ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟೇಲ್‌ ಪ್ರತಿಮೆಗೆ ರೈತರ ಕುಡಗೋಲು!

Last Updated 14 ಡಿಸೆಂಬರ್ 2013, 3:54 IST
ಅಕ್ಷರ ಗಾತ್ರ

ವಿಜಾಪುರ: ‘ಗುಜರಾತ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಗತ್ತಿನ ಅತಿ ಎಚ್ಚರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಏಕತಾ ಪ್ರತಿಮೆಗೆ ರೈತರಿಂದ ಕುರುಪಿ, ಕುಡ ಗೋಲು ಮತ್ತಿತರ ಕಬ್ಬಿಣದ ಕೃಷಿ ಉಪಕಣಗಳ ಗುಜರಿ ವಸ್ತುಗಳನ್ನು ಸಂಗ್ರಹಿಸಲಾಗುವುದು’ ಎಂದು ಮಾಜಿ ಸಚಿವ, ಲೋಹ ಸಂಗ್ರಹಣಾ ಸಮಿತಿ ರಾಜ್ಯ ಘಟಕದ ಸಂಚಾಲಕ ಮುರುಗೇಶ ನಿರಾಣಿ ಹೇಳಿದರು.

ದೇಶದ ಜನತೆಯನ್ನು ಭಾವನಾತ್ಮಕವಾಗಿ ಒಂದುಗೂಡಿಸಲು ಈ ಗುಜರಿ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ. ಲೋಹ ಸಂಗ್ರಹ ಅಭಿ ಯಾನದಲ್ಲಿ ರಾಜ್ಯದ ಎಲ್ಲ ರೈತರ ಮನೆ ಮನೆಗಳಿಗೆ ತೆರಳಿ ಈ ಕೃಷಿ ಪರಿಕರಗಳನ್ನು ಸಂಗ್ರ ಹಿಸಲಾಗುವುದು ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗುಜರಾತ್‌ನ ಬಡೋದರಾ ಬಳಿಯ ಸರ್ದಾರ್‌ ಸರೋವರದಲ್ಲಿ ಪಟೇಲ್‌ ಅವರ 182 ಮೀಟರ್‌ ಎತ್ತರದ ಮೂರ್ತಿ ಸ್ಥಾಪಿಸಲಾ ಗುತ್ತಿದೆ. ಇತ್ತೀಚೆಗೆ ಅದರ ಅಡಿಗಲ್ಲು ನೆರವೇರಿಸ ಲಾಗಿದ್ದು, ನಾಲ್ಕು ವರ್ಷಗಳಲ್ಲಿ ಮೂರ್ತಿ ನಿರ್ಮಾಣ ಪೂರ್ಣಗೊಳಿಸಲಾಗುವುದು. ದುಬೈನಲ್ಲಿ ಜಗತ್ತಿನ ಅತಿ ಎತ್ತರದ ಕಟ್ಟಡ ‘ಬುರ್ಜ್‌ ಖಲೀಪಾ’ ನಿರ್ಮಿಸಿದ ಸಂಸ್ಥೆಗೆ ಈ ಕೆಲಸ  ವಹಿಸಿಕೊಡಲಾಗಿದೆ ಎಂದರು.

ಬರೀ ಪುತ್ಥಳಿಯನ್ನಷ್ಟೇ ಅಲ್ಲಿ ಸ್ಥಾಪಿಸುವುದಿಲ್ಲ. ಬದಲಿಗೆ ಶಿಕ್ಷಣ ಸಂಸ್ಥೆಗಳು, ಎರಡು ವಿಶ್ವವಿದ್ಯಾ ಲಯಗಳು, ಹಿಂದುಳಿದ ಜನಾಂಗಕ್ಕೆ ತರಬೇತಿ ನೀಡುವ ಕೇಂದ್ರಗಳು, ವಿಶ್ವಮಟ್ಟದ ಪ್ರದರ್ಶನ ಕೇಂದ್ರ, ವಿವಿಧ ದರ್ಜೆಯ 100ಕ್ಕೂ ಹೆಚ್ಚು ಹೋಟೆಲ್‌ಗಳು ಅಲ್ಲಿ ಸ್ಥಾಪನೆಯಾಗಲಿವೆ ಎಂದು ತಿಳಿಸಿದರು.

. ವ್ಯವಸಾಯ ಉಪಕರಣಗಳ ಪ್ರದರ್ಶನ ಮತ್ತು ರೈತರಿಗೆ ತರಬೇತಿ ನೀಡಲು ಶ್ರೇಷ್ಠ ಭಾರತ ಭವನ ನಿರ್ಮಿಸಲಾಗುತ್ತಿದೆ. ಈ ಎಲ್ಲ ಯೋಜನೆಗಳಿಗೆ ಒಟ್ಟಾರೆ ₨2,500 ಕೋಟಿ ವೆಚ್ಚವಾಗಲಿದೆ ಎಂದು ಹೇಳಿದರು.

ಭಾರತ ಸ್ವತಂತ್ರವಾಗಿದ್ದರೂ, ದೇಶದಲ್ಲಿದ್ದ 562 ಸಂಸ್ಥಾನಗಳು ವಿಲೀನವಾಗಿರಲಿಲ್ಲ. ಸ್ವತಂತ್ರ ಭಾರತದ ಪ್ರಥಮ ಗೃಹ ಸಚಿವರಾಗಿದ್ದ ವಲ್ಲಭಭಾಯಿ ಪಟೇಲ್‌ ಅವರು 562 ಸಂಸ್ಥಾನಗಳನ್ನು ವಿಲೀನಗೊಳಿಸಿ ದೇಶದ ಏಕತೆಗೆ ಕೊಡುಗೆ ನೀಡಿದ್ದಾರೆ. ಆ ಸ್ಮರಣೆಗಾಗಿ ಈ ಏತಕಾ ಪ್ರತಿಮೆ ನಿರ್ಮಿಸಲಾಗುತ್ತಿದೆ ಎಂದರು.

ಇದೇ 15ರಂದು ದೇಶದ 1,000 ಸ್ಥಳಗಳಲ್ಲಿ ಏಕಕಾಲಕ್ಕೆ 15 ಲಕ್ಷ ಜನ ‘ಏಕತೆಗಾಗಿ ಓಟ’ದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೆ ಈ ಓಟಕ್ಕಾಗಿ ಆನ್‌ಲೈನ್‌ನಲ್ಲಿ 7 ಲಕ್ಷ ಜನ ನೋಂದಾಯಿಸಿ ಕೊಂಡಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರೂ ಈ ಓಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದು, ಈಗಾಗಲೆ 26 ದೇಶಗಳವರು ನೋಂದಣಿ ಮಾಡಿಕೊಂಡಿದ್ದಾರೆ. ಇದು ವಿಶ್ವದಾಖಲೆ ಎಂದು ಹೇಳಿದರು.

ದೇಶದ 5.60 ಲಕ್ಷ ಗ್ರಾಮಗಳಲ್ಲಿ ಪ್ರತಿ ಮನೆಗೆ ಹೋಗಿ ರೈತರು ಬಳಸಿರುವ ಹಾಳಾದ ಕೃಷಿ ಉಪಕರಣಗಳನ್ನು ಪಡೆಯಲಾಗುವುದು. ಅವುಗಳನ್ನು ಸಂಗ್ರಹಿಸಿ, ಕರಗಿಸಿ ಪಂಚ ಲೋಹ ದೊಂದಿಗೆ ಸೇರಿಸಿ ಪ್ರತಿಮೆ ನಿರ್ಮಿಸಲಾಗುವುದು.

ಇದರ ಜೊತೆಗೆ ಪ್ರತಿ ಗ್ರಾಮದಿಂದಲೂ ಮಣ್ಣು, ಗ್ರಾಮ ಪಂಚಾಯಿತಿ ಸದಸ್ಯರ ಹಸ್ತಾಕ್ಷರ ಪಡೆದು ಅದನ್ನು ಶ್ರೇಷ್ಠ ಭಾರತ ಭವನದಲ್ಲಿ ಪ್ರದರ್ಶನಕ್ಕಿಡಲಾಗುವುದು. ಗ್ರಾಮ ಪಂಚಾ ಯಿತಿ ಅಧ್ಯಕ್ಷರಿಂದ ಅವರ ಭಾವಚಿತ್ರ ಪಡೆದು, ಅವರಿಗೆ ಪ್ರಮಾಣ ಪತ್ರವನ್ನೂ ಕಳಿಸಿಕೊಡಲಾ ಗುವುದು. ನಿಬಂಧ ಸ್ಪರ್ಧೆಯನ್ನೂ ಏರ್ಪಡಿಸ ಲಾಗಿದೆ ಎಂದರು.

ಬೆಂಗಳೂರಿನ ಮೋದಿ ಸಮಾವೇಶಕ್ಕೆ ಸಂಗ್ರಹಿಸಿದ್ದ ₨36 ಲಕ್ಷಗಳನ್ನು ಈ ಮೂರ್ತಿ ತಯಾರಿಕೆಗೆ ದೇಣಿಗೆ ನೀಡಲಾಗಿದೆ. ಇದು ಪಕ್ಷಾತೀತ ಕಾರ್ಯಕ್ರಮ. ಎಲ್ಲ ರಾಜಕೀಯ ಪಕ್ಷಗಳವರೂ ಪಾಲ್ಗೊಳ್ಳಬೇಕು ಎಂದು ಕೋರಿದ ನಿರಾಣಿ, ಇತರ ಪಕ್ಷಗಳಲ್ಲಿರುವ ರಾಜ ಕಾರಣಿಗಳ ಮಕ್ಕಳು ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದರು.

ವಿಜಾಪುರದಲ್ಲಿ: ವಿಜಾಪುರದಲ್ಲಿ 15ರಂದು ಬೆಳಿಗ್ಗೆ 8ಕ್ಕೆ ಶಿವಾಜಿ ಚೌಕ್‌ನಿಂದ ಓಟ ಆರಂಭ ಗೊಂಡು, ಸಿದ್ಧೇಶ್ವರ ದೇವಸ್ಥಾನದ ಮೂಲಕ ಅಂಬೇಡ್ಕರ್‌ ಚೌಕ್‌ನಲ್ಲಿ ಕೊನೆಗೊಳ್ಳಲಿದೆ. ನಂತರ ಸಿದ್ಧೇಶ್ವರ ಶಿವಾನುಭವ ಮಂಟಪದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ ಎಂದು ಲೋಹ ಸಂಗ್ರಹಣಾ ಸಮಿತಿಯ ಜಿಲ್ಲಾ ಸಂಚಾಲಕ ರವಿಕಾಂತ ಬಗಲಿ ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಕೆ. ಬೆಳ್ಳುಬ್ಬಿ, ಜಿಲ್ಲಾ ಸಮಿತಿಯ ದಯಾಸಾಗರ ಪಾಟೀಲ, ಅಶೋಕ ಅಲ್ಲಾಪುರ, ಹಣಮಂತ ಬಿರಾದಾರ, ಪ್ರಕಾಶ ಅಕ್ಕಲಕೋಟೆ, ಅಶೋಕ ನ್ಯಾಮಗೊಂಡ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT