ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ

`ಪ್ರಜಾವಾಣಿ'ಯ 10 ಪತ್ರಕರ್ತರು ಸೇರಿ 42 ಮಂದಿ ಆಯ್ಕೆ
Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2009, 2010ನೇ ಸಾಲಿನ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, `ಪ್ರಜಾವಾಣಿ'ಯ ಹತ್ತು ಪತ್ರಕರ್ತರು ಸೇರಿದಂತೆ 42 ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗದಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ವಿಶೇಷ ಪ್ರಶಸ್ತಿಗಳು:
ಪಿ.ರಾಮಯ್ಯ ಸ್ಮಾರಕ ಪ್ರಶಸ್ತಿ: ಚಿತ್ರದುರ್ಗದ ಎಚ್.ಕೆ.ಮುರುಗೇಶ್, `ಸುಧಾ' ವಾರಪತ್ರಿಕೆಯ ಸುದ್ದಿ ಸಂಪಾದಕ ಗುಡಿಹಳ್ಳಿ ನಾಗರಾಜ್.

ಯಶೋದಮ್ಮ ಜಿ.ನಾರಾಯಣ ಪ್ರಶಸ್ತಿ: ಆರ್.ಪಿ.ವೆಂಕಟೇಶಮೂರ್ತಿ, ಕೆ.ವಿ.ವಾಸು ಕಡೂರು.

ಡಿ.ವಿ.ಜಿ.ಪ್ರಶಸ್ತಿ: ಗಂಗಾಧರ ನಾಯಕ್, ವೆಂಕಟ ಸಿಂಗ್. 

ಬದರೀನಾಥ್ ಹೊಂಬಾಳೆ ಪ್ರಶಸ್ತಿ: ಎಚ್.ಕೆ.ಲಕ್ಷ್ಮಣ್, ಕೆ.ಎಂ.ಕಳ್ಳೀಗುಡ್ಡ.

ಕಿಡಿ ಶೇಷಪ್ಪ ಪ್ರಶಸ್ತಿ: ಮಂಜುನಾಥ್, ಬಿ.ಶಿವಲಿಂಗಪ್ಪ.

ಅಪ್ಪಾಜಿ ಗೌಡ ಸ್ಮಾರಕ ಪ್ರಶಸ್ತಿ: ಕೆ. ಗಿರೀಶ್, ಚೇತನ್ ನಾಡಿಗೇರ್.

ಉದಯೋನ್ಮುಖ ಪತ್ರಕರ್ತರ ಪ್ರಶಸ್ತಿ:
ಜಿ.ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ)
: ಸಿದ್ದಯ್ಯ ಹಿರೇಮಠ (ಪ್ರಜಾವಾಣಿ, ಬಳ್ಳಾರಿ), ಮಾಡಾಳ ಶಿವಲಿಂಗಪ್ಪ (ಸಂಯುಕ್ತ ಕರ್ನಾಟಕ, ಅರಸೀಕೆರೆ).

ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ): ಎಸ್.ಮಹೇಶ್ (ಹೊಸದಿಂಗತ, ಸೋಮವಾರಪೇಟೆ), ಕೆ.ಶಶಿಧರ್ (ಆಂದೋಲನ, ಮೈಸೂರು).

ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿಗೆ): ಕೆ.ಆರ್.ಪ್ರಕಾಶ್ (ಸಂಯುಕ್ತ ಕರ್ನಾಟಕ, ಶಿರಸಿ), ಕೆ.ನರಸಿಂಹಮೂರ್ತಿ (ಪ್ರಜಾವಾಣಿ, ಕೋಲಾರ).

ಬಿ.ಎಸ್.ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿಗೆ): ವಿಜಯ್ ಮಲಗಿಹಾಳ (ಉದಯವಾಣಿ, ಬೆಂಗಳೂರು), ಎಚ್.ಡಿ.ಗುರುಪ್ರಸಾದ್ (ಕನ್ನಡಪ್ರಭ, ಹೊಳೆನರಸೀಪುರ).

ಕೆ.ಎ.ನೆಟ್ಟಕಲ್ಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿಗೆ): ಮೈಲಾರಲಿಂಗ ದಿಂಡಲಕೊಪ್ಪ (ವಿಜಯ ಕರ್ನಾಟಕ, ಬೆಂಗಳೂರು), ರಾಘವೇಂದ್ರ ಗಣಪತಿ (ವಿಜಯವಾಣಿ, ಬೆಂಗಳೂರು).

ಖಾದಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ವಿಮರ್ಶಾತ್ಮಕ ಲೇಖನ): ಅಜ್ಜಮಾಡ ರಮೇಶ್ ಕುಟ್ಟಪ್ಪ (ವಿಜಯ ಕರ್ನಾಟಕ, ಮಡಿಕೇರಿ), ಉಮಾ ಅನಂತ್ (ಸುಧಾ, ಬೆಂಗಳೂರು).

ಮಂಗಳ ಎಂ.ಸಿ.ವರ್ಗೀಸ್ ಪ್ರಶಸ್ತಿ (ವಾರಪತ್ರಿಕೆಯಲ್ಲಿ ಪ್ರಕಟವಾಗುವ ಅತ್ಯುತ್ತಮ ಚಿತ್ರಲೇಖನಕ್ಕೆ): ಸುಮನ ಲಕ್ಷ್ಮೀಶ್ (ವಿಜಯವಾಣಿ, ಬೆಂಗಳೂರು), ಬಸವರಾಜ್ ಹವಾಲ್ದಾರ್ (ಪ್ರಜಾವಾಣಿ, ಮಂಡ್ಯ).

ಆರ್.ಎಲ್.ವಾಸುದೇವ ರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ): ಡಾ.ಶಿವಕುಮಾರ್ ಕಣಸೋಗಿ (ಪ್ರಜಾವಾಣಿ, ಹುಬ್ಬಳ್ಳಿ), ಜಾನೆಕೆರೆ ಪರಮೇಶ್ (ಪ್ರಜಾವಾಣಿ, ಸಕಲೇಶಪುರ).

ಆರ್.ಎಲ್.ವಾಸುದೇವ ರಾವ್ ಪ್ರಶಸ್ತಿ (ವನ್ಯಪ್ರಾಣಿಗಳ ಕುರಿತ ಅತ್ಯುತ್ತಮ ಲೇಖನಕ್ಕೆ): ಉಮೇಶ್ ಕುಮಾರ್ ಚಿಕ್ಕಮಗಳೂರು, ಲೋಕೇಶ್ ಸಾಗರ್(ವಿಜಯ ಕರ್ನಾಟಕ).

ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ-ಗತಿ ಕುರಿತ ಅತ್ಯುತ್ತಮ ವರದಿಗೆ): ಸಾವಿತ್ರಿ ಮುಜಮದಾರ್ (ಮಹಿಳಾ ಲೋಕ, ಕೊಪ್ಪಳ), ರಾಜೇಶ್ ರೈ ಚಟ್ಲ (ಪ್ರಜಾವಾಣಿ, ಹುಬ್ಬಳ್ಳಿ).

ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನಜೀವನ ಕುರಿತ ಅತ್ಯುತ್ತಮ ವರದಿಗೆ): ನಾಗರಾಜ ಕಿರಣಗಿ ( ವಿಜಯವಾಣಿ, ಹುಬ್ಬಳ್ಳಿ), ಸೀತಾರಾಂ (ಜನಮಿತ್ರ, ಹಾಸನ), ದೀಪಕ್ ಸಾಗರ್ ಶಿವಮೊಗ್ಗ.

ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭಿವೃದ್ಧಿ ಕುರಿತ ಅತ್ಯುತ್ತಮ ವರದಿಗೆ): ಸೋಮಶೇಖರ ಗಾಂಧಿ (ಸಂಜೆ ಸಮಾಚಾರ್, ಬೆಂಗಳೂರು), ಎಚ್.ಬಿ.ಪುಣ್ಯವತಿ (ವಿಜಯ ಕರ್ನಾಟಕ, ಬೆಂಗಳೂರು).

ಮಂಡಿಬೆಲೆ ರಾಜಣ್ಣ ಪ್ರಶಸ್ತಿ (ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ): ಭಾನುಪ್ರಸಾದ್ ಚಂದ್ರ (ದಿ ವೀಕ್, ಬೆಂಗಳೂರು), ಎಂ.ಆರ್.ಮಂಜುನಾಥ್ (ಪ್ರಜಾವಾಣಿ, ಹುಬ್ಬಳ್ಳಿ).

ಯಜಮಾನ್ ಟಿ.ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಕೃಷಿ ವರದಿಗೆ): ಗಾಣಧಾಳು ಶ್ರೀಕಂಠ (ಪ್ರಜಾವಾಣಿ, ಬೆಂಗಳೂರು), ಭಾರತಿ ಹೆಗಡೆ (ವಿಜಯವಾಣಿ, ಬೆಂಗಳೂರು).

ಹಾಸ್ಯಚಕ್ರವರ್ತಿ ನಾಡಿಗೇರ ಕೃಷ್ಣರಾಯ ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ವಿಡಂಬನಾತ್ಮಕ ಲೇಖನಕ್ಕೆ): ಕೆ.ವಿ.ಪ್ರಭಾಕರ್ (ಕನ್ನಡ ಪ್ರಭ, ಬೆಂಗಳೂರು), ಸುಬ್ರಹ್ಮಣ್ಯ ಬೆಂಗಳೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT