ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕ ಕೇಸರೀಕರಣ: ಸಂಶೋಧನಾ ಕಚೇರಿಗೆ ಮುತ್ತಿಗೆ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯ ಸರ್ಕಾರದ ಪಠ್ಯ ಪುಸ್ತಕ ಕೇಸರೀಕರಣಕ್ಕೆ ಸಂಬಂಧಿಸಿದಂತೆ ಫೆ. 23 ರಂದು ಬನಶಂಕರಿಯ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯದ ಕಚೇರಿಗೆ ಮುತ್ತಿಗೆ ಹಾಕಲಾಗುವುದು~ ಎಂದು ಶಿಕ್ಷಣ ಕೋಮುವಾದಿಕರಣ ವಿರೋಧಿ ವೇದಿಕೆಯು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿತು.

`ಕಚೇರಿ ಮುತ್ತಿಗೆಯ ನಂತರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಫೆಬ್ರುವರಿ 28 ರಂದು ರಾಜ್ಯಾದ್ಯಾಂತ ಶಾಲಾ-ಕಾಲೇಜು ಬಂದ್ ನಡೆಸಲು ಕರೆ ನೀಡಲಾಗುವುದು~ ಎಂದು ವೇದಿಕೆಯ ಎನ್. ಅನಂತ್ ನಾಯ್ಕ ಎಚ್ಚರಿಸಿದರು.

`ಪಠ್ಯ ಪುಸ್ತಕಗಳ ಕರಡು ಪ್ರತಿಯನ್ನು ಈ ಕೂಡಲೇ ಹಿಂತೆಗೆದುಕೊಳ್ಳಬೇಕು. ಇದರ ನೈತಿಕ ಹೊಣೆ ಹೊತ್ತು ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು~ ಎಂದು ವೇದಿಕೆಯ ವೆಂಕಟೇಶ ಗೌಡ ಹೇಳಿದರು.

`ಅಖಿಲ ಭಾರತ ವಿದ್ಯಾರ್ಥಿ ಪರಿಷತ್  ತಾನು ವಿದ್ಯಾರ್ಥಿಗಳ ಸಂಘಟನೆ. ಅನ್ಯಾಯವನ್ನು ಕಂಡು ಸಹಿಸುವುದಿಲ್ಲ ಎಂದು ಘೋಷಿಸುತ್ತದೆ. ಆದರೆ, ಸದನದಲ್ಲಿ ನಡೆದ ಬ್ಲೂ ಫಿಲಂ ಸಿಡಿಗೆ ಸಂಬಂಧಿಸಿದಂತೆ ಒಂದು ಚಕಾರವನ್ನು ಮಾತಾಡಿಲ್ಲ. ಇದು ಆ ಸಂಘಟನೆಯ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ~ ಎಂದರು.

ಗೋಷ್ಠಿಯಲ್ಲಿ ವೇದಿಕೆಯ ಬಿ.ರಾಜಶೇಖರಮೂರ್ತಿ, ರಾಜ ಗೋಪಾಲ್, ಅಣ್ಣೇಗೌಡ, ಸರ್ದಾರ್ ಮಹ್ಮದ್ ಖುರೇಷಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT