ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣ ಅಭಿವೃದ್ಧಿಗೆ ಅನುದಾನ: ಮಹದೇವಪ್ರಸಾದ್

Last Updated 4 ಜುಲೈ 2012, 8:10 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಮಾದರಿ ಪಟ್ಟಣವ ನ್ನಾಗಿಸಲು ಬೇಕಾದ ಎಲ್ಲಾ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಚ್.ಎಸ್. ಮಹದೇವ ಪ್ರಸಾದ್ ಸೋಮವಾರ ಹೇಳಿದರು.

ಪಟ್ಟಣದ 20ನೇ ವಾರ್ಡಿನ ಪೌರ ಕಾರ್ಮಿಕರ ಸಮುದಾಯ ಭವನ ಕಾಮಗಾರಿ ಗುದ್ದಲಿಪೂಜೆ ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕಿನಾದ್ಯಂತ 62 ಅಂಬೇಡ್ಕರ್ ಸಮುದಾಯ ಭವನ ಗಳನ್ನು ನಿರ್ಮಿಸಲಾಗಿದೆ. ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಭರವಸೆ ನೀಡಿದರು.

ಪಟ್ಟಣದ ಜನತೆಗೆ ಅಗತ್ಯವಾಗಿ ಬೇಕಾದ ನಿವೇಶನ, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ಒಳ ಚರಂಡಿ ವ್ಯವಸ್ಥೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶೇಕಡ 80 ರಷ್ಟು ಒಳ ಚರಂಡಿ ಕಾಮಗಾರಿ ಮುಗಿದಿದ್ದು ಅತಿ ಶೀಘ್ರದಲ್ಲಿ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಪೌರ ಕಾರ್ಮಿಕರಿಗಾಗಿ ಒಂದು ಸಮುದಾಯ ಭವನವನ್ನು 2010- 11, 11-12 ಹಾಗೂ 12-13ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ 15 ಲಕ್ಷ ಅನುದಾನದಲ್ಲಿ ನಿರ್ಮಿಸ ಲಾಗುವುದು ಎಂದರು.

ಪಟ್ಟಣಕ್ಕೆ ಸರಬರಾಜುಗುತ್ತಿರುವ ಕಬಿನಿ ಕುಡಿಯುವ ನೀರಿನ ಯೋಜನೆ ಯಶಸ್ವಿಯಾಗಿದ್ದು, ಪ್ರಸ್ತುತ ಪೈಪ್‌ಲೈನ್ ಪದೇ ಪದೇ ದುರಸ್ತಿಗೆ ಬರುತ್ತಿರುವುದರಿಂದ ಪಟ್ಟಣಕ್ಕೆ ಪ್ರತ್ಯೇಕವಾಗಿ ಪೈಪ್‌ಲೈನ್ ಅಳವಡಿ ಸುವ ಸಲುವಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಹಂಗಳ ಮತ್ತು ಮಾರ್ಗ ಮಧ್ಯದ ಹಳ್ಳಿಗಳಿಗೆ ಕಬಿನಿ ಕುಡಿಯುವ ನೀರನ್ನು ಆಗಸ್ಟ್ ಅಂತ್ಯಕ್ಕೆ ನೀಡಲಾಗುವುದು ಎಂದು ಹೇಳಿದರು.

ಪಟ್ಟಣದ ಕೆ.ಎಸ್. ನಾಗರತ್ನಮ್ಮ ಬಡಾವಣೆ, ಬಸವೇಶ್ವರ ನಗರ, ಹೊಸೂರು ಮುಖ್ಯ ರಸ್ತೆಯಲ್ಲಿ ತಲಾ 3.80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿದರು.

ಪುರಸಭಾಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷ ಸಯ್ಯದ್ ದಸ್ತಗಿರ್, ತಾಲ್ಲೂಕು ಪಂಚಾಯಿತಿ ಸದಸ್ಯ ಕನ್ನೇಗಾಲ ಸ್ವಾಮಿ, ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಲೋಕೇಶ್, ಪುರಸಭೆ ಮಾಜಿ ಅಧ್ಯಕ್ಷೆ ಎನ್. ಮಂಜುಳ, ಮಾಜಿ ಉಪಾಧ್ಯಕ್ಷ ಜಿ.ಎಲ್. ರಾಜು, ಎಸ್. ರಾಜಶೇಖರ್, ಖಯಾಮುದ್ದಿನ್, ಪುರ ಸಭಾ ಸದಸ್ಯರುಗಳಾದ ವಿ.ಜೆ. ಚಂದ್ರಶೇಖರ್, ಭಾಗ್ಯಮ್ಮ, ಮೋಹನ್‌ಕುಮಾರ್, ಲತಾರಾಜಶೇಖರಜತ್ತಿ, ರಾಣಿ ಲಕ್ಷ್ಮಿ ದೇವಿ, ಮುಖ್ಯಾಧಿಕಾರಿ ಕರಿಬಸವಯ್ಯ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT