ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕಾ ಸ್ವಾತಂತ್ರ್ಯದ ಬಾವುಟ

Last Updated 16 ಜೂನ್ 2012, 19:30 IST
ಅಕ್ಷರ ಗಾತ್ರ

1953ರಲ್ಲಿ ರಾಜ್ಯದ ವಿಧಾನಪರಿಷತ್ತಿನಲ್ಲಿ ನಡೆದ ಸದನದ ಗೌರವ, ಘನತೆಗಳನ್ನು ಹಾಗೂ ಪತ್ರಿಕಾ ಸ್ವಾತಂತ್ರ್ಯದ ಘನತೆ ಗೌರವಗಳನ್ನು ಎತ್ತಿ ಹಿಡಿಯಲು ನಡೆದ ಪ್ರಸಂಗವೊಂದನ್ನು ಸ್ಮರಿಸಬಯಸುತ್ತೇನೆ. ಆ ಕಾಲದಲ್ಲಿ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ `ಸತ್ಯ~ ಎಂಬ ಪತ್ರಿಕೆಯೊಂದರಲ್ಲಿ ಲೇಖನವೊಂದು ಪ್ರಕಟವಾಯಿತು. ಈ ಲೇಖನವನ್ನು `ಡೆಕ್ಕನ್ ಹೆರಾಲ್ಡ್~ ಪತ್ರಿಕೆ ಪುನರ್ ಮುದ್ರಿಸಿತು.
 
ಈ ಲೇಖನದ ವಿಚಾರ ವಿಧಾನಪರಿಷತ್ತಿನ ಸಭೆಯಲ್ಲಿ ಆಕ್ಷೇಪಣೆಗೆ ಗುರಿಯಾಯಿತು. ಪರಿಣಾಮವಾಗಿ ವಿಷಯವನ್ನು ವಿಧಾನಪರಿಷತ್ತಿನ ಹಕ್ಕು ಬಾಧ್ಯತಾ ಸಮಿತಿಗೆ ಕಳುಹಿಸಲಾಯಿತು. ಹಕ್ಕುಬಾಧ್ಯತಾ ಸಮಿತಿ ಈ ವಿಷಯವನ್ನು ಪರಿಶೀಲಿಸಿ, ಸಂಬಂಧಪಟ್ಟವರ ಸಮಜಾಯಿಷಿ ಕೇಳಿ,

ಲೇಖನವನ್ನು ಪ್ರಕಟಣೆ ಮಾಡಿ ಸಭೆಯ ಗೌರವಕ್ಕೆ ಅವಮಾನ ಉಂಟುಮಾಡಿದ್ದಾರೆಂದು ತೀರ್ಮಾನಕ್ಕೆ ಬಂದು, ತಪ್ಪಿತಸ್ಥರನ್ನು ಸಭೆಗೆ ಕರೆಸಿ ವಾಗ್ದಂಡನೆ ವಿಧಿಸಬೇಕೆಂಬ ಶಿಫಾರಸು ಮಾಡಿತು. ವಿಧಾನಪರಿಷತ್ತು ಹಕ್ಕು ಬಾಧ್ಯತಾ ಸಮಿತಿಯ ಶಿಫಾರಸನ್ನು ಅಂಗೀಕರಿಸಿತು.

ಈ ತೀರ್ಮಾನವನ್ನು ಅನುಸರಿಸಿ `ಸತ್ಯ~ ಪತ್ರಿಕೆಯ ಸಂಪಾದಕರು ಸಭೆಗೆ ಹಾಜರಾಗಿ ಲೇಖನ ಪ್ರಕಟಿಸಿದ್ದಕ್ಕಾಗಿ ವಿಷಾದವನ್ನು ವ್ಯಕ್ತಪಡಿಸುತ್ತಾರೆ. ಈ ಪ್ರಕರಣ ನಡೆದ ಕಾಲದಲ್ಲಿ ಪ್ರಸಿದ್ಧ ಪತ್ರಕರ್ತ ಪೋತನ್ ಜೋಸೆಫ್ ಅವರು `ಡೆಕ್ಕನ್ ಹೆರಾಲ್ಡ್~ ಸಂಪಾದಕರಾಗಿದ್ದರು.

ಅವರು ವಿಧಾನಪರಿಷತ್ತಿನ ಮುಂದೆ ಹಾಜರಾಗಿ, ತಾವು ಪ್ರಕಟಿಸಿರುವುದಾದರೂ ಒಬ್ಬರು ಪ್ರಶ್ನೆಯೊಂದಕ್ಕೆ ಕೊಟ್ಟ ಉತ್ತರದ ಪ್ರಕಟಣೆ ಎಂದು ಭಾವಿಸಬೇಕೆಂದೂ ತಾವು ಸದನಕ್ಕೆ ಅವಮಾನ ಮಾಡಿಲ್ಲವೆಂದೂ ನಿವೇದಿಸಿಕೊಳ್ಳುತ್ತಾರೆಯೇ ವಿನಾ ವಿಷಾದ ವ್ಯಕ್ತಪಡಿಸುವುದಿಲ್ಲ.
 
ಪೋತನ್ ಜೋಸೆಫ್ ಅವರು ಪತ್ರಿಕಾ ಸ್ವಾತಂತ್ರ್ಯದ ಗೌರವ-ಘನತೆಗಳನ್ನು ಎತ್ತಿಹಿಡಿದು ವಿಷಾದ ವ್ಯಕ್ತಪಡಿಸದೆ, ವಿಧಾನಪರಿಷತ್ತಿನ ವಾಗ್ದಂಡನೆ ಶಿಕ್ಷೆಯನ್ನು ಆಗಿನ ಸಭಾಪತಿ ಕೆ.ಟಿ. ಭಾಷ್ಯಂ ಅವರಿಂದ ಸ್ವೀಕರಿಸುತ್ತಾರೆ.

ಸಂಪಾದಕ ಪೋತನ್ ಜೋಸೆಫ್ ಅವರು, ತಮ್ಮ ನಡತೆಯನ್ನು ಸಮರ್ಥಿಸಿಕೊಂಡು ನೀಡಿದ ವಿವರಣೆಯ ಪ್ರಮುಖ ಭಾಗ ಹೀಗಿದೆ.

As for the suggestion that the status and dignity of the people’s representatives were sought to be discredited, I submit that under the constitution and the sanction of Fundamental Rights, I have the liberty of saying in print that Legislature, having in my opinion, lost the confidence of the people, should be dissolved with a view to fresh elections.
 
Nevertheless I shall not, in that eventuality, be chargeable with any action either in respect of privilege or common law, such being the conventions of democracy consistent with our Constitution.I have not offended against the dignity of this house and I claim to be absolved.

ವಿಧಾನಪರಿಷತ್ತು `ಸತ್ಯ~ ಹಾಗೂ `ಡೆಕ್ಕನ್ ಹೆರಾಲ್ಡ್~ ಪತ್ರಿಕೆಗಳ ನಡತೆಯ ಬಗ್ಗೆ ತನ್ನ ವಿಚಾರ ವಿವೇಚನೆಯಲ್ಲಿ ಸಭೆಗೆ ಅವಮಾನ ಮಾಡಿದ್ದಾರೆಂದು ತೀರ್ಮಾನಕ್ಕೆ ಬಂತು. ಇದು ವಿಧಾನಪರಿಷತ್ತಿನ ಸ್ವಾತಂತ್ರ್ಯ ಹಾಗೂ ಹಕ್ಕಿಗೆ ಸಂಬಂಧಪಟ್ಟ ವಿಷಯ. ಹಾಗೂ ಅದು ಸದನದ ತೀರ್ಮಾನ.

ಸಂಪಾದಕ ಪೋತನ್ ಜೋಸೆಫ್ ಅವರು, ನೀಡಿದ ವಿವರಣೆಯಾದರೂ ಏನನ್ನು ಹೇಳುತ್ತದೆ. ಅವರು ಯಾವ ಮೌಲ್ಯವನ್ನು ಪ್ರತಿಪಾದಿಸುತ್ತಾರೆ?ವಿಧಾನಮಂಡಲ ನನ್ನ ಅಭಿಪ್ರಾಯದ ರೀತ್ಯ ಜನತೆಯ ವಿಶ್ವಾಸ ಕಳೆದುಕೊಂಡಿರುವ ಕಾರಣ, ಹೊಸ ಚುನಾವಣೆ ನಡೆಸಲು ಅದನ್ನು ವಿಸರ್ಜಿಸಬೇಕು ಎಂದು ಮುದ್ರಿಸಲು ನನಗೆ ಸ್ವಾತಂತ್ರ್ಯವಿದೆ ಎಂಬುದು ಸಂಪಾದಕ ಪೋತನ್ ಜೋಸೆಫ್ ಅವರ ಸಮರ್ಥನೆ.

ಪತ್ರಿಕಾ ಸ್ವಾತಂತ್ರ್ಯದ ಬಾವುಟವನ್ನು ವಿಧಾನಪರಿಷತ್ತಿನಂತಹ ಜನತಾ ಸದನದ ಮುಂದೆ ಎತ್ತರದಲ್ಲಿ ನಿಂತು ಹಾರಿಸಿದ ಈ ಪ್ರಕರಣ ನನ್ನ ದೃಷ್ಟಿಯಲ್ಲಿ ಐತಿಹಾಸಿಕ. ತಪ್ಪು ಮಾಡಿದ್ದೀರಿ ಎಂದು ತೀರ್ಮಾನ ಕೊಟ್ಟಾಗಲೂ ವಿಷಾದ ವ್ಯಕ್ತ ಮಾಡಲು ನಿರಾಕರಿಸಿದ್ದಕ್ಕಾಗಿ ವಿಧಾನಪರಿಷತ್ತಿನ ವಾಗ್ದಂಡನೆ ವಿಧಿಸಿದ್ದು ಹಾಗೂ ಸಂಪಾದಕರೊಬ್ಬರು ಪತ್ರಿಕಾ ಸ್ವಾತಂತ್ರ್ಯವನ್ನು ಪಾಲಿಸಿ ಸಮರ್ಥಿಸಿಕೊಂಡಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯವೈಖರಿಗೆ ಸಂಬಂಧಿಸಿದಂತೆ ಪರಸ್ಪರ ಗೌರವಗಳ ಹಿನ್ನೆಲೆಯಲ್ಲಿ ಶಾಸಕಾಂಗ ಹಾಗೂ ಪತ್ರಿಕಾರಂಗ ತಮ್ಮ ತಮ್ಮ ಅಧಿಕಾರ ಹಾಗೂ ಘನತೆಗಳಿಗೆ ಸಂಬಂಧಿಸಿದಂತೆ ಕೈಗೊಂಡ ತೀರ್ಮಾನಗಳನ್ನು ಅತ್ಯಂತ ಘನತೆಯ ಮಾರ್ಗದಲ್ಲಿ ಕಾರ್ಯರೂಪಕ್ಕೆ ತಂದ ಅಪರೂಪದ ಘಟನೆಯಿದು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT