ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ಗಾತ್ರಕ್ಕೆ ಕುಗ್ಗಿದ ವೈರ್...

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಸಿಲಿಕಾನ್ ಮೂಲವಸ್ತುವನ್ನು ಬಳಸಿ ಒಂದು ಪರಮಾಣುವಿನಷ್ಟು ಎತ್ತರದ ಮತ್ತು ನಾಲ್ಕು ಪರಮಾಣುಗಳಷ್ಟು ಅಗಲದ ವಿಶ್ವದ ಅತ್ಯಂತ ಚಿಕ್ಕ ತಂತಿಗಳನ್ನು ವಿಜ್ಞಾನಿಗಳು ತಯಾರಿಸಿದ್ದಾರೆ.

ನ್ಯೂ ಸೌತ್‌ವೇಲ್ಸ್ ವಿಶ್ವವಿದ್ಯಾಲಯದ ಬೆಂಟ್ ವೆಬರ್ ನೇತೃತ್ವದ ಅಂತರ ರಾಷ್ಟ್ರೀಯ ಸಂಶೋಧಕರ ತಂಡ ಈ ತಂತಿಸೃಷ್ಟಿಸಿದ್ದು, ಇವು ಕೂಡ ತಾಮ್ರದ ತಂತಿಗಳಷ್ಟೇ ಪ್ರಮಾಣದ ವಿದ್ಯುತ್ ಹರಿಸುವ ಸಾಮರ್ಥ್ಯ ಹೊಂದಿವೆ ಎಂದಿದ್ದಾರೆ.

ಒಂದೊಂದು ಪರಮಾಣು ಬಳಸಿ ಲೆಕ್ಕಗಳನ್ನು ಮಾಡುವಂತಹ `ಕ್ವಾಂಟಮ್ ಕಂಪ್ಯೂಟರ್~ಗಳನ್ನು ರೂಪಿಸುವ ಉದ್ದೇಶದಿಂದ ಈ ಸಂಶೋಧನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು ಎಂದು ಪ್ರಧಾನ ಸಂಶೋಧಕ ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಮೈಕಲ್ ಸಿಮ್ಮನ್ಸ್ ಹೇಳಿದ್ದಾರೆ.

`ಪರಮಾಣು ಬಳಸಿ ಟ್ರಾನ್ಸಿಸ್ಟರ್‌ಗಳನ್ನು ಸೃಷ್ಟಿಸುವ ಹಂತದಲ್ಲಿದ್ದೇವೆ. ಆದರೆ ಕ್ವಾಂಟಮ್ ಕಂಪ್ಯೂಟರ್ ರೂಪಿಸಬೇಕಾದರೆ  ಉಪಕರಣದ ಆಂತರಿಕ ತಂತಿಜಾಲ ಸಂಪರ್ಕ, ವಿದ್ಯುನ್ಮಂಡಲ ವ್ಯವಸ್ಥೆಯನ್ನು ಪರಮಾಣು ಅಳತೆಗೆ  ಕುಗ್ಗಿಸುವ ಅಗತ್ಯವಿದೆ~ ಎಂದು ಹೇಳಿದ್ದಾರೆ.

 ಆ ನಿಟ್ಟಿನಲ್ಲಿ ಪರಮಾಣು ಗಾತ್ರದ ತಂತಿಯನ್ನು ತಯಾರಿಸಿರುವುದು ಮಹತ್ವದ ಮೈಲಿಗಲ್ಲಾಗಿದೆ. ಈ ಸಂಶೋಧನೆಯು ಭವಿಷ್ಯದಲ್ಲಿ ನ್ಯಾನೊ ಕಂಪ್ಯೂಟರ್‌ಗಳು ಸೃಷ್ಟಿಗೆ ನೆರವಾಗಲಿದೆ ಎಂಬುದು ತಜ್ಞರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT