ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರದಲ್ಲಿ ಸಿರಿಧಾನ್ಯ ವಿತರಿಸಿ

Last Updated 17 ಅಕ್ಟೋಬರ್ 2011, 5:40 IST
ಅಕ್ಷರ ಗಾತ್ರ

ಧಾರವಾಡ: `ಪಡಿತರ ಆಹಾರಧಾನ್ಯ ವಿತರಣೆಯಲ್ಲಿ ಸಿರಿಧಾನ್ಯಗಳನ್ನು ಮುಖ್ಯ ಆಹಾರವನ್ನಾಗಿ ಸೇರಿಸುವ ಮೂಲಕ ವಿತರಣೆ ಮಾಡಬೇಕು~ ಎಂದು ರಾಷ್ಟ್ರೀಯ ಸಿರಿಧಾನ್ಯ ಜಾಲದ ಸಂಚಾಲಕ ಪಿ.ವಿ.ಸತೀಶ ಹೇಳಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಆಯೋಜಿಸಿರುವ ಸಿರಿ ಧಾನ್ಯ ಬೆಳೆಗಾರರ ರಾಷ್ಟ್ರೀಯ ಸಮಾ ವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆಹಾರ ಭದ್ರತೆ ಮಸೂದೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಆಹಾರ ಭದ್ರತೆ ಒದಗಿಸುವ ಜೊತೆಗೆ ಆಯಾ ರಾಜ್ಯಗಳ ಪೌಷ್ಟಿಕ ಆಹಾರಗಳಿಗೂ ಸರ್ಕಾರ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಸಿರಿಧಾನ್ಯಗಳನ್ನು ಮುಖ್ಯವಾಹಿನಿಗೆ ತರಬೇಕು. ಜಗತ್ತಿನಲ್ಲಿ ಹವಾಮಾನ ವೈಪರೀತ್ಯದಿಂದ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ. ಸಿರಿ ಧಾನ್ಯ ಗಳನ್ನು ಮಾತ್ರ ಎಲ್ಲ ವಾತಾವರಣ ದಲ್ಲಿಯೂ ಬೆಳೆಯ ಬಹುದು. ಇದನ್ನು ರೋಗಿಗಳ ಆಹಾರ ಎಂದು ಪರಿಗ ಣಿಸದೇ ರಾಷ್ಟ್ರ ದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ರೈತರು, ಸರ್ಕಾರ ಮತ್ತು ಜನತೆ ಒಗ್ಗೂಡಿ ಉತ್ತೇಜಿಸಬೇಕು ಎಂದು ಹೇಳಿದರು.

ಡಾ. ರಮಾ ನಾಯಕ್ ಮಾತನಾಡಿ, ಜಗತ್ತಿನಲ್ಲಿ ಜನರ ಹೊಟ್ಟೆಯನ್ನು ಹೇಗೆ ತುಂಬಿಸಬೇಕು ಎನ್ನುವುದು ಯಕ್ಷಪ್ರಶ್ನೆ ಯಾಗಿದೆ. ಕೇವಲ ಹಸಿದ ಹೊಟ್ಟೆ ಗಳನ್ನು ತುಂಬಿಸಿದರೆ ಸಾಲದು, ಪೌಷ್ಟಿಕ ಆಹಾರ ನೀಡುವ ಅಗತ್ಯವಿದೆ. ಸಿರಿ ಧಾನ್ಯಗಳಿಂದ ಮಾತ್ರ ಇದು ಸಾಧ್ಯ. ಕೃಷಿ ವಿವಿಯಲ್ಲಿ 1986ರಿಂದ ಸಿರಿ ಧಾನ್ಯಗಳ ಪ್ರದೇಶಗಳನ್ನು ಗುರುತಿಸಿ ಅಲ್ಲಿಯ ಜನರ ಸ್ವಾಸ್ಥ್ಯವನ್ನು ಅವ ಲೋಕಿಸಲಾಗಿದೆ. ಬೇರೆ ಪ್ರದೇಶ ಗಳಲ್ಲೂ ಸಿರಿಧಾನ್ಯಗಳನ್ನು ಬೆಳೆಯುವ ಬಗ್ಗೆ ಸಂಶೋಧನೆ ನಡೆಸುತ್ತಿದೆ ಎಂದರು.

ಡಾ. ಪ್ರಕಾಶ ಭಟ್ ಮಾತನಾಡಿ, ಸಿರಿ ಧಾನ್ಯ ಹಿಂದಿನ ತಲೆಮಾರುಗಳಿಂದ ಬೆಳೆದು ಬಂದ ಆಹಾರ. ಆದರೆ ಜನರ ಹೊಟ್ಟೆ ತುಂಬಲು ರಾಗಿ, ನವಣೆ, ಸಜ್ಜೆ ಗಳನ್ನು ಬಿಟ್ಟು ಗೋಧಿ, ಜೋಳಗಳಿಗೆ ಮೊರೆ ಹೋಗಿರುವುದರಿಂದ ಕೃಷಿ ಯಲ್ಲಿನ ಮಹ ತ್ವದ ಕೊಂಡಿ ಕಳ ಚಿದಂತಾಗಿದೆ. ವೈದ್ಯರು, ವಿಜ್ಞಾನಿಗಳ ಪ್ರಕಾರ ಸಿರಿಧಾನ್ಯಗಳಿಂದ ಮಾತ್ರ ಪೌಷ್ಟಿಕತೆ ದೊರೆಯಲು ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ರಾಜ್ಯ ಗಳಿಂದ ಆಗಮಿಸಿದ್ದ 16 ಮಂದಿ ಸಿರಿ ಧಾನ್ಯ ಬೆಳೆಗಾರರಿಗೆ ಮಿಲೆಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಸಂಜೀವ ಕುಲಕರ್ಣಿ, ವಾಣಿ ಪುರೋಹಿತ ಉಪಸ್ಥಿ ತರಿದ್ದರು. ಡಾ. ಎಲ್.ಕೃಷ್ಣ ನಾಯಕ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT