸರಿಯಾದ ಮೂಲ ಸೌಕರ್ಯಗಳು ಇಲ್ಲದ ಕಾರಣ ಇದರ ಬಳಕೆ ಮಾಡಿಕೊಳ್ಳಲು ಸಾರ್ವಜನಿಕರು ಹಿಂದೇಟು

ಹಾಕುತ್ತದ್ದಾರೆ. ಬಳಕೆ ಮಾಡದೇ ಇರುವುದರಿಂದ ದಿನ ಕಳೆದಂತೆ ಹಾಳಾಗುತ್ತಿದೆ. ಸಾರ್ವಜನಿಕರ ಬಳಕೆ ಮಾಡದ ಸ್ಥಿತಿ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ದಿನ ನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಮಸ್ಕಿ ಹಳೇ ಬಸ್ ನಿಲ್ದಾಣದ ಹತ್ತಿರ ಪ್ರಯಾಣಿಕರಿಗೆ ಮಲ, ಮೂತ್ರ ಮಾಡಲು ಯಾವುದೇ ವ್ಯವಸ್ಥೆ ಇಲ್ಲದೇ ಪರದಾಡುವ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಹಾಳು ಬಿದ್ದಿರುವ ಸಾರ್ವಜನಿಕ ಶೌಚಾಲಯವನ್ನು ಉಪಯೋಗಕ್ಕೆ ಬರುವಂತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.


‘ವ್ಯವಸ್ಥೆ ಕಲ್ಪಿಸುತ್ತೆವೆ’
ಪಂಚಾಯಿತಿ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಚರಂಡಿ ನಿರ್ಮಿ­ಸಲು ಶಾಸಕ ಪ್ರತಾಪ­ಗೌಡ ಪಾಟೀಲ ಅನುದಾನ ಒದಗಿ­ಸಿದ್ದಾರೆ. ಚರ

ಂಡಿ ನಿರ್ಮಿಸಿದ ನಂತರ ಅಲ್ಲಿ ಸ್ವಚ್ಛತೆ ಮಾಡಿ ಆಟೊ, ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.
- ಅಮರೇಶ ಮಸ್ಕಿ,ಅಧ್ಯಕ್ಷರು, ಗ್ರಾಪಂ ಮಸ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT