ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣದ ಶುಚಿತ್ವಕ್ಕೆ ಎಲ್ಲರ ಸಹಕಾರ ಅಗತ್ಯ

ಪೌರಕಾರ್ಮಿಕರಿಗೆ ಹೃದಯಸ್ಪರ್ಶಿ ಸನ್ಮಾನ
Last Updated 24 ಸೆಪ್ಟೆಂಬರ್ 2013, 8:59 IST
ಅಕ್ಷರ ಗಾತ್ರ

ಗೌರಿಬಿದನೂರು: ಪಟ್ಟಣವನ್ನು ಶುಚಿ­ಯಾಗಿಟ್ಟು­ಕೊಳ್ಳುವುದು ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ನೋಡಿ­ಕೊಳ್ಳು­ವುದು ಬರೀ ಪುರಸಭೆ ಕಾರ್ಮಿ­ಕರ ಕರ್ತವ್ಯವಲ್ಲ, ಪಟ್ಟಣದಲ್ಲಿ ವಾಸಿ­ಸುವ ಪ್ರತಿಯೊಬ್ಬರ ಕರ್ತವ್ಯ ಎಂದು ತಹಶೀಲ್ದಾರ್‌ ಡಾ. ಎನ್‌.ಭಾಸ್ಕರ್‌ ತಿಳಿಸಿದರು.

ಪೌರಕಾರ್ಮಿಕರ ದಿನಾಚರಣೆ ಅಂಗ­ವಾಗಿ ಪಟ್ಟಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತಿರೋ, ಅಷ್ಟೇ ಶುದ್ಧವಾಗಿ ಇಡೀ ಪಟ್ಟಣ ಇಟ್ಟುಕೊಳ್ಳಬೇಕು. ಆಗ ಮಾತ್ರವೇ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದರು.

ಸದಾ ಗಲೀಜಿನಲ್ಲಿಯೇ ಕೆಲಸ ಮಾಡುವ ಪೌರಕಾರ್ಮಿಕರು ಅವರು ಹಲವು ಬಾರಿ ಅನಾ­ರೋಗ್ಯಕ್ಕೀಡಾಗುತ್ತಾರೆ.  ಆರೋಗ್ಯ ರಕ್ಷಣೆಗಾಗಿ ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಬೇಕು ಎಂದು ಒತ್ತಿ ಹೇಳಿದರು.

ಪುರಸಭೆ ಸದಸ್ಯ ಜಿ.ಬಾಲಾಜಿ ಮಾತನಾಡಿದರು. ಉತ್ತಮ ಸೇವೆ ಸಲ್ಲಿಸಿದ ಪುರಸಭೆ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೌರಕಾರ್ಮಿಕರ ಮರವಣಿಗೆ ನಡೆಯಿತು.

ಪುರಸಭೆ ಮುಖ್ಯಾಧಿಕಾರಿ ಹನು­ಮಂತೇಗೌಡ, ಪುರಸಭೆ ಸದಸ್ಯರಾದ ವಿ.ರಮೇಶ್‌,ಅನಂತ್‌ರಾಜು, ಮೋಹನ್‌,ಚಿದಾನಂದಗುಪ್ತ, ಪುರಸಭೆ ಪೌರಕಾರ್ಮಿಕರ ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ, ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಪುರಸಭೆ ಎಂಜಿನಿಯರ್‌ಗಳಾದ ತಿಮ್ಮರಾಜು, ತ್ಯಾಗರಾಜ್‌, ಕಚೇರಿ ಸಿಬ್ಬಂದಿ ಅಮರ­ನಾರಾಯಣ ಉಪಸ್ಥಿತರಿದ್ದರು.

ಸಾಲ ಪಾವತಿಗೆ ಮನವಿ
ಬಂಗಾರಪೇಟೆ:
ಸಕಾಲಕ್ಕೆ ಸಾಲ ಪಾವತಿಸುವ ಮೂಲಕ ರೈತರು ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹುನ್ಕುಂದ ವೆಂಕಟೇಶ್ ಹೇಳಿದರು. ಪಟ್ಟಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT