ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂ.ರಾಜಗುರು ಸ್ಮರಣೆ: ಸಂಗೀತ, ನೃತ್ಯ ಸಮರ್ಪಣೆ 8ರಂದು

Last Updated 6 ಡಿಸೆಂಬರ್ 2012, 8:23 IST
ಅಕ್ಷರ ಗಾತ್ರ

ಹೊನ್ನಾವರ: ಪದ್ಮಭೂಷಣ ಡಾ.ಬಸವರಾಜ ರಾಜಗುರು ಅವರ ಸ್ಮರಣಾರ್ಥ `ಸಂಗೀತ, ನೃತ್ಯ ಸಮರ್ಪಣಾ-2012' ಕಾರ್ಯಕ್ರಮ ಪಟ್ಟಣದ ಪ್ರಭಾತನಗರದ ಮೂಡಗಣಪತಿ ಸಭಾಭವನದಲ್ಲಿ ಇದೇ 8ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ.

ಶ್ರೀಕೃಷ್ಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್, ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಹಾಗೂ ಗಾಂಧೀನಗರ ವಿಕಾಸ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ವಹಿಸುವರು.

ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ, ಡಾ.ಬಸವರಾಜ ರಾಜಗುರು ಟ್ರಸ್ಟ್‌ನ ಭಾರತಿದೇವಿ ರಾಜಗುರು, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸೂರಜ ನಾಯ್ಕ ಸೋನಿ, ಎಸ್‌ಬಿಐ ಪ್ರಧಾನ ವ್ಯವಸ್ಥಾಪಕ ಎಸ್.ಎಲ್.ಹೆಬ್ಬಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಮೈಸೂರು ಸಂಗೀತ ವಿವಿಯ ಉಪಕುಲಪತಿ ಡಾ.ಹನುಮಣ್ಣ ನಾಯಕ ದೊರೆ ಹಾಗೂ ಶಿರಸಿಯ ಎಂ.ಎಂ.ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥ ಪ್ರೊ.ಆರ್.ವಿ.ಹೆಗಡೆ ಅವರಿಗೆ ಸನ್ಮಾನ ಹಾಗೂ ಮೈಸೂರು ಸಂಗೀತ ವಿವಿಯ ಸಿಂಡಿಕೇಟ್ ಸದಸ್ಯ ನಿಜಗುಣ ರಾಜಗುರು ಅವರಿಗೆ ಅಭಿನಂದನೆ ನಡೆಯುವುದು.

ವಿಶ್ವರಾಜ ರಾಜಗುರು ಧಾರವಾಡ, ಕೆ.ಆರ್.ಶ್ರೀಲತಾ ಖರ್ವಾ ಅವರಿಂದ ಗಾಯನ, ಗುರುರಾಜ ಹೆಗಡೆ ಆಡುಕಳ ಹಾಗೂ ವಿಜೇತಾ ಹೆಗಡೆ ಕೆರೆಮನೆ ಅವರಿಂದ ತಬಲಾ ವಾದನ, ಕಾರ್ತಿಕ ಹೆಗಡೆ ಅನಿಲಗೋಡ ಅವರಿಂದ ಸಂವಾದಿನಿ, ಶೇಷಾದ್ರಿ ಅಯ್ಯಂಗಾರ್ ಶಿಷ್ಯವೃಂದದಿಂದ ಪಂಚ ತಬಲಾ ವಾದನ, ನಾಟ್ಯಾಚಾರ್ಯ ಡಿ.ಡಿ.ನಾಯ್ಕ ಶಿಷ್ಯವೃಂದದಿಂದ ಭರತನಾಟ್ಯ ಪ್ರದರ್ಶನ ನಡೆಯುವುದು.

ಡಾ.ಹನುಮಣ್ಣ ನಾಯಕ ದೊರೆ, ಡಾ.ಕೃಷ್ಣಮೂರ್ತಿ ಭಟ್ಟ ಬೊಮ್ಮನಹಳ್ಳಿ, ಪ್ರೊ.ಆರ್.ವಿ.ಹೆಗಡೆ ಹಳ್ಳದಕೈ, ಪ್ರೊ.ಗೋಪಾಲಕೃಷ್ಣ ಹೆಗಡೆ ಕಲ್ಭಾಗ, ಪ್ರೊ.ಎನ್.ಜಿ. ಅನಂತಮೂರ್ತಿ, ವಿದ್ವಾನ್ ಶೇಷಾದ್ರಿ ಅಯ್ಯಂಗಾರ್, ಗೋಪಾಲಕೃಷ್ಣ ಭಾಗವತ ಸಂಗೀತ ಕಾರ್ಯಕ್ರಮದ ಮುಖ್ಯ ಕಲಾವಿದರಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT