ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ರಾಕೆಟ್‌ನಲ್ಲಿ ಮಂಗಳನಲ್ಲಿಗೆ ಮಾನವ?

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಪರಮಾಣು ಶಕ್ತಿಚಾಲಿತ ರಾಕೆಟ್‌ನಲ್ಲಿ ಮನುಷ್ಯನನ್ನು ಮಂಗಳ ಗ್ರಹಕ್ಕೆ ಕಳುಹಿಸಲು ವಿಜ್ಞಾನಿಗಳು ಕೈಗೆತ್ತಿಕೊಂಡಿರುವ ಯೋಜನೆ ಅಂತಿಮ ಹಂತದಲ್ಲಿದೆ.
ಸ್ಥಳೀಯ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ರೆಡ್‌ಮಂಡ್ ಮೂಲದ ಬಾಹ್ಯಾಕಾಶ ನೋದಕ (ಮುನ್ನೂಕುವ) ಕಂಪೆನಿಯ ಜಂಟಿ ಸಹಭಾಗಿತ್ವದಲ್ಲಿ ಪರಮಾಣು ಶಕ್ತಿಯಿಂದ (ಬೈಜಿಕ ಕ್ರಿಯೆ ಮೂಲಕ) ಚಲಿಸುವ ರಾಕೆಟ್ ಅಭಿವೃದ್ಧಿಪಡಿಸಲಾಗುತ್ತಿದೆ.

ಬಾಹ್ಯಾಕಾಶ ಪ್ರಯಾಣ ಸಂದರ್ಭದಲ್ಲಿ ಎದುರಾಗುವ ಅಡೆತಡೆ, ಮಿತಿಮೀರಿದ ಖರ್ಚು ಮತ್ತು ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಗೆ ನಾಸಾ ಹಣಕಾಸಿನ ನೆರವು ಒದಗಿಸಿದೆ.

`ಈಗ ಬಳಸಲಾಗುತ್ತಿರುವ ರಾಕೆಟ್ ಇಂಧನದಿಂದ ಮನುಷ್ಯನನ್ನು ಭೂಮಿಯಾಚೆ ಕಳುಹಿಸಲು ಅಸಾಧ್ಯ' ಎಂದು ಈ ಯೋಜನೆಯ ಪ್ರಮುಖ ಸಂಶೋಧಕ ಜಾನ್ ಸ್ಲಾಫ್ ಹೇಳುತ್ತಾರೆ.

`ಬಾಹ್ಯಾಕಾಶದಲ್ಲಿ ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಪ್ರಯಾಣಿಸಲು ಶಕ್ತಿಶಾಲಿಯಾಗಿರುವಂತಹ ಇಂಧನ ಮೂಲ ತಯಾರಿಸುವುದರ ಬಗ್ಗೆ ಆಶಾವಾದ ಹೊಂದಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

ಕಳೆದ ತಿಂಗಳು ನಡೆದ ವಿಚಾರ ಸಂಕಿರಣದಲ್ಲಿ ಸ್ಲಾಫ್ ಮತ್ತು ಅವರ ತಂಡ ಉದ್ದೇಶಿತ ಮಂಗಳ ಗ್ರಹ ಪ್ರಯಾಣದ ಕುರಿತು ಪ್ರಾಯೋಗಿಕ ವಿಧಾನವನ್ನು ಪ್ರಸ್ತುತಪಡಿಸಿತ್ತು.
ಈಗಿರುವ ತಂತ್ರಜ್ಞಾನದ ಸಹಾಯದಿಂದ ಮನುಷ್ಯ ಮಂಗಳ ಗ್ರಹಕ್ಕೆ ಹೋಗಿ ಬರಲು ಅಂದಾಜು ನಾಲ್ಕು ವರ್ಷ ಹಿಡಿಯಬಹುದು. ಬಾಹ್ಯಾಕಾಶದಲ್ಲಿ ಬಳಸುವ ರಾಸಾಯನಿಕ ರಾಕೆಟ್ ಇಂಧನಕ್ಕೆ ಭಾರಿ ವೆಚ್ಚ ಮಾಡಬೇಕಾಗುತ್ತದೆ. ಕೇವಲ ರಾಕೆಟ್ ಉಡಾವಣೆಗೆ 120 ಕೋಟಿ ಅಮೆರಿಕನ್ ಡಾಲರ್ (ಸುಮಾರು ್ಙ6600 ಕೋಟಿ) ಖರ್ಚು ಬರುತ್ತದೆ ಎಂದು ನಾಸಾ ತಿಳಿಸಿದೆ. ಸ್ಲಾಫ್ ಮತ್ತು ಅವರ ತಂಡದ ಪ್ರಕಾರ, ಪರಮಾಣು ಶಕ್ತಿಚಾಲಿತ ರಾಕೆಟ್‌ನಲ್ಲಿ ಮಂಗಳ ಗ್ರಹವನ್ನು 30 ಮತ್ತು 90 ದಿನಗಳಲ್ಲಿ ಕ್ರಮಿಸಬಹುದು. ಈ ಪ್ರಯಾಣ ಅತ್ಯಂತ ಪ್ರಾಯೋಗಿಕ ಮತ್ತು ಕಡಿಮೆ ಖರ್ಚಿನದ್ದಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT